ಕರ್ನಾಟಕ

karnataka

ETV Bharat / city

ಬರೋಬ್ಬರಿ 33 ಮಂಗಗಳಿಗೆ ವಿಷ ಪ್ರಾಸನ: ಐವರ ಬಂಧನ - 33 ಮಂಗಗಳಿಗೆ ವಿಷ ಪ್ರಾಸನ

ಬರೋಬ್ಬರಿ 33 ಮಂಗಗಳಿಗೆ ವಿಷ ಪ್ರಾಸನ ಮಾಡಿ ಕೊಂದಿರುವ ಘಟನೆ ಸಾಗರ ತಾಲೂಕು ಕಾಸ್ಪಡಿ ಬಳಿ ನಡೆದಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

Five arrested for poisoning 33 monkeys
ಬರೋಬ್ಬರಿ 33 ಮಂಗಗಳಿಗೆ ವಿಷ ಪ್ರಾಸನ: ಐವರ ಬಂಧನ

By

Published : Sep 30, 2020, 8:05 PM IST

ಶಿವಮೊಗ್ಗ:ಬರೋಬ್ಬರಿ 33 ಮಂಗಗಳಿಗೆ ವಿಷ ಪ್ರಾಸನ ಮಾಡಿ ಕೊಂದಿರುವ ಘಟನೆ ಸಾಗರ ತಾಲೂಕು ಕಾಸ್ಪಡಿ ಬಳಿ ನಡೆದಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

ಲ್ಯಾವಿಗೆರೆಯ ಅಭಿಷೇಕ್, ಲಂಬೂದರ, ತ್ಯಾಗರ್ತಿಯ ದಸ್ತಗಿರ್​, ವಿಶ್ವನಾಥ್ ಹಾಗೂ ದಾವಣಗೆರೆಯ ಸಂಜೀವ್ ಬಂಧಿತ ಆರೋಪಿಗಳು. ಈ ಐವರು 36 ಮಂಗಗಳಿಗೆ ವಿಷ ಉಣಿಸಿ ತ್ಯಾಗರ್ತಿ ಸಮೀಪದ ಲ್ಯಾವಿಗೆರೆಯಿಂದ ಸಾಗರದ ನೇದರವಳ್ಳಿ ಬಳಿಯ ಕಾಡಿಗೆ ಬಿಸಾಡಲು ಹೊರಟಿದ್ದರು.

ಈ ವೇಳೆ, ಅರಣ್ಯ ಇಲಾಖೆ ಸಿಬ್ಬಂದಿ ವಿಚಾರಿಸಿದಾಗ ಉತ್ತರಿಸಲಾಗದೇ ತಡಬಡಾಯಿಸಿದ್ದು, ನಂತರ ಮಂಗಗಳಿಗೆ ವಿಷ ಹಾಕಿರುವ ಬಗ್ಗೆ ಬಾಯ್ಬಿಟ್ಟಿದ್ದಾರೆ. 36 ಮಂಗಗಳ ಪೈಕಿ 33 ಸಾವನ್ನಪ್ಪಿದ್ದು, 3 ಮಂಗಗಳು ಅಸ್ವಸ್ಥಗೊಂಡಿವೆ.

ವನ್ಯಜೀವಿ ವೈದ್ಯ ಡಾ.ವಿನಯ್ ಅವರ ನೇತೃತ್ವದಲ್ಲಿ ಸತ್ತ ಮಂಗಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಅಸ್ವಸ್ಥಗೊಂಡ 3 ಮಂಗಗಳಿಗ ಚಿಕಿತ್ಸೆ ನೀಡಲಾಗುತ್ತಿದೆ. ಬಂಧಿತರಿಂದ ಒಂದು ಆಡಿ ಕಾರು ಹಾಗೂ ಟಾಟಾ ಏಸ್ ವಾಹನವನ್ನು ವಶಕ್ಕೆ ಪಡೆಯಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಸಾಗರ ವನ್ಯಜೀವಿ ವಿಭಾಗದ ಡಿಎಫ್​​​ಒ ಮೋಹನ ಕುಮಾರ್ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.

ABOUT THE AUTHOR

...view details