ಚಿಕ್ಕಮಗಳೂರು:ಡಿಕೆಶಿ ಹುಟ್ಟುಹಬ್ಬ ಪ್ರಯುಕ್ತ ಚಿಕ್ಕಮಗಳೂರು ಹಾಗೂ ಶಿವಮೊಗ್ಗದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು.
ಡಿಕೆಶಿ ಹುಟ್ಟುಹಬ್ಬ ಪ್ರಯುಕ್ತ ಚಿಕ್ಕಮಗಳೂರು, ಶಿವಮೊಗ್ಗದಲ್ಲಿ ವಿಶೇಷ ಪೂಜೆ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಶೃಂಗೇರಿಯಲ್ಲಿರುವ ತಮ್ಮ ಇಷ್ಟ ದೈವ ಋಷ್ಯಶೃಂಗೇಶ್ವರನಿಗೆ ಆನ್ಲೈನ್ ಮೂಲಕ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಕರ್ನಾಟಕ ಕಿಸಾನ್ ಕಾಂಗ್ರೆಸ್ ಕಾರ್ಯಕರ್ತರು, ಶೃಂಗೇರಿ ತಾಲೂಕಿನ ಕಿಗ್ಗಾದಲ್ಲಿರುವ ಶೃಂಗೇಶ್ವರನಿಗೆ 101 ತೆಂಗಿನಕಾಯಿ ಸಮರ್ಪಣೆ ಮಾಡಿದರು. ಸಚಿನ್ ಮೀಗಾ ನೇತೃತ್ವದಲ್ಲಿ ವಿಶೇಷ ಪೂಜೆ ನೆರವೇರಿಸಲಾಗಿದೆ.
ಶಿವಮೊಗ್ಗದಲ್ಲಿ ಡಿಕೆಶಿ ಹೆಸರಿನಲ್ಲಿ ಅರ್ಚನೆ
ಡಿ.ಕೆ.ಶಿವಕುಮಾರ್ ಬ್ರಿಗೇಡ್ ವತಿಯಿಂದ ಶಿವಮೊಗ್ಗದ ದುರ್ಗಿಗುಡಿ ಪಂಚಮುಖಿ ಆಂಜನೇಯ ದೇವಾಲಯದಲ್ಲಿ ಡಿ.ಕೆ.ಶಿವಕುಮಾರ್ ಹೆಸರಿನಲ್ಲಿ ಅರ್ಚನೆ, ಪೂಜೆ ನಡೆಸಲಾಯಿತು. ದೇಶಕ್ಕೆ ಕಾಡುತ್ತಿರುವ ಕೊರೊನಾ ಸೋಂಕು ತೊಲಗಿ, ಎಲ್ಲರೂ ಆರೋಗ್ಯವಂತರಾಗಲಿ ಎಂದು ಪೂಜೆ ಸಲ್ಲಿಸಿ, ಪ್ರಸಾದ ಹಂಚಲಾಯಿತು. ಈ ವೇಳೆ ಕೆಪಿಸಿಸಿ ಜಿಲ್ಲಾ ಕಾರ್ಯದರ್ಶಿ, ಡಿಕೆಶಿ ಬ್ರಿಗೇಡ್ನ ಕೆ.ದೇವೆಂದ್ರಪ್ಪ, ಕವಿತಾ, ರಾಘವೇಂದ್ರ ಇತರರಿದ್ದರು.
ಓದಿ:ತಮ್ಮ ಹುಟ್ಟುಹಬ್ಬಕ್ಕೆ ಆನ್ಲೈನ್ ಮೂಲಕ ಋಷ್ಯಶೃಂಗೇಶ್ವರ ದರ್ಶನ ಪಡೆದ ಡಿಕೆಶಿ