ಶಿವಮೊಗ್ಗ:ಮೈಸೂರು ಸಿಲ್ಕ್ಸ್ ವಸ್ತ್ರೋದ್ಯಮ ಸಂಸ್ಥೆ ನಗರದ ಕನ್ನಡ ಸಂಘದ ಸಭಾಂಗಣದಲ್ಲಿ ಏರ್ಪಡಿಸಿದ್ದ ಮೈಸೂರು ಸಿಲ್ಕ್ ಸೀರೆಗಳ ಪ್ರದರ್ಶನ ಮತ್ತು ಮಾರಾಟ ಮೇಳ ಕಾರ್ಯಕ್ರಮವನ್ನ ಅಪರ ಜಿಲ್ಲಾಧಿಕಾರಿ ಜಿ.ಅನುರಾಧ ಉದ್ಘಾಟಿಸಿದರು.
ಶಿವಮೊಗ್ಗದಲ್ಲಿ ಜು.26 ರಿಂದ 30ವರೆಗೆ ಸಿಲ್ಕ್ ಸೀರೆಗಳ ಪ್ರದರ್ಶನ, ಮಾರಾಟ ಮೇಳ - Shimogga
ಮೈಸೂರು ಸಿಲ್ಕ್ಸ್ ವಸ್ತ್ರೋದ್ಯಮ ಸಂಸ್ಥೆ ಶಿವಮೊಗ್ಗದಲ್ಲಿ ಜುಲೈ 26ರಿಂದ 30ವರೆಗೆ ಮೈಸೂರು ಸಿಲ್ಕ್ ಸೀರೆಗಳ ಪ್ರದರ್ಶನ ಮತ್ತು ಮಾರಾಟ ಮೇಳ ಕಾರ್ಯಕ್ರಮ ಏರ್ಪಡಿಸಿದೆ.
![ಶಿವಮೊಗ್ಗದಲ್ಲಿ ಜು.26 ರಿಂದ 30ವರೆಗೆ ಸಿಲ್ಕ್ ಸೀರೆಗಳ ಪ್ರದರ್ಶನ, ಮಾರಾಟ ಮೇಳ](https://etvbharatimages.akamaized.net/etvbharat/prod-images/768-512-3958448-thumbnail-3x2-sow.jpg)
ಶಿವಮೊಗ್ಗದಲ್ಲಿ ಜು.26 ರಿಂದ 30ವರೆಗೆ ಸಿಲ್ಕ್ ಸೀರೆಗಳ ಪ್ರದರ್ಶನ ಮತ್ತು ಮಾರಾಟ ಮೇಳ
ಬಳಿಕ ಮಾತಾನಾಡಿದ ಅವರು, 110ವರ್ಷಗಳ ಭವ್ಯ ಇತಿಹಾಸ ಹೊಂದಿರುವ ರಾಜ್ಯ ಸರ್ಕಾರದ ಹೆಮ್ಮೆಯ ಸಂಸ್ಥೆ ಮೈಸೂರು ಸಿಲ್ಕ್ಸ್ ಉತ್ಪಾದಿಸುತ್ತಿರುವ ಉತ್ಕೃಷ್ಟ ಗುಣಮಟ್ಟದ ಮೈಸೂರು ರೇಷ್ಮೆ ಉತ್ಪನ್ನಗಳು ನಾಡಿನ ಶ್ರೇಷ್ಟತೆ ಹಾಗೂ ಪರಂಪರೆಯ ಪ್ರತೀಕವಾಗಿದೆ. ಧಾರ್ಮಿಕ ಹಾಗೂ ಸಾಂಪ್ರದಾಯಿಕ ಕಾರ್ಯಕ್ರಮಗಳಲ್ಲಿ ಮಹತ್ವದ ಸ್ಥಾನ ಪಡೆದಿರುವ ಮೈಸೂರು ರೇಷ್ಮೆಗೆ ಜಾಗತಿಕ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದೆ ಎಂದರು.
ಈ ಮೇಳ ಮೈಸೂರು ಸಿಲ್ಕ್ ಸೀರೆಗಳ ಪ್ರದರ್ಶನ ಮತ್ತು ಮಾರಾಟ ಮೇಳ ಜುಲೈ 26ರಿಂದ 30ವರೆಗೆ ನಡೆಯಲಿದೆ.
TAGGED:
Shimogga