ದಾವಣಗೆರೆ: ಮುಸ್ಲಿಮರಿಗೆ ದೇಶದ ಪ್ರಧಾನಮಂತ್ರಿ ಆಗುವ ಅರ್ಹತೆ ಇದೆ. ಮುಸ್ಲಿಮರು ರಾಷ್ರಪತಿಯಾಗಿಲ್ವಾ, ವಿಜ್ಞಾನಿಗಳಾಗಿಲ್ವಾ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರಶ್ನಿಸಿದರು. ದಾವಣಗೆರೆಯಲ್ಲಿ ಮಾತನಾಡಿದ ಅವರು, ಕಷ್ಟಕಾಲದಲ್ಲಿ ಬಡವರ ಹೊಟ್ಟೆ ಮೇಲೆ ಬರೆ ಹಾಕಿದರು. ಎಲ್ಲಾದರೂ ಗಾಡಿ ನಿಂತರೆ ಪಂಕ್ಚರ್ ಯಾರು ಹಾಕುತ್ತಾರೆ? ಸಂವಿಧಾನ ಕಿತ್ತು ಹಾಕಲು ನಿಮ್ಮಿಂದ ಆಗುತ್ತಾ?, ದೇಶ ಶಾಂತಿಯ ತೋಟವೆಂದು ನಾವು ಬದುಕಬೇಕು. ಬೆಂಗಳೂರಲ್ಲಿ ದೊಡ್ಡ ದೊಡ್ಡ ಬಿಲ್ಡಿಂಗ್ಗಳನ್ನು ಮುಸ್ಲಿಮರೇ ಕಟ್ಟಿದ್ದಾರೆ. ಪ್ರಧಾನಿಯಾಗುವ ಯೋಗ್ಯತೆ ಅವರಲ್ಲಿದೆ ಎಂದರು.
ಹಲಾಲ್, ಪಲಾಲ್ ಎಲ್ಲ ಮಾಡಿದ್ದು ಯಾರು?:ಹಲಾಲ್, ಪಲಾಲ್ ಎಲ್ಲ ಮಾಡಿದ್ದು ಬಿಜೆಪಿಯವರೇ. ನಮ್ಮ ಭಾಗದಲ್ಲಿ ಕಬ್ಬಾಳಮ್ಮ ದೇವಸ್ಥಾನ ಇದೆ. ಅಲ್ಲಿ ಸಾವಿರ ಮರಿ ಕಡೀತಾರೆ. ಕಡಿದ ಮರಿಗಳನ್ನು ಮುಸ್ಲಿಮರೇ ಕ್ಲಿನ್ ಮಾಡುತ್ತಾರೆ. ಕೋಲಾರ, ರಾಮನಗರದಲ್ಲಿ ಮಾವಿನ ತೋಪಿಗೆ ಔಷಧಿ ಹೊಡೆಯುವರು ಯಾರು? ಬಿಜೆಪಿಯವರು ಭೇದ ಮಾಡಿರುವುದರ ಪರಿಣಾಮ ಸಂತೆ, ಜಾತ್ರೆಗಳ ಮೇಲೆ ಬಿದ್ದಿದೆ ಎಂದರು.