ಶಿವಮೊಗ್ಗ: ಶಿಕಾರಿಪುರದ 60 ವರ್ಷದ ವೃದ್ಧೆ ಕೊರೊನಾಗೆ ಬಲಿಯಾಗಿದ್ದಾರೆ. ಇವರು ಕಳೆದ 4 ದಿನಗಳ ಹಿಂದೆ ಮೆಗ್ಗಾನ್ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆ 16 ತಲುಪಿದೆ.
ಕೊರೊನಾಗೆ ಶಿವಮೊಗ್ಗದಲ್ಲಿಂದು ಮತ್ತೊಂದು ಬಲಿ: ಮೃತರ ಸಂಖ್ಯೆ 16ಕ್ಕೆ ಏರಿಕೆ
ಕೊರೊನಾ ಸೋಂಕಿತರ ಸಾವಿನ ಸಂಖ್ಯೆ ಶಿವಮೊಗ್ಗದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇಂದು ಕೂಡಾ ಒರ್ವ ವೃದ್ಧೆ ಮಹಿಳೆ ಕೋವಿಡ್ ಸೋಂಕಿಗೆ ಪ್ರಾಣ ಕಳೆದುಕೊಂಡಿದ್ದಾರೆ.
ಮೆಗ್ಗಾನ್ ಕೋವಿಡ್ ಆಸ್ಪತ್ರೆ
ಮೃತ ವೃದ್ಧೆ, ಹೆಚ್ಒನ್ (H1) ಎನ್ಒನ್ (N1) ನಿಂದ ಬಳಲುತ್ತಿದ್ದರು. ಮರಣಾನಂತರ ಕೋವಿಡ್ ಟೆಸ್ಟ್ ನಡೆಸಿದ ಬಳಿಕ ಕೊರೊನಾ ಪಾಸಿಟಿವ್ ಕಂಡು ಬಂದಿದೆ. ಮೃತರ ಅಂತ್ಯಕ್ರಿಯೆಯನ್ನು ಕೋವಿಡ್ ಮಾರ್ಗಸೂಚಿಯಂತೆ ಶಿವಮೊಗ್ಗದ ಗೋಪಾಳದ ಸ್ಮಶಾನದದಲ್ಲಿ ನಡೆಸಲಾಗುತ್ತಿದೆ.
ಶಿವಮೊಗ್ಗದಲ್ಲಿ ಕಳೆದ 15 ದಿನಗಳಿಂದ ಪ್ರತಿನಿತ್ಯ ಒಂದೊಂದು ಸಾವು ಸಂಭವಿಸುತ್ತಿದೆ. ಅದರಲ್ಲೂ ವಯಸ್ಸಾದವರು ಸಾವನ್ನಪ್ಪಿರುವುದು ಸಾಕಷ್ಟು ಆಂತಕಕ್ಕೆ ಕಾರಣವಾಗಿದೆ.