ಶಿವಮೊಗ್ಗ :ನಗರದ ಮೆಗ್ಗಾನ್ ಆಸ್ಪತ್ರೆಯಲ್ಲಿ ನಿಮಾರ್ಣವಾಗಿರುವ ಕೊರೊನ ಸ್ಪೆಷಲ್ ವಾರ್ಡ್ಗೆ ಮಹಾನಗರ ಪಾಲಿಕೆ ಕಾಂಗ್ರೆಸ್ ಸದಸ್ಯರು ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳನ್ನ ಪರಿಶೀಲನೆ ನಡೆಸಿದ್ರು.
ಮೆಗ್ಗಾನ್ ಆಸ್ಪತ್ರೆಯಲ್ಲಿ ಕೊರೊನಾ ವಾರ್ಡ್‌ನ ಪರೀಶಿಲಿಸಿದ ಪಾಲಿಕೆ ಕೈ ಸದಸ್ಯರು.. - Meggan Hospital, Shimoga
ರೋಗಿಗಳಿಗೆ ಚಿಕಿತ್ಸೆ ನೀಡಲು ವೈದ್ಯರು ಹಾಗೂ ಸಿಬ್ಬಂದಿ ಹಿಂದೇಟು ಹಾಕುವ ಸ್ಥಿತಿ ನಿರ್ಮಾಣವಾಗಿದೆ. ಜತೆಗೆ ಸೂಕ್ತ ಸಲಕರಣೆಗಳ ಕೊರೆತೆಯಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪಾಲಿಕೆ ಕಾಂಗ್ರೆಸ್ ಸದಸ್ಯರು ಮೆಗ್ಗಾನ್ ಆಸ್ಪತ್ರೆಗೆ ಭೇಟಿ ನೀಡಿದ್ದರು.
ಮೆಗ್ಗಾನ್ ಆಸ್ಪತ್ರೆಯಲ್ಲಿ ಕೊರೊನ ವಾರ್ಡ್ ಸಿದ್ಧತೆ ಪರೀಶಿಲಿಸಿದ ಮಹಾನಗರ ಪಾಲಿಕೆ ಸದಸ್ಯರು
ಕೊರೊನಾ ವೈರಸ್ ಪತ್ತೆಯಾದರೆ ರೋಗಿಗಳಿಗೆ ಚಿಕಿತ್ಸೆ ನೀಡಲು ವೈದ್ಯರು ಹಾಗೂ ಸಿಬ್ಬಂದಿ ಹಿಂದೇಟು ಹಾಕುವ ಸ್ಥಿತಿ ನಿರ್ಮಾಣವಾಗಿದೆ. ಜತೆಗೆ ಸೂಕ್ತ ಸಲಕರಣೆಗಳ ಕೊರೆತೆಯಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪಾಲಿಕೆ ಕಾಂಗ್ರೆಸ್ ಸದಸ್ಯರು ಮೆಗ್ಗಾನ್ ಆಸ್ಪತ್ರೆಯಲ್ಲಿನ ಕೊರೊನಾ ಸ್ಪೆಷಲ್ ವಾರ್ಡ್ ಸಿದ್ಧತೆ ಪರಿಶೀಲಿಸಿದರು.
ಇದೇ ವೇಳೆ ಮಾತನಾಡಿದ ಪಾಲಿಕೆ ವಿಪಕ್ಷ ನಾಯಕ ಹೆಚ್ ಸಿ ಯೋಗೇಶ್, ಮೆಗ್ಗಾನ್ ಆಸ್ಪತ್ರೆಯಲ್ಲಿ ಕೊರೊನಾ ತಡೆಗೆ ಸಂಬಂಧಿಸಿದಂತೆ ಮಾಸ್ಕ್ ಹಾಗೂ ಗೌನ್ಗಳು, ಟೆಸ್ಟಿಂಗ್ ಕಿಟ್ಗಳು, ವೆಂಟಿಲೇಟರ್ಗಳನ್ನ ರೆಡಿ ಮಾಡಿರಿಸಲಾಗಿದೆ ಎಂದರು.