ಶಿವಮೊಗ್ಗ: ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ಸೈಬರ್ ಕ್ರೈಮ್ ಪ್ರಕರಣಗಳ ಸಂಖ್ಯೆ ಅಧಿಕವಾಗಿದ್ದು, ಈ ಹಿನ್ನೆಲೆಯಲ್ಲಿ ಪೋಲಿಸ್ ಇಲಾಖೆ ಆಟೋ ಮೂಲಕ ಸೈಬರ್ ಕ್ರೈಮ್ ಕುರಿತು ಜಾಗೃತಿ ಮೂಡಿಸುತ್ತಿದೆ.
ಆಟೋದಲ್ಲಿ 'ಸೈಬರ್ ಕ್ರೈಮ್' ಜಾಗೃತಿ ಮೂಡಿಸುತ್ತಿರುವ ಪೋಲಿಸ್ ಇಲಾಖೆ - ಜಿಲ್ಲಾ ಸೈಬರ್ ಕ್ರೈಮ್ ಪೋಲಿಸ್ ಇಲಾಖೆ
ಸೈಬರ್ ಅಪರಾಧ ಪ್ರಕರಣಗಳು ಹೆಚ್ಚಳದ ಈ ಹಿನ್ನೆಲೆಯಲ್ಲಿ ಸೈಬರ್ ಕ್ರೈಮ್ ಪೋಲಿಸರು ಆಟೋದ ಮೂಲಕ ಧ್ವನಿವರ್ಧಕಗಳಲ್ಲಿ ಸೈಬರ್ ಕ್ರೈಮ್ ಕುರಿತು ಜಾಗೃತಿಯಾಗಿರಲು ಘೋಷಿಸಿದರು. ಭಿತ್ತಿ ಪತ್ರಗಳನ್ನೂ ಪ್ರದರ್ಶಿಸಿದರು.
cyber crime police department awareness to people about cyber crime
ಬ್ಯಾಂಕ್ ಅಧಿಕಾರಿಗಳ ಸೋಗಿನಲ್ಲಿ ಕರೆ ಮಾಡಿ ಬ್ಯಾಂಕ್ ಖಾತೆಗೆ ಕನ್ನ ಹಾಕುತ್ತಾರೆ. ಅಧಿಕಾರಿಗಳು ದೂರವಾಣಿ ಮೂಲಕ ಯಾವುದೇ ಮಾಹಿತಿ ಪಡೆಯುವುದಿಲ್ಲ. ಹಾಗಾಗಿ ನಾಗರಿಕರು ಇಂತಹ ಕರೆಗಳ ಬಗ್ಗೆ ಎಚ್ಚರವಹಿಸಬೇಕು. ಅಪರಿಚಿತರ ಕರೆ ಬಂದಲ್ಲಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಪ್ರಚಾರ ಮಾಡಲಾಯಿತು.