ಕರ್ನಾಟಕ

karnataka

ETV Bharat / city

ಪರಿಷತ್​ ಚುನಾವಣೆ: ಜೆಡಿಎಸ್ ಬೆಂಬಲದ ಬಗ್ಗೆ ಇಂದು ಅಥವಾ ನಾಳೆ ತಿಳಿಯಲಿದೆ ಎಂದ ಬಿಎಸ್​​ವೈ - ಶಿವಮೊಗ್ಗದಲ್ಲಿ ಬಿ.ಎಸ್.ಯಡಿಯೂರಪ್ಪ ಚುನಾವಣಾ ಪ್ರಚಾರ

ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಎಲ್ಲಿ ಸ್ಪರ್ಧೆ ಮಾಡಿಲ್ಲವೋ, ಅಲ್ಲಿ ಬಿಜೆಪಿಗೆ ಬೆಂಬಲಿಸಿ ಎಂದು ಜೆಡಿಎಸ್ ಪಕ್ಷವನ್ನು ಕೇಳಲಾಗಿದೆ. ಈ ಕುರಿತು ಅವರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಅಧಿಕೃತ ಬೆಂಬಲದ ಕುರಿತು ಇಂದು ಅಥವಾ ನಾಳೆ ತಿಳಿಯಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

Former CM BS Yediyurappa reacts
ಮಾಜಿ ಮುಖ್ಯಂತ್ರಿ ಬಿ.ಎಸ್.ಯಡಿಯೂರಪ್ಪ

By

Published : Nov 27, 2021, 12:39 PM IST

ಶಿವಮೊಗ್ಗ:ವಿಧಾನ ಪರಿಷತ್ ಚುನಾವಣೆ ಅಖಾಡ ರಂಗೇರಿದ್ದು, ಪ್ರಚಾರ ಅಬ್ಬರವೂ ಜೋರಾಗಿದೆ. ಈ ಚುನಾವಣೆಯಲ್ಲಿ ಬಿಜೆಪಿಗೆ ಜೆಡಿಎಸ್ ಬೆಂಬಲ ಸೂಚಿಸುವ ಕುರಿತು ಇಂದು ಅಥವಾ ನಾಳೆ ತಿಳಿಯಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.

ಜೆಡಿಎಸ್ ಮೈತ್ರಿ ಬಗ್ಗೆ ಮಾಜಿ ಸಿಎಂ ಬಿ.ಎಸ್​​ ಯಡಿಯೂರಪ್ಪ ಮಾತನಾಡಿರುವುದು..

ಶಿವಮೊಗ್ಗದಲ್ಲಿ ಬಿಜೆಪಿ ಅಭ್ಯರ್ಥಿ ಪರ ಚುನಾವಣಾ ಪ್ರಚಾರದ ಕಾರ್ಯಕ್ರಮಕ್ಕೂ ಮುನ್ನ ಮಾತನಾಡಿದ ಅವರು, ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಎಲ್ಲಿ ಸ್ಪರ್ಧೆ ಮಾಡಿಲ್ಲವೋ ಅಲ್ಲಿ ಬಿಜೆಪಿಗೆ ಬೆಂಬಲಿಸಿ ಎಂದು ಜೆಡಿಎಸ್ ಪಕ್ಷವನ್ನು ಕೇಳಲಾಗಿದೆ. ಈ ಕುರಿತು ಅವರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಅಧಿಕೃತ ಬೆಂಬಲದ ಕುರಿತು ಇಂದು ಅಥವಾ ನಾಳೆ ತಿಳಿಯಲಿದೆ ಎಂದು ಹೇಳಿದರು.

25 ಸ್ಥಾನಗಳ ಪೈಕಿ 20 ಸ್ಥಾನಗಳಿಗೆ ಬಿಜೆಪಿ ಸ್ಪರ್ಧಿಸಿದೆ. ಇದರಲ್ಲಿ ಕನಿಷ್ಠ 15 ಸ್ಥಾನವನ್ನು ಬಿಜೆಪಿ ಗೆಲ್ಲಲಿದೆ. ಇದರಿಂದ ಬಿಜೆಪಿ ಪಕ್ಷ ಮೇಲ್ಮನೆಯಲ್ಲಿ ಪೂರ್ಣ ಬಹುಮತವನ್ನು ಪಡೆಯಲು ಸಾಧ್ಯವಾಗುತ್ತದೆ ಎಂದರು.

ನಾಳೆ ಸಾಗರ ಹಾಗು ಸೊರಬದಲ್ಲಿ ಪ್ರಚಾರ:

ಇಂದು ಶಿವಮೊಗ್ಗದಲ್ಲಿ ಪ್ರಚಾರ ಮುಗಿಸಿ, ಮಧ್ಯಾಹ್ನ ತೀರ್ಥಹಳ್ಳಿಗೆ ಹೋಗುತ್ತೇನೆ. ನಾಳೆ(ಭಾನುವಾರ) ಸಾಗರ ಹಾಗು ಸೊರಬದಲ್ಲಿ ಪ್ರಚಾರ ನಡೆಸುತ್ತೇನೆ. ನಾಡಿದ್ದು (ಸೋಮವಾರ) ಹೊನ್ನಾಳಿಯಲ್ಲಿ ಪ್ರಚಾರ ನಡೆಸುತ್ತೇನೆ. ನಂತರ ತರೀಕೆರೆಗೆ ಪ್ರಚಾರಕ್ಕೆ ಹೋಗುತ್ತೇನೆ ಎಂದು ಬಿಎಸ್​ವೈ ತಿಳಿಸಿದರು.

ನಿಮ್ಮ ಪ್ರಚಾರಕ್ಕೆ ಪ್ರತಿಕ್ರಿಯೆ ಹೇಗಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಮಾಜಿ ಸಿಎಂ, ಅದನ್ನು ಮಾಧ್ಯಮದವರು ಹೇಳಬೇಕು ಎನ್ನುತ್ತಾ, ಎಲ್ಲಾ ಕಡೆ ಉತ್ತಮ ಪ್ರತಿಕ್ರಿಯೆ ಬಂದಿದೆ ಎಂದರು. ಶಿವಮೊಗ್ಗದ ಅರುಣ್ ಸೇರಿದಂತೆ 15 ಕಡೆ ಗೆಲ್ಲುತ್ತೇವೆ ಎಂದು ಬಿಎಸ್​​ವೈ ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ:ಕೋವಿಡ್​ ಪರಿಸ್ಥಿತಿ.. ಅಧಿಕಾರಿಗಳೊಂದಿಗೆ ಪ್ರಧಾನಿ ಇಂದು ಮಹತ್ವದ ಸಭೆ

ABOUT THE AUTHOR

...view details