ಕರ್ನಾಟಕ

karnataka

ETV Bharat / city

ಮಲೆನಾಡಿಗರ ನಿದ್ದೆಗೆಡಿಸಿದ್ದ ಮಂಗನ ಕಾಯಿಲೆ ಮೇಲೆ ಮುಂದುವರೆದ ಸಂಶೋಧನೆ

ಪ್ರತಿ ವರ್ಷ ಮಲೆನಾಡು ಜನರ ನಿದ್ದೆಗೆಡಿಸುತ್ತಿದ್ದ ಮಂಗನ ಕಾಯಿಲೆ ಬಗ್ಗೆ ಸಂಶೋಧನೆ ನಡೆಸಲು ಇಂಡಿಯನ್ ಇನ್ಸ್​ಟಿಟ್ಯೂಟ್ ಆಫ್ ಸೈನ್ಸ್ ಸಂಸ್ಥೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಐಸಿಎಂಆರ್ ಅನುಮತಿಗಾಗಿ ಕಾಯಲಾಗುತ್ತಿದೆ.

Continued research on  KFD
ಮಲೆನಾಡಿಗರ ನಿದ್ದೆಗೆಡಿಸಿದ್ದ ಮಂಗನಕಾಯಿಲೆ ಮೇಲೆ ಮುಂದುವರೆದ ಸಂಶೋಧನೆ

By

Published : Jul 17, 2020, 4:39 PM IST

ಶಿವಮೊಗ್ಗ:ಮಂಗನ ಕಾಯಿಲೆ ಎಂದಾಕ್ಷಣ ಮಲೆನಾಡಿನ ಜನರು ಬೆಚ್ಚಿ ಬೀಳುತ್ತಾರೆ. ಕಳೆದ ಐದಾರು ದಶಕಗಳಿಂದ ಮಂಗನ ಕಾಯಿಲೆ ಮಲೆನಾಡಿಗರನ್ನ (ಕೆಎಫ್​​ಡಿ) ಬಿಡದೇ ಕಾಡುತ್ತಿದೆ. ಪ್ರತಿ ವರ್ಷ ಅಕ್ಟೋಬರ್ ತಿಂಗಳಲ್ಲಿ ಮಲೆನಾಡಿನ ಜನರು ಮನೆಯಿಂದ ಹೊರ ಹೋಗಲು ಭಯ ಪಡುವಂತಹ ಸ್ಥಿತಿ ಎದುರಾಗಿದೆ. ಈ ಮಂಗನ ಕಾಯಿಲೆ ಮೇಲೆ ಇದೀಗ ನಿರಂತರ ಸಂಶೋಧನೆಗಳು ಆರಂಭಗೊಂಡಿವೆ.

ಮಲೆನಾಡಿಗರ ನಿದ್ದೆಗೆಡಿಸಿದ್ದ ಮಂಗನ ಕಾಯಿಲೆ ಮೇಲೆ ಮುಂದುವರೆದ ಸಂಶೋಧನೆ

ಇದರ ಮೊದಲ ಭಾಗವಾಗಿ ಕೆಎಫ್​ಡಿ ಸಂಬಂಧಿತ ಸಮಗ್ರ ಮ್ಯಾನುವಲ್ ಸಿದ್ಧಪಡಿಸಿ, ಇತ್ತೀಚಿಗಷ್ಟೇ ಸರ್ಕಾರದಿಂದ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಮಂಗನ ಕಾಯಿಲೆ ಎಂದರೆ ಏನು, ಅದು ಹೇಗೆ ಹರಡುತ್ತದೆ ಎಂಬುದರ ಬಗ್ಗೆ ಅದರ ಸರ್ವೇಕ್ಷಣಾ ಕಾರ್ಯ ಕುರಿತ ಸಮಗ್ರ ಮಾಹಿತಿ ಇದೆ. ಈವರೆಗೆ 2001-02ನೇ ಸಾಲಿನ ಕೆಎಫ್​ಡಿ ಮ್ಯಾನುವಲ್​​ಅನ್ನೇ ಬಳಸಲಾಗುತ್ತಿದ್ದು, ಇದೀಗ ಹೊಸ ಮ್ಯಾನುವಲ್ ಬಿಡುಗಡೆ ಮಾಡಲಾಗಿದೆ.

ಇದುವರೆಗೆ ಮಂಗನ ಕಾಯಿಲೆ ಬಗ್ಗೆ ಹೆಚ್ಚಿನ ಸಂಶೋಧನೆಗಳು ನಡೆಯದೇ ಇದ್ದಿದ್ದರಿಂದಾಗಿ ಸೂಕ್ತ ಔಷಧ ಕಂಡು ಹಿಡಿಯಲು ಸಾಧ್ಯವಾಗಿರಲಿಲ್ಲ. ಆದರೆ ಈ ವರ್ಷ ಇಂಡಿಯನ್ ಇನ್ಸ್​ಟಿಟ್ಯೂಟ್ ಆಫ್ ಸೈನ್ಸ್ ಸಂಸ್ಥೆ ಕೆಎಫ್​ಡಿ ಬಗ್ಗೆ ಸಂಶೋಧನೆ ನಡೆಸಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದೆ. ಪ್ರಸ್ತುತ ಐಸಿಎಂಆರ್ ಅನುಮತಿಗಾಗಿ ಕಾಯಲಾಗುತ್ತಿದ್ದು, ಅದು ದೊರೆತ ತಕ್ಷಣ ವೈರಸ್ ಮಟ್ಟದಲ್ಲಿ ಮತ್ತಷ್ಟು ಸಂಶೋಧನೆಗಳು ಚುರುಕುಗೊಳ್ಳಲಿವೆ. ಈ ನಡುವೆ ಮಂಗನ ಕಾಯಿಲೆಗೆ ವ್ಯಾಕ್ಸಿನೇಶನ್, ಉಗುಣಗಳನ್ನ ಸಾಯಿಸುವ ಹಾಗೂ ಓಡಿಸುವ ಸಂಬಂಧ ನಿರಂತರ ಸಂಶೋಧನೆ ನಡೆಸಲಾಗುತ್ತಿದೆ.

ABOUT THE AUTHOR

...view details