ಕರ್ನಾಟಕ

karnataka

ETV Bharat / city

ಜಿಂಕೆ ಮಾಂಸ ಮಾರಾಟ: ಒಬ್ಬನ ಅರೆಸ್ಟ್​, ನಾಲ್ವರು ಪರಾರಿ - ಜಿಂಕೆ ಮಾಂಸ ಮಾರಾಟ

ಶಿವಮೊಗ್ಗ ತಾಲೂಕಿನ ಕುಂಸಿ ಸಮೀಪದ ಕೆಂಪಿನಕೊಪ್ಪ ಗ್ರಾಮದಲ್ಲಿ ಎರಡು ಜಿಂಕೆಗಳನ್ನ ಭೇಟೆಯಾಡಿ ಮಾಂಸ ಮಾರುತ್ತಿದ್ದ ವೇಳೆ ಅರಣ್ಯ ಇಲಾಖೆ ಅಧಿಕಾರಿ ದಾಳಿ ನಡೆಸಿ, ಒಬ್ಬ ಆರೋಪಿಯನ್ನ ಬಂಧಿಸಿದ್ದು, ಇನ್ನು ನಾಲ್ವರು ಆರೋಪಿಗಳು ಪರಾರಿಯಾಗಿದ್ದಾರೆ.

Deer Meat Sales: One Arrest, Four Parasites
ಜಿಂಕೆ ಮಾಂಸ ಮಾರಾಟ: ಓರ್ವ ಅರೆಸ್ಟ್​,ನಾಲ್ವರು ಪರಾರಿ

By

Published : Apr 4, 2020, 10:01 PM IST

ಶಿವಮೊಗ್ಗ: ಶಿವಮೊಗ್ಗ ತಾಲೂಕಿನ ಕುಂಸಿ ಸಮೀಪದ ಕೆಂಪಿನಕೊಪ್ಪ ಗ್ರಾಮದಲ್ಲಿ ಎರಡು ಜಿಂಕೆಗಳನ್ನ ಭೇಟೆಯಾಡಿ ಮಾಂಸ ಮಾರುತ್ತಿದ್ದ ವೇಳೆ ಅರಣ್ಯ ಇಲಾಖೆ ಅಧಿಕಾರಿ ದಾಳಿ ನಡೆಸಿ, ಓರ್ವ ಆರೋಪಿಯನ್ನ ಬಂಧಿಸಿದ್ದಾರೆ.

ಎರಡು ಜಿಂಕೆಗಳನ್ನು ಭೇಟೆಯಾಡಿ ಮಾಂಸ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅರಣ್ಯ ಇಲಾಖೆ‌ ಸಿಬ್ಬಂದಿ, ಓರ್ವ ಆರೋಪಿಯನ್ನ ಬಂಧಿಸಿದ್ದು, ಇನ್ನು ನಾಲ್ವರು ಆರೋಪಿಗಳು ಪರಾರಿಯಾಗಿದ್ದಾರೆ. ಈ ವೇಳೆ ಎರಡು ಜಿಂಕೆಗಳ ತಲೆಗಳು, ಎರಡು ಚರ್ಮ, ಎಂಟು ಕಾಲಗಳು ಪತ್ತೆ‌ಯಾಗಿವೆ.

ಇನ್ನೂ ಕೆಂಪಿನಕೊಪ್ಪದ ಫಾರ್ಮ್ ಹೌಸ್ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದಾಗ, ಇನ್ನೂ ನಾಲ್ಕು ಜಿಂಕೆಗಳ ಚರ್ಮ, 8 ಜಿಂಕೆಗಳ ಕೊಂಬುಗಳು ಹಾಗೂ ಒಂದು ಕಾಡುಕೋಣದ ಕೊಂಬು ಪತ್ತೆಯಾಗಿವೆ. ಈ ಬಗ್ಗೆ ಆಯನೂರು ವಲಯ ಅರಣ್ಯ ಕಚೇರಿಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details