ಶಿವಮೊಗ್ಗ:ಕಾನೂನಿನ ಅರಿವು ಪ್ರತಿಯೊಬ್ಬರಿಗೂ ಇರಬೇಕು. ಎಲ್ಲರೂ ಕಾನೂನು ಪದವೀಧರರಾಗಲು ಸಾಧ್ಯವಿಲ್ಲ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಆರ್.ಕೆ.ಜಿ.ಎಂ.ಎಂ ಮಹಾಸ್ವಾಮೀಜಿ ಅಭಿಪ್ರಾಯಪಟ್ಟರು.
ಪ್ರತಿಯೊಬ್ಬರಿಗೂ ಕಾನೂನಿನ ಅರಿವು ಇರಬೇಕು: ಮಹಾಸ್ವಾಮೀಜಿ - ಸಂವಿಧಾನ ದಿನಾಚರಣೆ
ಶಿವಮೊಗ್ಗದ ವಕೀಲರ ಭವನದಲ್ಲಿ ವಕೀಲರು ಸಂವಿಧಾನ ದಿನಾಚರಣೆ ಆಚರಿಸಿದರು.
ಸಂವಿಧಾನ ದಿನಾಚರಣೆ
ನಗರದ ವಕೀಲರ ಭವನದಲ್ಲಿ ಕರ್ನಾಟಕ ಕಾನೂನು ಸೇವೆಗಳ ಪ್ರಾಧಿಕಾರ, ಶಿವಮೊಗ್ಗ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರಜಾಪ್ರಭುತ್ವ ರಾಷ್ಟ್ರದಲ್ಲಿದ್ದೇವೆ. ಹಾಗಾಗಿ ಎಲ್ಲರಿಗೂ ಕಾನೂನಿನ ಅರಿವು ಮತ್ತು ಮಹತ್ವ ತಿಳಿದಿರಬೇಕು ಎಂದರು.