ಶಿವಮೊಗ್ಗ: ಲಾಕ್ಡೌನ್ಅನ್ನು ದಂಧೆಯನ್ನಾಗಿ ಬಳಸಿಕೊಂಡ ಇಬ್ಬರು ಯುವಕರು ಪೊಲೀಸರೆಂದು ಹೇಳಿಕೊಂಡು ಅಂಗಡಿ ಮತ್ತು ವಾಹನ ಸವಾರರಿಂದ ಹಣ ವಸೂಲಿ ಮಾಡುತ್ತಿದ್ದರು. ಇದನ್ನು ಗಮನಿಸಿದ ಗೃಹ ರಕ್ಷಕ ದಳದ ಸಿಬ್ಬಂದಿ ಯುವಕರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಶಿವಮೊಗ್ಗ: ಜನರಿಂದ ಹಣ ವಸೂಲಿ ಮಾಡುತ್ತಿದ್ದ ನಕಲಿ ಪೊಲೀಸರು ಅಸಲಿ ಖಾಕಿ ವಶಕ್ಕೆ
ಜಿಲ್ಲೆಯ ಹಾರನಹಳ್ಳಿಯಲ್ಲಿ ಪೊಲೀಸರು ಎಂದು ಹೇಳಿಕೊಂಡು ಜನರು ಮತ್ತು ಅಂಗಡಿಗಳ ಮಾಲೀಕರಿಂದ ಹಣ ಪೀಕುತ್ತಿದ್ದ ಇಬ್ಬರು ಯುವಕರನ್ನು ಗೃಹ ರಕ್ಷಕ ದಳದ ಸಿಬ್ಬಂದಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಟಿಪ್ಪು ನಗರದ ಯುವಕರಾದ ಮೊಹಮ್ಮದ್ ನಖಿರ್ ಹಾಗೂ ಮೊಹಮ್ಮದ್ ಆಸಿಫ್ ಹಣ ವಸೂಲಿ ಮಾಡುತ್ತಿದ್ದಾಗಿ ಪೊಲೀಸರ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾರೆ.
ಇದೇ ಸಂದರ್ಭದಲ್ಲಿ ಕರ್ತವ್ಯನಿರತ ಗೃಹ ರಕ್ಷಕ ದಳದ ಸಿಬ್ಬಂದಿ ಶ್ರೀನಿವಾಸ ಎಂಬುವವರು ಸ್ಥಳಕ್ಕೆ ಬಂದು ಕೇಳಿದಾಗ ಯುವಕರು ತಡಬಡಿಸಿದ್ದಾರೆ. ಇದರಿಂದ ಅನುಮಾನಗೊಂಡ ಶ್ರೀನಿವಾಸ್, ಇಬ್ಬರನ್ನೂ ಕುಂಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಯುವಕರು ತಾಲೂಕಿನ ಹಾರನಹಳ್ಳಿ ಗ್ರಾಮದ ಬಸ್ ನಿಲ್ದಾಣದ ಬಳಿ ಲಾಕ್ಡೌನ್ ವೇಳೆ ಅಂಗಡಿ ತೆರೆದು ವ್ಯಾಪಾರ ಮಾಡುತ್ತಿದ್ದೀರಾ ಎಂದು ಬೆದರಿಸಿ ಹಣ ವಸೂಲಿ ಮಾಡುತ್ತಿದ್ದರು. ಅಲ್ಲದೆ ರಸ್ತೆಯಲ್ಲಿ ಸಂಚಾರ ಮಾಡುತ್ತಿದ್ದವರನ್ನು ತಡೆದು ಹಣ ದೋಚುತ್ತಿದ್ದರಂತೆ.