ಶಿವಮೊಗ್ಗ:ಬಹಿರ್ದೆಸೆಗೆ ಹೋಗಿ 60 ಅಡಿ ಬಾವಿಗೆ ಬಿದ್ದ ವ್ಯಕ್ತಿಯನ್ನು ರಕ್ಷಿಸಿರುವ ಘಟನೆ ಸೊರಬ ತಾಲೂಕಿನ ಎನ್. ದೊಡ್ಡೇರಿ ಗ್ರಾಮದಲ್ಲಿ ನಡೆದಿದೆ. ನಿನ್ನೆ ತಡರಾತ್ರಿ ಎನ್. ದೊಡ್ಡೇರಿ ಗ್ರಾಮದ ಹನುಮಂತಪ್ಪ ಎಂಬುವರು ಬಹಿರ್ದೆಸೆಗೆ ತೆರಳಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದಿದ್ದಾರೆ.
ಬಹಿರ್ದೆಸೆಗೆ ಹೋಗಿದ್ದ ಹನುಮಂತಪ್ಪ ಬಹಳ ಹೊತ್ತಾದರೂ ಬಾರದ ಕಾರಣ ಕುಟುಂಬಸ್ಥರು ನೋಡಲು ಹೋದಾಗ ಹನುಮಂತಪ್ಪ ಬಾವಿಗೆ ಬಿದ್ದ ವಿಚಾರ ತಿಳಿದಿದೆ. ತಕ್ಷಣ ಪೊಲೀಸರಿಗೆ ಹಾಗೂ ಅಗ್ನಿಶಾಮಕದಳದವರಿಗೆ ವಿಷಯ ತಿಳಿಸಿದಾಗ ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ದಳ ಸಿಬ್ಬಂದಿ ಹನುಮಂತಪ್ಪ ಅವರನ್ನು ರಕ್ಷಿಸಿದ್ದಾರೆ.