ಕರ್ನಾಟಕ

karnataka

ETV Bharat / city

ಪ್ರಾಮಾಣಿಕತೆ ಮೆರೆದ ಪೌರ ಕಾರ್ಮಿಕೆ ಶಾಂತಮ್ಮಗೆ ಸನ್ಮಾನ - undefined

ಕೆಲ ದಿನಗಳ ಹಿಂದೆ ಶಿವಮೊಗ್ಗ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಯ ನಿರ್ವಹಿಸುತ್ತಿದ್ದಾಗ ತಮಗೆ ಸಿಕ್ಕ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಬಂಗಾರದ ಸರವನ್ನು ಅದರ ಮಾಲೀಕರಿಗೆ ಹಿಂದಿರುಗಿಸಿ ಶಾಂತಮ್ಮ ಎಂಬುವರು ಪ್ರಾಮಾಣಿಕತೆ ಮೆರೆದಿದ್ದರು. ಅವರಿಗೆ ಸನ್ಮಾನ ಮಾಡುವ ಮೂಲಕ ನಗರದ ಸೌರಭ ಸಂಸ್ಥೆ ಪ್ರಾಮಾಣಿಕ ಮಹಿಳೆಗೆ ಗೌರವ ಸೂಚಿಸಿದೆ.

ಪೌರ ಕಾರ್ಮಿಕೆ ಶಾಂತಮ್ಮಗೆ ಸನ್ಮಾನ

By

Published : Jun 21, 2019, 7:39 AM IST

ಶಿವಮೊಗ್ಗ:ನಗರ ಪಾಲಿಕೆ ಪೌರ ಕಾರ್ಮಿಕೆ ಶಾಂತಮ್ಮಗೆ ಸೌರಭ ಸಂಸ್ಥೆಯ ವತಿಯಿಂದ ಸನ್ಮಾನ ಮಾಡುವ ಮೂಲಕ ಪ್ರಾಮಾಣಿಕ ಮಹಿಳೆಗೆ ಗೌರವ ಸಲ್ಲಿಸಲಾಗಿದೆ.

ಸಂಸ್ಥೆಯ ಅಧ್ಯಕ್ಷ, ಮಾಜಿ ಶಾಸಕ ಕೆ.ಬಿ.ಪ್ರಸನ್ನ ಕುಮಾರ್​ ಮತ್ತು ದೊಡ್ಡಪೇಟೆ ಪೊಲೀಸ್ ಸರ್ಕಲ್ ಇನ್ಸ್​ಪೆಕ್ಟರ್ ವಸಂತ್ ಕುಮಾರ್ ಸನ್ಮಾನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಪೌರ ಕಾರ್ಮಿಕೆ ಶಾಂತಮ್ಮಗೆ ಸನ್ಮಾನ

ಕಸ ಗುಡಿಸುವಾಗ ಸಿಕ್ಕ ಚಿನ್ನದ ಸರ: ಮಾಲೀಕನಿಗೆ ಹಿಂತಿರುಗಿಸಿ ಪೌರಕಾರ್ಮಿಕೆ ಪ್ರಾಮಾಣಿಕತೆ

ಕೆಲ ದಿನಗಳ ಹಿಂದೆ ಶಾಂತಮ್ಮ, ಪಾಲಿಕೆ ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಯ ನಿರ್ವಹಿಸುತ್ತಿದ್ದಾಗ ತಮಗೆ ಸಿಕ್ಕ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಬಂಗಾರದ ಸರವನ್ನು ಅದರ ಮಾಲೀಕರಿಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದರು. ಶಾಂತಮ್ಮ ಕಾರ್ಯಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿತ್ತು. ಈ ಬಗ್ಗೆ ಈಟಿವಿ ಭಾರತ್​ ಕೂಡಾ ವಿಸ್ತ್ರತ ವರದಿ ಪ್ರಕಟಿಸಿತ್ತು. ಹೀಗಾಗಿ ಅವರಿಗೆ ಸನ್ಮಾನ ಮಾಡುವ ಮೂಲಕ ಗೌರವ ಸಲ್ಲಿಸಲಾಗಿದೆ.

For All Latest Updates

TAGGED:

ABOUT THE AUTHOR

...view details