ಶಿವಮೊಗ್ಗ : ಪ್ರಚಾರಕ್ಕಾಗಿ ಸಾಹಿತಿ ಭಗವಾನ್ ಅವರ ಮುಖಕ್ಕೆ ಮೀರಾ ರಾಘವೇಂದ್ರ ಮಸಿ ಹಚ್ಚಿದ್ದಾರೆ ಎಂದು ಕಾಂಗ್ರೆಸ್ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಪುಷ್ಟಾ ಅಮರನಾಥ್ ಆರೋಪಿಸಿದರು.
ಪ್ರಚಾರಕ್ಕಾಗಿ ಭಗವಾನ್ ಮುಖಕ್ಕೆ ಮಸಿ ಹಚ್ಚಿದ್ದಾರೆ; ಪುಷ್ಪಾ ಅಮರನಾಥ್ ಕಿಡಿ - ಸಾಹಿತಿ ಭಗವಾನ್ ಮುಖಕ್ಕೆ ಮಸಿ
ಮೀರಾ ಅವರಿಗೆ ದೇಶದ ಮೇಲೆ ಅಷ್ಟೊಂದು ದೇಶ ಪ್ರೇಮ ಇದ್ದರೆ, ದೇಶದಲ್ಲಿ ನಡೆಯುತ್ತಿರುವ ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರ, ದೌರ್ಜನ್ಯಗಳ ಬಗ್ಗೆ ಹೋರಾಟ ಮಾಡುವ ಮೂಲಕ ದೇಶಭಕ್ತಿ ಮೆರೆಯಲಿ ಎಂದು ಪುಷ್ಪಾ ಅಮರನಾಥ್ ಹೇಳಿದರು.

ನಗರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ನ್ಯಾಯಾಲಯದ ಆವರಣದಲ್ಲಿ ಈ ಘಟನೆ ನಡೆದಿರುವುದು ಸರಿಯಲ್ಲ. ಪ್ರಚಾರಕ್ಕಾಗಿ ಸಾಹಿತಿ ಭಗವಾನ್ ಅವರ ಮುಖಕ್ಕೆ ಮೀರಾ ರಾಘವೇಂದ್ರ ಅವರು ಮಸಿ ಹಚ್ಚಿದ್ದಾರೆ. ಇದು ಮಾನವ ಹಕ್ಕುಗಳ ಉಲ್ಲಂಘನೆ. ಘಟನೆ ಕುರಿತು ನ್ಯಾಯಾಲಯ ಗಂಭೀರವಾಗಿ ಪರಿಗಣಿಸುತ್ತದೆ ಎಂದು ಭಾವಿಸುತ್ತೇವೆ ಎಂದರು.
ಮೀರಾ ಅವರಿಗೆ ದೇಶದ ಮೇಲೆ ಅಷ್ಟೊಂದು ಪ್ರೇಮ ಇದ್ದರೆ, ದೇಶದಲ್ಲಿ ನಡೆಯುತ್ತಿರುವ ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರ, ದೌರ್ಜನ್ಯಗಳ ಬಗ್ಗೆ ಹೋರಾಟ ಮಾಡುವ ಮೂಲಕ ದೇಶಭಕ್ತಿ ಮೆರೆಯಲಿ. ಶೃಂಗೇರಿಯಲ್ಲಿ ಯುವತಿಗೆ ಅನ್ಯಾಯವಾದ ಬಗ್ಗೆ ಹೋರಾಟ ಮಾಡಲಿ. ದೇಶದ ಮಹಿಳೆಯರ ಮೇಲಿನ ದೌರ್ಜನ್ಯ ಗಳ ಬಗ್ಗೆ ಹೋರಾಟ ಮಾಡಿ ನ್ಯಾಯ ಒದಗಿಸಿಕೊಡಿ ಎಂದು ಆಹ್ವಾನಿಸಿದರು.