ಕರ್ನಾಟಕ

karnataka

ETV Bharat / city

ಅಧಿಕಾರ ಇರಲಿ, ಬಿಡಲಿ, ನಿಮ್ಮ ಕೆಲಸಕ್ಕಾಗಿ 24 ಗಂಟೆ ನಮ್ಮ ಮನೆ ಬಾಗಿಲು ತೆರೆದಿರುತ್ತೆ: ಮಾಜಿ ಸಿಎಂ ಬಿಎಸ್​ವೈ

ಅಧಿಕಾರ ಇರಲಿ, ಬಿಡಲಿ, ನಿಮ್ಮ ಕೆಲಸ ಕಾರ್ಯಗಳಿಗಾಗಿ ದಿನದ 24 ಗಂಟೆ ನಮ್ಮ ಮನೆಯ ಬಾಗಿಲು ತೆರೆದಿರುತ್ತೆ. ಗಣಪತಿ ಹಬ್ಬದ ನಂತರ ರಾಜ್ಯದ ಪ್ರತಿ ಜಿಲ್ಲೆಗೂ ಪ್ರವಾಸ ಮಾಡಿ ಪಕ್ಷವನ್ನು ಸಂಘಟಿಸುತ್ತೇವೆ. ನಮ್ಮ ಪಕ್ಷದ ಶಾಸಕರು ಎಲ್ಲಿ ಇಲ್ಲವೋ ಅಲ್ಲಿ ಶಾಸಕರನ್ನ ಗೆಲ್ಲಿಸುವ ಮೂಲಕ ಬರುವಂತಹ ದಿನಗಳಲ್ಲಿ ಸ್ವತಂತ್ರವಾಗಿ ಪಕ್ಷವನ್ನು ಅಧಿಕಾರಕ್ಕೆ ತರಬೇಕು. ಆಗ ಮಾತ್ರ ಇಷ್ಟು ವರ್ಷ ಹಗಲು - ರಾತ್ರಿ ಕೆಲಸ ಮಾಡಿದ್ದಕ್ಕೆ ಸಾರ್ಥಕವಾಗುತ್ತೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

Former CM BS Yeddyurappa visit to Shivamogga
ಮಾಜಿ ಸಿಎಂ ಬಿಎಸ್​ವೈ

By

Published : Aug 27, 2021, 9:51 PM IST

Updated : Aug 27, 2021, 10:39 PM IST

ಶಿವಮೊಗ್ಗ: ಅಧಿಕಾರ ಇರಲಿ, ಬಿಡಲಿ, ನಿಮ್ಮ ಕೆಲಸ ಕಾರ್ಯಗಳಿಗಾಗಿ ದಿನದ 24 ಗಂಟೆ ನಮ್ಮ ಮನೆಯ ಬಾಗಿಲು ತೆರೆದಿರುತ್ತೆ ಎಂದು ಎಂದು ಕಾರ್ಯಕರ್ತರಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಭಯ ನೀಡಿದ್ದಾರೆ.

ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಶಿವಮೊಗ್ಗಕ್ಕೆ ಆಗಮಿಸಿದ ಅವರು ನಗರದ ವಿನೋಬ ನಗರದಲ್ಲಿರುವ ನಿವಾಸದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಶಿವಮೊಗ್ಗ ಜಿಲ್ಲೆಯ ತಾಲೂಕುಗಳಲ್ಲಿ ಯಾವ ಕೆಲಸ ಆಗಬೇಕು ಎಂದಿದ್ದಾರೆ ಅವೆಲ್ಲವನ್ನೂ ನನ್ನ ಅವಧಿಯಲ್ಲಿ ಮಾಡಿದ್ದೇನೆ. ಶಿವಮೊಗ್ಗ ಜಿಲ್ಲೆ ಮಾದರಿ ನಗರವಾಗಿದೆ. ಇನ್ನೂ ಆರು ತಿಂಗಳಲ್ಲಿ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣ ಆಗಿ ವಿಮಾನ ಓಡಾಡಿದರೆ ಕೈಗಾರಿಕೆಗಳು ಬರುತ್ತವೆ. ಉದ್ಯೋಗ ಅವಕಾಶಗಳು ಸೃಷ್ಟಿ ಆಗುತ್ತವೆ ಎಂದರು.

ಮಾಜಿ ಸಿಎಂ ಬಿಎಸ್​ವೈ

ಗಣಪತಿ ಹಬ್ಬದ ನಂತರ ರಾಜ್ಯದ ಪ್ರತಿ ಜಿಲ್ಲೆಗೂ ಪ್ರವಾಸ ಮಾಡಿ ಪಕ್ಷವನ್ನು ಸಂಘಟಿಸುತ್ತೇವೆ. ನಮ್ಮ ಪಕ್ಷದ ಶಾಸಕರು ಎಲ್ಲಿ ಇಲ್ಲವೋ ಅಲ್ಲಿ ಶಾಸಕರನ್ನ ಗೆಲ್ಲಿಸುವ ಮೂಲಕ ಬರುವಂತಹ ದಿನಗಳಲ್ಲಿ ಸ್ವತಂತ್ರವಾಗಿ ಪಕ್ಷವನ್ನು ಅಧಿಕಾರಕ್ಕೆ ತರಬೇಕು. ಆಗ ಮಾತ್ರ ಇಷ್ಟು ವರ್ಷ ಹಗಲು - ರಾತ್ರಿ ಕೆಲಸ ಮಾಡಿದ್ದಕ್ಕೆ ಸಾರ್ಥಕವಾಗುತ್ತೆ ಎಂದು ಹೇಳಿದರು.

ನಿಮ್ಮ ಯಡಿಯೂರಪ್ಪ ಕೇವಲ ಶಿವಮೊಗ್ಗ ಜಿಲ್ಲೆಯ ಅಭಿವೃದ್ಧಿ ಮಾಡದೇ ರಾಜ್ಯದ ಪ್ರತಿ ಜಿಲ್ಲೆಯ ಅಭಿವೃದ್ಧಿ ಮಾಡಿದ್ದಾರೆ. ಯಾವುದೇ ಧರ್ಮ, ಜಾತಿ, ಭೇದವಿಲ್ಲದೇ ಎಲ್ಲಾ ಧರ್ಮಗಳಿಗೆ ನ್ಯಾಯ ಒದಗಿಸಿದ್ದೇನೆ. ಹಾಗಾಗಿ ಎಲ್ಲರೂ ಸೇರಿ ಪಕ್ಷವನ್ನು ಬಲ ಪಡಿಸಬೇಕಿದೆ. ಮುಖ್ಯಮಂತ್ರಿ ಯಾಗಿ ಬೊಮ್ಮಾಯಿ ಅವರು ಪ್ರಾಮಾಣಿಕ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ಬಿಎಸ್​ವೈ ಜತೆ ಫೋಟೋಗೆ ಮುಗಿಬಿದ್ದ ಮಹಿಳೆಯರು:

ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಮೊದಲ ಬಾರಿಗೆ ಶಿವಮೊಗ್ಗ ಆಗಮಿಸಿದ ಅವರನ್ನು ನೋಡಲು ಪಕ್ಷದ ಮಹಿಳಾ ಕಾರ್ಯಕರ್ತರು ಆಗಮಿಸಿದ್ದರು. ಈ ವೇಳೆ ಯಡಿಯೂರಪ್ಪ ಜೊತೆ ಫೋಟೋ ತೆಗೆಸಿಕೊಳ್ಳಲು ಮುಗಿಬಿದ್ದರು.

ಕಾರ್ಯಕ್ರಮದಲ್ಲಿ ಸಂಸದ ಬಿ.ವೈ.ರಾಘವೇಂದ್ರ , ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಮಹಾನಗರ ಪಾಲಿಕೆ ಮೇಯರ್ ಸುನಿತಾ ಅಣ್ಣಪ್ಪ, ಬಿಜೆಪಿ ಹಿರಿಯ ಮುಖಂಡ ಪದ್ಮನಾಭ ಸೇರಿದಂತೆ ಪಕ್ಷದ ಮುಖಂಡರು ಉಪಸ್ಥಿತರಿದ್ದರು.

ಓದಿ:ತವರಿಗೆ ಬಂದ ಮಾಜಿ ಸಿಎಂಗೆ ಅದ್ಧೂರಿ ಸ್ವಾಗತ: ಪಕ್ಷ ಕಟ್ಟುವುದೇ ಮುಂದಿನ ಗುರಿ ಎಂದ ಬಿಎಸ್​ವೈ

Last Updated : Aug 27, 2021, 10:39 PM IST

ABOUT THE AUTHOR

...view details