ಶಿವಮೊಗ್ಗ:ಇಂದು ಮಧ್ಯಾಹ್ನ ತಾಯಿ ಜೊತೆ ಸಮೀಪದ ದೇವಾಲಯಕ್ಕೆ ಹೋಗುತ್ತಿದ್ದ ಮಗಳಿಗೆ ಲಾಂಗು ಮಚ್ಚು ತೋರಿಸಿ ಕಿಡ್ನಾಪ್ ಮಾಡಿದ ಕಿಡಿಗೇಡಿಗಳನ್ನು ಚೇಸ್ ಮಾಡಿದ ತಂದೆ ತಮ್ಮ ಮಗಳನ್ನು ಸಿನಿಮೀಯ ರೀತಿಯಲ್ಲಿ ಕಾಪಾಡಿದ್ದಾರೆ.
ಈ ಘಟನೆ ಯಡೂರು ಗ್ರಾಮದಲ್ಲಿ ನಡೆದಿದೆ. ಯಡೂರಿನ ಶ್ರೀಧರ್ ಎಂಬವರ ಮಗಳು ತನ್ನ ತಾಯಿಯೊಂದಿಗೆ ದೇವಾಲಯಕ್ಕೆ ಹೋಗುತ್ತಿದ್ದರು. ಏಕಾಏಕಿ ರಿಡ್ಜ್ ಕಾರಿನಲ್ಲಿ ಬಂದ ತೀರ್ಥಹಳ್ಳಿಯ ಕುರುವಳ್ಳಿ ನಾಗರಾಜ್ ಹಾಗೂ ಆತನ ಸ್ನೇಹಿತರು ಕಾರಿನಲ್ಲಿ ಯುವತಿಯನ್ನು ಅಪಹರಿಸಿಕೊಂಡು ಪರಾರಿಯಾದರು. ಈ ವೇಳೆ ಮಗಳನ್ನು ರಕ್ಷಿಸಲು ಮುಂದಾದ ತಾಯಿಯನ್ನೂ ತಳ್ಳಿ ಎಳೆದೊಯ್ದರು.
ಈ ವಿಚಾರ ತಿಳಿದ ಯುವತಿ ತಂದೆ ಮತ್ತು ತನ್ನ ಕಡೆಯವರು ಆ ಕಾರನ್ನು ಸಿನಿಮೀಯಾ ರೀತಿಯಲ್ಲಿ ಬೆನ್ನಟ್ಟಿದ ಶ್ರೀಧರ್ ಕಡೆಯವರು ತೀರ್ಥಹಳ್ಳಿಯ ಮುತ್ತೂರು ಗ್ರಾಮದ ಬಳಿ ಅಪಹರಣಕಾರರ ಕಾರನ್ನು ಅಡ್ಡಗಟ್ಟಿದರು. ತಕ್ಷಣ ಕುರುವಳ್ಳಿ ನಾಗರಾಜ್, ಆತನ ಸ್ನೇಹಿತರು ಕಾರನ್ನು ಹಾಗೂ ಯುವತಿಯನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.
ಯುವತಿಯನ್ನು ವಾಪಸ್ ಕರೆ ತರಲಾಗಿದ್ದು, ಕುರುವಳ್ಳಿ ನಾಗರಾಜ್ ನ ವಿರುದ್ದ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ನಾಗರಾಜ್ ಹಾಗೂ ಶ್ರೀಧರ್ ಮಗಳು ಪ್ರೀತಿಸುತ್ತಿದ್ದರು. ನಾಗರಾಜ ಶೋಕಿವಾಲನಾಗಿದ್ದ. ಈತ ಹುಡುಗಿಯರೊಂದಿಗೆ ಅನೈತಿಕ ವರ್ತಿಸಿ ವಿಡಿಯೋ ಮಾಡಿ ಬ್ಲಾಕ್ ಮೇಲ್ ಮಾಡುತ್ತಿದ್ದ. ಇದನ್ನು ತಿಳಿದ ಯುವತಿ ಆತನ ಸಹವಾಸ ಬಿಟ್ಟಿದ್ದಳು. ಇದರಿಂದ ಕುಪಿತಗೊಂಡ ನಾಗರಾಜ್ ತನ್ನನ್ನು ಪ್ರೀತಿಸಿ ಮೋಸ ಮಾಡ್ತೀಯಾ ಎಂದು ಅಪಹರಿಸಿದ್ದಾನೆ ಎಂದು ಪೊಲೀಸ್ ಮೂಲಗಳು ಹೇಳಿವೆ.