ಕರ್ನಾಟಕ

karnataka

ETV Bharat / city

ಶಿವಮೊಗ್ಗದಲ್ಲಿ ಶಾಂತಿ ಕದಡುವ ಕೆಲಸ ಮಾಡಿದ್ರೆ ಸಹಿಸಲ್ಲ: ಸಚಿವ ಈಶ್ವರಪ್ಪ ಎಚ್ಚರಿಕೆ

ಗುರುವಾರ ಹಲ್ಲೆಗೆ ಒಳಗಾಗಿದ್ದ ಬಜರಂಗ ದಳದ ಸಹ ಸಂಚಾಲಕ ನಾಗೇಶ್​ರನ್ನು ಸಚಿವ ಈಶ್ವರಪ್ಪ ಅವರು ಆಸ್ಪತ್ರೆಯಲ್ಲಿ ಭೇಟಿಯಾಗಿ ಆರೋಗ್ಯ ವಿಚಾರಿಸಿದರು. ಈ ವೇಳೆ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ಶಾಂತಿ ಕದಡುವ ಕೆಲಸ ಮಾಡಿದ್ರೆ ಸಹಿಸಲ್ಲ ಎಂದು ಖಡಕ್​ ಎಚ್ಚರಿಕೆ ರವಾನಿಸಿದರು.

ಸಚಿವ ಈಶ್ವರಪ್ಪ
ಸಚಿವ ಈಶ್ವರಪ್ಪ

By

Published : Dec 4, 2020, 12:43 PM IST

ಶಿವಮೊಗ್ಗ: ನಗರದಲ್ಲಿ ಶಾಂತಿಗೆ ಭಂಗ ತಂದರೆ ರಾಜ್ಯ ಸರ್ಕಾರ ಸಹಿಸುವುದಿಲ್ಲ ಎಂದು ಸಚಿವ ಈಶ್ವರಪ್ಪ ಗುಡುಗಿದ್ದಾರೆ.

ಗುರುವಾರ ಹಲ್ಲೆಗೊಳಗಾಗಿದ್ದ ಬಜರಂಗ ದಳದ ಸಹ ಸಂಚಾಲಕ ನಾಗೇಶ್​ರನ್ನು ಆಸ್ಪತ್ರೆಯಲ್ಲಿ ಭೇಟಿಯಾಗಿ ಆರೋಗ್ಯ ವಿಚಾರಿಸಿದ ನಂತರ ಮಾತನಾಡಿದ ಅವರು, ಕೆಲ ಗೂಂಡಾಗಳು ಶಾಂತಿಗೆ ಭಂಗ ತರುವಂತಹ ಕೆಲಸ ಮಾಡಿದ್ದಾರೆ. ಗೂಂಡಾಗಳಿಗೆ ಆ ಸಮಾಜದ ಹಿರಿಯರು ಬುದ್ಧಿ ಹೇಳಿ‌ ಶಿಕ್ಷೆ ನೀಡಬೇಕು. ಇಲ್ಲವಾದಲ್ಲಿ ರಾಜ್ಯ ಸರ್ಕಾರ ಬುದ್ಧಿ ಹೇಳಿ, ಶಿಕ್ಷೆ ನೀಡುತ್ತದೆ ಎಂದರು.

ನಾಗೇಶ್​ ಮೇಲಿನ ಹಲ್ಲೆ ಪ್ರಕರಣ ಕುರಿತು ಸಚಿವ ಈಶ್ವರಪ್ಪ ಪ್ರತಿಕ್ರಿಯೆ

ಶಿವಮೊಗ್ಗದಲ್ಲಿ ಹಿಂದೂ-ಮುಸಲ್ಮಾನರು ಶಾಂತಿಯಿಂದ ಇರಬೇಕು ಎಂದು ಪ್ರಯತ್ನಿಸಿದ್ರೆ, ಕೆಲ ಕುತಂತ್ರಿಗಳು ಇಲ್ಲಿ ಗಲಭೆಯನ್ನುಂಟು ಮಾಡುತ್ತಿದ್ದಾರೆ. ಹಿಂದೂ ಸಮಾಜದ ಎಲ್ಲಾ ಪ್ರಮುಖರು ಈ ಕುತಂತ್ರಗಳಿಗೆ ಬುದ್ಧಿ ಕಲಿಸುತ್ತೇವೆ ಎಂದು ಸಚಿವ ಈಶ್ವರಪ್ಪ ಎಚ್ಚರಿಕೆ ನೀಡಿದರು.

ಬಜರಂಗ ದಳದ ಸಹ ಸಂಚಾಲಕ ನಾಗೇಶ್ ವಾಯುವಿಹಾರ ಮುಗಿಸಿ ಮನೆಗೆ ವಾಪಸ್ ಬರುವಾಗ ಪೂರ್ವನಿಯೋಜಿತವಾಗಿ ಪ್ಲಾನ್ ಮಾಡಿ ನಾಲ್ವರು ಸೇರಿ ಹಲ್ಲೆ ನಡೆಸಿದ್ದಾರೆ. ಶಿವಮೊಗ್ಗದಲ್ಲಿ ಇರುವ ಕೆಲವರು ಹಾಗೂ ಹೊರಗಡೆಯಿಂದ ಬಂದವರು ಇಲ್ಲಿನ ಶಾಂತಿ ಕದಡುವ ಪ್ರಯತ್ನ ಮಾಡುತ್ತಿದ್ದಾರೆ. ಈ ಘಟನೆಗೆ ಕಾರಣರಾದ ಗೂಂಡಾಗಳನ್ನು ಸರ್ಕಾರ ಸುಮ್ಮನೆ ಬಿಡುವುದಿಲ್ಲ. ಎಸ್​ಪಿ ಅವರಿಗೆ ಗೂಂಡಾಗಳ ಬಗ್ಗೆ ಕಠಿಣ ಕ್ರಮ ತೆಗೆದುಕೊಳ್ಳಲು ಸೂಚಿಸಿದ್ದೇನೆ ಎಂದು ಹೇಳಿದರು.‌

ನಾಗೇಶ್ ಆರೋಗ್ಯ ವಿಚಾರಿಸಿದ ಈಶ್ವರಪ್ಪ

ಇದನ್ನೂ ಓದಿ:ಬಜರಂಗದಳ ಕಾರ್ಯಕರ್ತನ ಮೇಲೆ ಹಲ್ಲೆ: ಶಿವಮೊಗ್ಗ ನಗರದಲ್ಲಿ ನಿಷೇಧಾಜ್ಞೆ ಜಾರಿ

ಗೋಹತ್ಯೆ ತಡೆಯಲು ಯತ್ನಿಸಿದ್ದಕ್ಕೆ ನಾಗೇಶ್ ಮೇಲೆ ಹಲ್ಲೆ:

ನಾಗೇಶ್ ಬಜರಂಗದಳದ ಸಹ ಸಂಚಾಲಕರಾಗಿದ್ದು‌ಕೊಂಡು ಗೋಹತ್ಯೆ‌ ನಿಷೇಧದ ಬಗ್ಗೆ ಸಾಕಷ್ಟು ಪ್ರಯತ್ನ ಮಾಡುತ್ತಿದ್ದರು. ಇದರಿಂದಾಗಿ ನಾಗೇಶ್ ವಿರುದ್ಧ ವ್ಯವಸ್ಥಿತವಾಗಿ ಪ್ಲಾನ್ ಮಾಡಿ ಹಲ್ಲೆ ನಡೆಸಲಾಗಿದೆ. ನಾಗೇಶ್​ ಅವರಿಗೆ ಆಪರೇಷನ್ ಮಾಡಲಾಗಿದ್ದು, ಯಾವುದೇ ಸಮಸ್ಯೆ ಇಲ್ಲವೆಂದು ವೈದ್ಯರು ತಿಳಿಸಿದ್ದಾರೆ. ಗೋಹತ್ಯೆ ತಡೆಯುವವರ ಮೇಲಿನ ಹಲ್ಲೆಯನ್ನು ನಮ್ಮ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಈ ಕುರಿತು ಸೂಕ್ತ ತನಿಖೆ ನಡೆಸಲಾಗುವುದು ಎಂದು ಸಚಿವರು ತಿಳಿಸಿದರು.

ತಹಶೀಲ್ದಾರ್ ವಿರುದ್ಧ ಗರಂ ಆದ ಸಚಿವರು:

ತಹಶೀಲ್ದಾರ್​ಗೆ ತಲೆ ಸರಿ ಇಲ್ಲದಿರುವ ಕಾರಣ ಎರಡು ಗುಂಪುಗಳ ನಡುವೆ ಘರ್ಷಣೆ ಅಂತ ಹಾಕಿದ್ದಾರೆ ಎಂದು ತಹಶೀಲ್ದಾರ್ ವಿರುದ್ಧ ಸಚಿವರು ಗರಂ ಆದರು. ನಿನ್ನೆ ನಗರದಲ್ಲಿ 144 ಸೆಕ್ಷನ್ ಜಾರಿ ಮಾಡಿದ ತಹಶೀಲ್ದಾರ್ ನಾಗರಾಜ್, ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದೆ ಎಂದು ಮಾಹಿತಿ‌ ನೀಡಿದ್ದರು. ಹಿಂದೂ ಸಮಾಜವನ್ನು ಯಾರು ಹಗುರವಾಗಿ ತೆಗೆದುಕೊಳ್ಳಬಾರದು, ಮುಂದೆ ಇದು ವ್ಯತಿರಿಕ್ತ ಪರಿಣಾಮ ಬಿರುತ್ತದೆ ಎಂದು ಸಚಿವ ಈಶ್ವರಪ್ಪ ಹೇಳಿದ್ರು.

ಇದನ್ನೂ ಓದಿ:ಶಿವಮೊಗ್ಗದಲ್ಲಿ ಭಜರಂಗದಳ ಕಾರ್ಯಕರ್ತನ ಮೇಲೆ ಹಲ್ಲೆ

ABOUT THE AUTHOR

...view details