ಕರ್ನಾಟಕ

karnataka

ETV Bharat / city

ಅಲೋಪತಿ ಬೇಡ, ಆಯುರ್ವೇದ ಚಿಕಿತ್ಸೆ ನೀಡಿ: ಪ್ರಧಾನಿ, ಸಿಎಂಗೆ ಸೋಂಕಿತ ಸ್ವಾಮೀಜಿ ಪತ್ರ - ಶಿವಮೊಗ್ಗ ಸುದ್ದಿ

ಶಿವಮೊಗ್ಗ ಹೊರವಲಯದಲ್ಲಿರುವ ಸ್ವಾಮೀಜಿ ಕಳೆದ ವಾರ ತೀವ್ರ ಉಸಿರಾಟದ ಸಮಸ್ಯೆಯಿಂದ ಮೆಗ್ಗಾನ್ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು. ಇವರಿಗೆ ಬಳಿಕ ಕೊರೊನಾ ಸೋಂಕು ದೃಢಪಟ್ಟಿತ್ತು. ಮೂರ್ನಾಲ್ಕು ದಿನ ಚಿಕಿತ್ಸೆ ಪಡೆದ ನಂತರ ಅವರು ತಮಗೆ ಆಯುರ್ವೇದ ಚಿಕಿತ್ಸೆ ನೀಡಿ ಎಂದು ಆಸ್ಪತ್ರೆಯ ವೈದ್ಯಾಧಿಕಾರಿಗಳಿಗೆ ಮನವಿ‌ ಮಾಡಿದ್ದಾರೆ.

Covid
ಕೊರೊನಾ

By

Published : Jun 17, 2020, 1:20 PM IST

ಶಿವಮೊಗ್ಗ: ಶಿವಮೊಗ್ಗದ ಸ್ವಾಮೀಜಿಯೊಬ್ಬರಿಗೆ ಕೊರೊನಾ ದೃಢವಾಗಿದ್ದು ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನನಗೆ ಅಲೋಪತಿ ಚಿಕಿತ್ಸೆ ಬೇಡ. ಆಯುರ್ವೇದ ಚಿಕಿತ್ಸೆ ನೀಡಬೇಕು ಎಂದು ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಸಿಎಂ ಯಡಿಯೂರಪ್ಪಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

ಶಿವಮೊಗ್ಗ ಹೊರವಲಯದಲ್ಲಿರುವ ಸ್ವಾಮೀಜಿ ಕಳೆದ ವಾರ ತೀವ್ರ ಉಸಿರಾಟದ ಸಮಸ್ಯೆಯಿಂದ ಮೆಗ್ಗಾನ್ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು. ಮೂರ್ನಾಲ್ಕು ದಿನ ಚಿಕಿತ್ಸೆ ಪಡೆದ ನಂತರ ಅವರು ತಮಗೆ ಆಯುರ್ವೇದ ಚಿಕಿತ್ಸೆ ನೀಡಿ ಎಂದು ಆಸ್ಪತ್ರೆಯ ವೈದ್ಯಾಧಿಕಾರಿಗಳಿಗೆ ಮನವಿ‌ ಮಾಡಿದ್ದಾರೆ. ಆದರೆ ಆಯುರ್ವೇದ ಚಿಕಿತ್ಸೆ ನೀಡುವ ಅವಕಾಶವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಇದಕ್ಕೆ ಸ್ವಾಮೀಜಿ ಪಿಎಂ ಹಾಗು ಸಿಎಂ ಹಾಗು ಶಿವಮೊಗ್ಗ ಡಿಸಿ ಸೇರಿದಂತೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.

ಪತ್ರದ ಸಾರ...

ತಮಗೆ ಮೊದಲಿನಿಂದಲೂ ಆಯುರ್ವೇದ ಚಿಕಿತ್ಸೆಯಲ್ಲಿ‌ ನಂಬಿಕೆ ಇದ್ದು, ಅದೇ ಚಿಕಿತ್ಸೆಯನ್ನು ನೀಡಬೇಕು. ಅಲೋಪತಿ ಚಿಕಿತ್ಸೆ ಕೇವಲ ಕ್ಷಣಿಕವಾಗಿದ್ದು, ಆಯುರ್ವೇದದಲ್ಲಿ ಖಾಯಿಲೆ ಸಂಪೂರ್ಣ ಗುಣಮುಖವಾಗುತ್ತದೆ ಎಂಬ ನಂಬಿಕೆ ಇದೆ. ಸದ್ಯ ಮೆಗ್ಗಾನ್ ಬೋಧನಾಸ್ಪತ್ರೆಯಲ್ಲಿಯೇ ತಾನು ಕೇಳಿದ ಮಾದರಿಯಲ್ಲಿಯೇ ಕಾಲೇಜಿನ ಪ್ರೊಫೆಸರ್​ಗಳಿಂದ ಚಿಕಿತ್ಸೆ ಕೊಡಿಸಿ ಎಂದು ಕೇಳಿ‌ಕೊಂಡಿದ್ದಾರೆ ಎಂದಿದ್ದಾರೆ.

ABOUT THE AUTHOR

...view details