ಶಿವಮೊಗ್ಗ: ನಗರದ ಹಳೆ ತೀರ್ಥಹಳ್ಳಿ ರಸ್ತೆಯಲ್ಲಿ ದುಷ್ಕರ್ಮಿಗಳು ಬೀದಿ ಬದಿಯ ಹಣ್ಣಿನ ಅಂಗಡಿಗೆ ಬೆಂಕಿ ಹಚ್ಚಿ ಕ್ರೌರ್ಯ ಮೆರೆದಿದ್ದಾರೆ.
ಶಿವಮೊಗ್ಗದಲ್ಲಿ ಹಣ್ಣಿನ ಅಂಗಡಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು - ಹಣ್ಣಿನ ಅಂಗಡಿ
ಶಿವಮೊಗ್ಗ ನಗರದ ಹಳೆ ತೀರ್ಥಹಳ್ಳಿ ರಸ್ತೆಯಲ್ಲಿ ದುಷ್ಕರ್ಮಿಗಳು ಬೀದಿ ಬದಿಯ ಹಣ್ಣಿನ ಅಂಗಡಿಗೆ ಬೆಂಕಿ ಹಚ್ಚಿ ಕ್ರೌರ್ಯ ಮೆರೆದಿದ್ದಾರೆ.

ಹಣ್ಣಿನ ಅಂಗಡಿಗೆ ಬೆಂಕಿ
ಬೆಳಗಿನ ಜಾವ ಮೂರು ಗಂಟೆಗೆ ಬಂದ ದುಷ್ಕರ್ಮಿಗಳು ತಳ್ಳುವ ಗಾಡಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಅಜಿತ್ ಎಂಬವರಿಗೆ ಸೇರಿದ ಹಣ್ಣಿನ ಅಂಗಡಿಯಲ್ಲಿ ಸುಮಾರು 35 ಸಾವಿರ ಬೆಲೆ ಬಾಳುವ ಹಣ್ಣುಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ಎಂಟು ವರ್ಷಗಳಿಂದ ಹಣ್ಣಿನ ವ್ಯಾಪಾರ ಮಾಡುತ್ತಿದ್ದ ಅಜಿತ್, ತಮ್ಮ ಅಂಗಡಿಯನ್ನು ಕಳೆದುಕೊಂಡು ಕಂಗಾಲಾಗಿದ್ದಾರೆ.
ಹಣ್ಣಿನ ಅಂಗಡಿಗೆ ಬೆಂಕಿ
ಅಜಿತ್ ಅವರ ಕುಟುಂಬ ಹಣ್ಣಿನ ವ್ಯಾಪಾರ ನೆಚ್ಚಿಕೊಂಡು ಜೀವನ ನಡೆಸುತ್ತಿತ್ತು. ಘಟನಾ ಸ್ಥಳಕ್ಕೆ ಎಸ್ಪಿ ಎಂ.ಅಶ್ವಿನಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ದೊಡ್ಡ ಪೇಟೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.