ಕರ್ನಾಟಕ

karnataka

ETV Bharat / city

ಶಿವಮೊಗ್ಗದಲ್ಲಿ ನಕಲಿ ಅಮೃತ್ ನೋನಿ ಮಾರಾಟ ಜಾಲ ಪತ್ತೆ - ನಕಲಿ ಅಮೃತ್ ನೋನಿ ಮಾರಾಟ ಜಾಲ ಪತ್ತೆ

ಶಿವಮೊಗ್ಗದಲ್ಲಿ ನಕಲಿ ಅಮೃತ್ ನೋನಿ ಮಾರಾಟ ಜಾಲ ಪತ್ತೆಯಾಗಿದೆ. ನಗರದ ಮಾರ್ನಮಿ ಬೈಯಲಿನಲ್ಲಿರುವ ಫಾರ್ಮಾ ಸಂಸ್ಥೆ ಮೇಲೆ ದಾಳಿ ನಡೆಸಿದ ಪೊಲೀಸರು 31 ಬಾಕ್ಸ್ ನಕಲಿ ಅಮೃತ್ ನೋನಿಯನ್ನು ವಶಕ್ಕೆ ಪಡೆದಿದ್ದಾರೆ.

ಶಿವಮೊಗ್ಗದಲ್ಲಿ ನಕಲಿ ಅಮೃತ್ ನೋನಿ ಮಾರಾಟ ಜಾಲ ಪತ್ತೆ
ಶಿವಮೊಗ್ಗದಲ್ಲಿ ನಕಲಿ ಅಮೃತ್ ನೋನಿ ಮಾರಾಟ ಜಾಲ ಪತ್ತೆ

By

Published : Oct 4, 2021, 5:46 PM IST

ಶಿವಮೊಗ್ಗ: ಅಮೃತ್ ನೋನಿಯನ್ನೇ ಹೋಲುವ ನಕಲಿ ಪ್ಯಾಕಿಂಗ್ ಮಾಡಿ ಜ್ಯೂಸ್ ಮಾರಾಟ ಮಾಡುತ್ತಿದ್ದ ಜಾಲವೊಂದನ್ನು ಇಲ್ಲಿನ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಅಮೃತ್ ನೋನಿಯನ್ನು ಮಾರಾಟ ಮಾಡುತ್ತಿರುವ ವ್ಯಾಲ್ಯೂ ಪ್ರಾಡೆಕ್ಟ್ ಕಂಪನಿ ನೀಡಿದ ದೂರಿನ ಮೇರೆಗೆ ಶಿವಮೊಗ್ಗದ ಮಾರ್ನಮಿ ಬೈಯಲಿನಲ್ಲಿರುವ ಫಾರ್ಮಾ ಸಂಸ್ಥೆ ಮೇಲೆ ದಾಳಿ ನಡೆಸಲಾಗಿದೆ. ಈ ವೇಳೆ ಅಮೃತ್ ನೋನಿಯನ್ನೇ ಹೋಲುವ ನಕಲಿ ಪ್ಯಾಕಿಂಗ್ ಮಾಡಿರುವ 31 ಬಾಕ್ಸ್ ನಕಲಿ ಅಮೃತ್ ನೋನಿಯನ್ನು ವಶಕ್ಕೆ ಪಡೆಯಲಾಗಿದೆ.

ನಾವು ಆಯುಷ್ ಇಲಾಖೆಯಿಂದ ಲೈಸೆನ್ಸ್ ಪಡೆದು ಔಷಧಿ ಎಂದು ಮಾರಾಟ ಮಾಡುತ್ತಿದ್ದೇವೆ. ಆದ್ರೆ ಕೆಲವರು ಇದನ್ನು ನಕಲು ಮಾಡಿ, ಮಾರುತ್ತಿರುವುದರಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗಲಿದೆ. ಈ ಹಿನ್ನೆಲೆಯಲ್ಲಿ ದೂರು ನೀಡಿದ್ದೇವೆ. ಪೊಲೀಸರು ದಾಳಿ ನಡೆಸಿ ನಕಲಿ ಅಮೃತ್ ನೋನಿ ಬಾಕ್ಸ್ ಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ವ್ಯಾಲ್ಯೂ ಪ್ರಾಡೆಕ್ಟ್ ಸಂಸ್ಥೆಯ ಕಾನೂನು ವಿಭಾಗದ ಶಶಿಕಾಂತ್ ನಾಡಿಗ್ ತಿಳಿಸಿದ್ದಾರೆ.

ABOUT THE AUTHOR

...view details