ಕರ್ನಾಟಕ

karnataka

ETV Bharat / city

ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಈ ಭಾಗದ ತಜ್ಞರ ಸಂಶೋಧನೆಗಳು ಸದ್ಬಳಕೆ ಆಗಬೇಕಿದೆ: ಬಿ.ವೈ. ರಾಘವೇಂದ್ರ - ಡಿಆರ್‌ಡಿಒ ಲ್ಯಾಬ್‌

ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ, ಕೃಷಿ, ಇಂಜಿನಿಯರಿಂಗ್ ಸೇರಿದಂತೆ ಮತ್ತಿತರ ವಿಷಯಗಳ ಶ್ರೇಷ್ಠ ಸಂಶೋಧಕರು, ವಿಜ್ಞಾನಿಗಳು ಹೊರದೇಶಗಳಲ್ಲಿ ತಮ್ಮ ಕಾರ್ಯಚಟುವಟಿಕೆಗಳನ್ನು ಕೈಗೊಳ್ಳುತ್ತಿರುವುದು ದುರದೃಷ್ಟಕರ. ಹೀಗಾಗಿ, ಸ್ಥಳೀಯ ಮಾನವ ಸಂಪನ್ಮೂಲವನ್ನು, ಅವರ ಬುದ್ಧಿಮತ್ತೆಯನ್ನು ದೇಶದ ಅಭಿವೃದ್ಧಿಗೆ ಪೂರಕವಾಗಿ ಬಳಸಿಕೊಳ್ಳಬೇಕಿದೆ ಎಂದು ಬಿ.ವೈ.ರಾಘವೇಂದ್ರ ಹೇಳಿದರು.

MP BY Raghavendra
ಸಂಸದ ಬಿ.ವೈ.ರಾಘವೇಂದ್ರ

By

Published : Mar 7, 2021, 7:28 AM IST

ಶಿವಮೊಗ್ಗ:ಪಶ್ಚಿಮ ಘಟ್ಟಗಳಲ್ಲಿ ಯಥೇಚ್ಚವಾಗಿ ಲಭ್ಯವಿರುವ ಸಸ್ಯ ಪ್ರಭೇದಗಳು ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನು ದೇಶದ ರಕ್ಷಣಾಪಡೆಯ ಒಳಿತಿಗಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಸಂಶೋಧನೆಗಳನ್ನು ಕೈಗೊಳ್ಳಲು ಪರಿಣತ ಮಾನವ ಸಂಪನ್ಮೂಲ ಮಲೆನಾಡು ಭಾಗದಲ್ಲಿದೆ. ರಾಷ್ಟ್ರನಿರ್ಮಾಣ ಕಾರ್ಯದಲ್ಲಿ ಈ ಭಾಗದ ತಜ್ಞರ ಸಂಶೋಧನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಸಂಸದ ಬಿ.ವೈ.ರಾಘವೇಂದ್ರ ಹೇಳಿಕೆ

ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸದ್ದ ಡಿಆರ್‌ಡಿಒ ಲ್ಯಾಬ್‌ಗೆ ಬೇಕಾದ 'ಬುದ್ಧಿಮತ್ತೆ ಅಧಿವೇಶನ'ದಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಡಿಆರ್‌ಡಿಒ ಕುವೆಂಪು ವಿಶ್ವವಿದ್ಯಾಲಯದಲ್ಲಿ ಪ್ರಯೋಗಾಲಯವನ್ನು ಪ್ರಾರಂಭಿಸಲು ತಾತ್ವಿಕ ಒಪ್ಪಿಗೆ ನೀಡಿರುವ ಹಿನ್ನೆಲೆಯಲ್ಲಿ ರಕ್ಷಣಾಪಡೆಗಳಿಗೆ ಪ್ರಾಯೋಗಿಕವಾಗಿ ಸಹಾಯಕವಾಗುವಂತಹ ಸಂಶೋಧನೆಯನ್ನು ಈ ಭಾಗದ ತಜ್ಞರು ಕೈಗೊಳ್ಳಬೇಕಾದ ಅಗತ್ಯತೆ ಇದೆ. ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ, ಕೃಷಿ, ಇಂಜಿನಿಯರಿಂಗ್ ಸೇರಿದಂತೆ ಮತ್ತಿತರ ವಿಷಯಗಳ ಶ್ರೇಷ್ಠ ಸಂಶೋಧಕರು, ವಿಜ್ಞಾನಿಗಳು ಹೊರದೇಶಗಳಲ್ಲಿ ತಮ್ಮ ಕಾರ್ಯಚಟುವಟಿಕೆಗಳನ್ನು ಕೈಗೊಳ್ಳುತ್ತಿರುವುದು ದುರದೃಷ್ಟಕರ ಎಂದರು.

ಹೀಗಾಗಿ, ಸ್ಥಳೀಯ ಮಾನವ ಸಂಪನ್ಮೂಲವನ್ನು, ಅವರ ಬುದ್ಧಿಮತ್ತೆಯನ್ನು ದೇಶದ ಅಭಿವೃದ್ಧಿಗೆ ಪೂರಕವಾಗಿ ಬಳಸಿಕೊಳ್ಳಬೇಕಿದೆ. ಈ ಹಿನ್ನೆಲೆಯಲ್ಲಿ ಡಿಆರ್‌ಡಿಒ ಪ್ರಯೋಗಾಲಯದ ಸ್ಥಾಪನೆ ಮಹತ್ವದ ಹೆಜ್ಜೆಯಾಗಲಿದೆ. ಡಿಆರ್‌ಡಿಒಗೆ ಅನುಕೂಲವಾಗುವಂತಹ ಯೋಜನೆಯನ್ನು ಪ್ರಸ್ತಾವನೆ ಕೊಟ್ಟರೆ ಲ್ಯಾಬ್ ಸ್ಥಾಪನೆಗೆ ಅನುಕೂಲವಾಗಲಿದೆ. ಲ್ಯಾಬ್ ಜೊತೆಗೆ ಶಾಶ್ವತ ಸಂಶೋಧನಾ ಕೇಂದ್ರ ಆಗಬೇಕೆಂಬುದು ನಮ್ಮ ಉದ್ದೇಶ. ಅದಕ್ಕಾಗಿ ಪೂರಕ ಪ್ರಸ್ತಾವನೆ ಕೊಟ್ಟರೆ ಬಂಡವಾಳ ಹೂಡುವ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ಓದಿ:ಕೋರ್ಟ್ ಮೊರೆ ಹೋದ ಸಚಿವರ ಕುರಿತು ಏನೂ ಹೇಳಲ್ಲ: ಶೋಭಾ ಕರಂದ್ಲಾಜೆ

ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲೆ ಎಚ್.ಎಸ್. ವಾಗ್ದೇವಿ ಡಿಆರ್‌ಡಿಒ ಲ್ಯಾಬ್‌ಗೆ ಯಾವ ರೀತಿಯಲ್ಲಿ ಸಂಶೋಧನಾ ಪ್ರಸ್ತಾವನೆ ಸಲ್ಲಿಸಬಹುದು ಎಂಬುದನ್ನು ವಿಡಿಯೋ ತುಣುಕಿನ ಮೂಲಕ ಮಾಹಿತಿ ನೀಡಿದರು. ಜೊತೆಗೆ ಜೈವಿಕ ಚಿಕಿತ್ಸೆ, ಫೈಟೋಕೆಮಿಕಲ್ಸ್, ನೈಸರ್ಗಿಕ ವಿಧಾನದಲ್ಲಿ ಜೈವಿಕ ಸಂಯೋಜನೆ, ಪ್ರಾಕೃತಿಕ ಮಾದರಿಯಲ್ಲಿ ರಕ್ತಸ್ರಾವ ನಿಲ್ಲಿಸುವಿಕೆ, ಯುದ್ಧದಲ್ಲಿ ಜೈವಿಕ ರಕ್ಷಣಾ ಕವಚಗಳು, ಬಯೋಮಿಮಿಟಿಕ್ಸ್ ಸಲಕರಣೆಗಳು, ಏರೋಮೆಡಿಕಲ್ ಜೀವರಕ್ಷಕ ಉಪಕರಣಗಳು, ಸೈನಿಕರಿಗೆ ಅತ್ಯುತ್ತಮ ಉಡುಪುಗಳು, ಸೆನ್ಸಾರ್ ಅಭಿವೃದ್ಧಿ, ಜೈವಿಕ ನ್ಯಾನೋಟೆಕ್ನಾಲಜಿ, ಸೌರ ಶಕ್ತಿ ಕುರಿತು ಸಂಶೋಧನೆ ಕೈಗೊಳ್ಳಬಹುದು ಎಂದು ವಿವರಿಸಿದರು.

ABOUT THE AUTHOR

...view details