ಕರ್ನಾಟಕ

karnataka

ETV Bharat / city

ಸ್ಮಶಾನಕ್ಕೆ ತೆರಳುವ ರಸ್ತೆಗೆ ಬೇಲಿ: ಮನೆಯಲ್ಲಿಯೇ ಶವ ಇಟ್ಟುಕೊಂಡು ಕುಳಿತ ಕುಟುಂಬ - ಸಾಗರ ಗೌತಮಪುರ ಮನೆಯಲ್ಲಿಯೇ ಶವ ಇಟ್ಟುಕೊಂಡು ಕುಳಿತ ಕುಟುಂಬ

ಸ್ಮಶಾನಕ್ಕೆ ಸಾಗುವ ರಸ್ತೆಗೆ ಅಡ್ಡಲಾಗಿ ಬೇಲಿ ಹಾಕಿದ್ದು ಕುಟುಂಬವೊಂದು ಕಳೆದ 24 ಗಂಟೆಗಳಿಂದ ಮನೆಯಲ್ಲಿಯೇ ಶವ ಇಟ್ಟುಕೊಂಡು ಕುಳಿತಿದೆ.

fence-to-the-cemetery-road-in-shivamogga
ಸ್ಮಶಾನಕ್ಕೆ ತೆರಳುವ ರಸ್ತೆಗೆ ಬೇಲಿ

By

Published : Nov 6, 2021, 4:16 PM IST

ಶಿವಮೊಗ್ಗ: ರಸ್ತೆಗೆ ಅಕ್ರಮವಾಗಿ ಬೇಲಿ ಹಾಕಿದ ಕಾರಣ ಸ್ಮಶಾನಕ್ಕೆ ದಾರಿ ಇಲ್ಲದೆ 24 ಗಂಟೆಯಾದ್ರೂ ಕುಟುಂಬವೊಂದು ಮನೆಯಲ್ಲಿಯೇ ಶವ ಇಟ್ಟುಕೊಂಡು ಕಾಯುತ್ತಾ ಕುಳಿತಿರುವ ಘಟನೆ ಸಾಗರ ತಾಲೂಕು ಗೌತಮಪುರದಲ್ಲಿ ನಡೆದಿದೆ.


ಬಲಿಪಾಡ್ಯಮಿಯಾದ ನಿನ್ನೆ ದಿನ ಗೌತಮಪುರ ಗ್ರಾಮದ ರಾಜಮ್ಮ (70) ವಯೋಸಹಜ ಖಾಯಿಲೆಯಿಂದ ಸಾವಿಗೀಡಾಗಿದ್ದಾರೆ. ರಾಜಮ್ಮನವರ ಮನೆಯಿಂದ ಸ್ಮಶಾನಕ್ಕೆ ಸಾಗುವ ರಸ್ತೆಗೆ ಕುಟುಂಬವೊಂದು ಬೇಲಿ ಹಾಕಿದೆ. ಇದರಿಂದ ಶವ ಸಾಗಿಸಲು ರಸ್ತೆ ಇಲ್ಲದೆ ಕುಟುಂಬಸ್ಥರು ಕೈಚೆಲ್ಲಿ ಕುಳಿತಿದ್ದಾರೆ.

ಇದೀಗ ಶವ ದುರ್ವಾಸನೆ ಬೀರುವ ಸ್ಥಿತಿಗೆ ತಲುಪಿದೆ. ಹೇಗಾದರೂ ರಸ್ತೆ ಮಾಡಿಕೊಡುವಂತೆ ಕುಟುಂಬಸ್ಥರು ಆಡಳಿತ ವರ್ಗಕ್ಕೆ ಮನವಿ ಮಾಡಿದ್ದಾರೆ. ಸ್ಥಳಕ್ಕೆ ಸಾಗರ ಗ್ರಾಮಾಂತರ ಪೊಲೀಸರು ಭೇಟಿ ನೀಡಿದ್ದು, ಶವ ಸಾಗಿಸಲು ಅನುವು ಮಾಡಿಕೊಡುವಂತೆ ಬೇಲಿ ಹಾಕಿದವರಿಗೆ ಸೂಚಿಸಿದ್ದಾರೆ.

ABOUT THE AUTHOR

...view details