ಕರ್ನಾಟಕ

karnataka

ETV Bharat / city

ಶಿವಮೊಗ್ಗದಲ್ಲಿ ದಸರಾ ಸಂಭ್ರಮ: ನಾಡದೇವಿ ಮೆರವಣಿಗೆ ಜೋರು - Shivamogga

ಕೋಟೆ ಶ್ರೀ ಸೀತಾರಾಮಾಂಜನೇಯ ದೇವಸ್ಥಾನದ ಮುಂದೆ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿ ನಾಡದೇವಿ ಚಾಮುಂಡೇಶ್ವರಿ ಮೆರವಣಿಗೆಗೆ ಚಾಲನೆ ನೀಡಲಾಗಿದೆ.

Shivamogga
ನಾಡದೇವಿ ಮೆರವಣಿಗೆ

By

Published : Oct 15, 2021, 8:07 PM IST

Updated : Oct 15, 2021, 10:13 PM IST

ಶಿವಮೊಗ್ಗ:ಮಲೆನಾಡು ಶಿವಮೊಗ್ಗದಲ್ಲಿ ದಸರಾ ಆಚರಣೆ ನಡೆಯುತ್ತಿದ್ದು, ನಾಡದೇವಿ ಚಾಮುಂಡೇಶ್ವರಿ ದೇವಿಯ ವೈಭವದ ರಾಜಬೀದಿ ಮೆರವಣಿಗೆ ನಡೆಯಿತು.

ಶಿವಮೊಗ್ಗ ದಸರಾ: ನಾಡದೇವಿ ಮೆರವಣಿಗೆ

ನಗರದ ಕೋಟೆ ಶ್ರೀ ಸೀತಾರಾಮಾಂಜನೇಯ ದೇವಸ್ಥಾನದ ಮುಂದೆ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿ, ಮೆರವಣಿಗೆಗೆ ಚಾಲನೆ ನೀಡಲಾಯಿತು. ಈ ಬಾರಿ ಲಾರಿಯಲ್ಲಿ ನಾಡದೇವಿಯ ಮೆರವಣಿಗೆ ನಡೆಸಲಾಗಿದ್ದು, ಸಕ್ರೆಬೈಲು ಬಿಡಾರದಿಂದ ಬಂದಿರುವ ಸಾಗರ ಮತ್ತು ಭಾನುಮತಿ ಆನೆಗಳು ಮೆರವಣಿಗೆಯ ಅರ್ಧದವರೆಗೂ ಪಾಲ್ಗೊಂಡು, ದಸರಾ ಸಂಭ್ರಮ ಇಮ್ಮಡಿಗೊಳಿಸಿವೆ.

ಶಿವಮೊಗ್ಗ ದಸರಾ: ನಾಡದೇವಿ ಮೆರವಣಿಗೆ ..

ಜತೆಗೆ ಸಾಂಸ್ಕೃತಿಕ ಕಲಾ ತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು, ನಾಡದೇವಿಯ ಮೆರವಣಿಗೆಯ ಶಿವಮೊಗ್ಗದ ಫ್ರೀಡಂ ಫಾರ್ಕ್ ತಲುಪಿದ ಬಳಿಕ ಬನ್ನಿ ಮುಡಿಯುವ ಸಮಾರಂಭ ನಡೆಯಿತು.

ಶಿವಮೊಗ್ಗ ದಸರಾ: ನಾಡದೇವಿ ಮೆರವಣಿಗೆ

ಪಾಲಿಕೆ ಮೇಯರ್ ಸುನೀತಾ ಅಣ್ಣಪ್ಪ, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಶಿವಮೊಗ್ಗ ತಹಶೀಲ್ದಾರ್​​ ನಾಗರಾಜ, ಪಾಲಿಕೆ ಸದಸ್ಯರು, ಅಧಿಕಾರಿಗಳು ನಂದಿ ಪೂಜೆಯಲ್ಲಿ ಪಾಲ್ಗೊಂಡು, ನಾಡದೇವಿ ಚಾಮುಂಡೇಶ್ವರಿಯ ಮೂರ್ತಿಗೆ ಹೂವು ಹಾಕಿ, ನಮನ ಸಲ್ಲಿಸಿದರು.

ಸಾಂಪ್ರದಾಯಿಕವಾಗಿ ಅಂಬು ಕಡಿದು ಹಬ್ಬಕ್ಕೆ ತೆರೆ

ಸಾಂಪ್ರದಾಯಿಕವಾಗಿ ಅಂಬು ಕಡಿದು ಹಬ್ಬಕ್ಕೆ ತೆರೆ:

ಸಾಂಪ್ರದಾಯಿಕವಾಗಿ ಅಂಬು ಕಡಿದು, ಬನ್ನಿ ಮುಡಿಯುವ ಮೂಲಕ ದಸರಾ ಸಂಭ್ರಮಕ್ಕೆ ತೆರೆ ಎಳೆಯಲಾಯಿತು. ಶಿವಮೊಗ್ಗ ಮಹಾನಗರ ಪಾಲಿಕೆಯು ನಗರದ ಫ್ರೀಡಂ ಪಾರ್ಕ್ ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಿವಮೊಗ್ಗ ತಹಶೀಲ್ದಾರ್ ಎನ್.ಜೆ.ನಾಗರಾಜ್ ಅವರು ಅಂಬು ಕಡಿಯುವುದನ್ನು ನೆರೆದಿದ್ದ ಸಾವಿರಾರು ಜನರು ಕಣ್ತುಂಬಿಕೊಂಡರು.

ತಹಶೀಲ್ದಾರ್ ನಾಗರಾಜ್ ಅವರು ಅಂಬು ಕಡಿಯುತ್ತಿದ್ದಂತೆ ಜನರು ಘೋಷಣೆಗಳನ್ನು ಕೂಗಿದರಲ್ಲದೇ, ಪರಸ್ಪರ ಬನ್ನಿ ಹಂಚಿಕೊಂಡರು. ಬನ್ನಿ ಮುಡಿದು ಬಾಳು ಬಂಗಾರವಾಗಲಿ ಎಂದು ಹಾರೈಸಿದರು.

ಅಂಬು ಕಡಿಯುತ್ತಿದ್ದಂತೆ ಫ್ರೀಡಂ ಪಾರ್ಕ್​ನಲ್ಲಿ ಸ್ಥಾಪಿಸಲಾಗಿದ್ದ ರಾವಣನ ಪ್ರತಿಕೃತಿಯನ್ನು ದಹಿಸಲಾಯಿತು. ಬಾಣ ಬಿರುಸುಗಳ ಸೊಬಗು ಮುಗಿಲೆತ್ತರದಲ್ಲಿ ಕಣ್ಮನ ರಂಜಿಸಿತು. ಬನ್ನಿ ಮುಡಿಯುವ ಸಂಭ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಮೇಯರ್ ಸುನೀತಾ ಅಣ್ಣಪ್ಪ, ಮಹಾನಗರ ಪಾಲಿಕೆ ಆಯುಕ್ತ ಚಿದಾನಂದ ವಠಾರೆ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

Last Updated : Oct 15, 2021, 10:13 PM IST

ABOUT THE AUTHOR

...view details