ಶಿವಮೊಗ್ಗ: ಹೋಟೆಲ್ ಮೇಲೆ ದಾಳಿ ನಡೆಸಿ ದಾಖಲೆ ಇಲ್ಲದ 1.30 ಲಕ್ಷ ರೂ.ಗಳನ್ನು ಪ್ಲೈಯಿಂಗ್ ಸ್ಕ್ವಾಡ್ ವಶಪಡಿಸಿಕೊಂಡ ಘಟನೆ ಸಾಗರದಲ್ಲಿ ಕಂಡುಬಂದಿದೆ.
ಸಾಗರ ಪಟ್ಟಣದ ಗ್ರೀನ್ ಎಂಬಸಿ ಹೋಟೆಲ್ನಲ್ಲಿ ಅಕ್ರಮ ಹಣ ಇದೆ ಎಂಬ ಖಚಿತ ಮಾಹಿತಿ ಮೇರೆಗೆ ಆವಿನಹಳ್ಳಿ ಹೋಬಳಿಯ ಪ್ಲೈಯಿಂಗ್ ಸ್ಕ್ವಾಡ್ ಸುರೇಶ್ ರವರ ತಂಡ ಹೋಟೆಲ್ ಮೇಲೆ ದಾಳಿ ನಡೆಸಿದಾಗ ಹೋಟೆಲ್ನ ಕ್ಯಾಶ್ ಟೇಬಲ್ ಬಳಿ ಇರುವ ಹಾವೇರಿ ಜಿಲ್ಲೆಯ ಶೇಷಗಿರಿ ಗ್ರಾಮದ ಶಶಿಧರ್ ಎಂಬುವರ ಬಳಿ ಹಣ ಸಿಕ್ಕಿದೆ.