ಕರ್ನಾಟಕ

karnataka

ETV Bharat / city

ತವರು ಜಿಲ್ಲೆ ವೈದ್ಯರೊಂದಿಗೆ ವಿಡಿಯೋ ಕಾನ್ಸರೆನ್ಸ್ ನಡೆಸಿದ ಸಿಎಂ ಯಡಿಯೂರಪ್ಪ - ಅರವಳಿಕೆ ತಜ್ಞ ಡಾ ಗಣೇಶ್ ಭಟ್ ಜೊತೆ ಯಡಿಯೂರಪ್ಪ ಸಂವಾದ

ಇದೀಗ ಎರಡನೇ ಲಸಿಕೆಯನ್ನು ಮಾತ್ರ ನೀಡುತ್ತಿದ್ದೇವೆ. 18-45 ವರ್ಷದವರಿಗೆ ಪ್ರಸ್ತುತ ಲಸಿಕೆಯನ್ನು ನೀಡುವುದನ್ನು ಸ್ಥಗಿತಗೊಳಿಸಲಾಗಿದೆ ಎಂದು ಡಾ.ಗಣೇಶ್ ಭಟ್ ಅವರು ಹೇಳಿದರು..

cm-yeddyurappa
ಸಿಎಂ ಯಡಿಯೂರಪ್ಪ

By

Published : May 15, 2021, 8:26 PM IST

ಶಿವಮೊಗ್ಗ : ಸಿಎಂ ಯಡಿಯೂರಪ್ಪ ಇಂದು ತೀರ್ಥಹಳ್ಳಿಯ ಜೆಸಿ ಆಸ್ಪತ್ರೆಯ ಅರವಳಿಕೆ ತಜ್ಞ ಡಾ.ಗಣೇಶ್ ಭಟ್ ಅವರೂಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿ ಕೋವಿಡ್ ನಿರ್ವಹಣೆ ಕುರಿತಾಗಿ ಮಾಹಿತಿ ಪಡೆದರು.

ಇಂದು ಕೋವಿಡ್​​ ನಿಯಂತ್ರಣಕ್ಕೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ರಾಜ್ಯದ ಆಯ್ದ 11 ಮಂದಿ ತಜ್ಞ ವೈದ್ಯರೊಂದಿಗೆ ಮುಖ್ಯಮಂತ್ರಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿ ಫೀಡ್‌ಬ್ಯಾಕ್ ಪಡೆದರು.

ತಜ್ಞ ವೈದ್ಯರು ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಮುಖ್ಯಮಂತ್ರಿ ಅವರೊಂದಿಗೆ ಹಂಚಿಕೊಂಡು ಸಲಹೆ, ಸೂಚನೆಗಳನ್ನು ಸಹ ನೀಡಿದರು.

ತೀರ್ಥಹಳ್ಳಿ ತಾಲೂಕು ಪೂರ್ಣ ಮಲೆನಾಡು ಪ್ರದೇಶವಾಗಿದೆ. ಅಲ್ಲಿನ ಗ್ರಾಮೀಣ ಭಾಗದ ಪರಿಸ್ಥಿತಿ ಹೇಗಿದೆ? ತಾಲೂಕು ಕೇಂದ್ರದಿಂದ ಜಿಲ್ಲಾಸ್ಪತ್ರೆಗೆ ರೋಗಿಯನ್ನು ಕರೆದುಕೊಂಡು ಹೋಗಲು ಯಾವ ರೀತಿ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಿಕೊಂಡಿದ್ದೀರಿ?.

ತಾಲೂಕಿನಲ್ಲಿ ಪ್ರಸ್ತುತ ಎಷ್ಟು ಮಂದಿಗೆ ಕೋವಿಡ್ ಲಸಿಕೆ ನೀಡಲಾಗಿದೆ? ಚಿಕಿತ್ಸೆಗೆ ಅಗತ್ಯವಿರುವ ಔಷಧಿಗಳ ವ್ಯವಸ್ಥೆ ಹೇಗಿದೆ? ಗ್ರಾಮೀಣ ಪ್ರದೇಶದ ಜನರ ಚಿಕಿತ್ಸೆ ಹಾಗೂ ಮುಂಜಾಗರೂಕತಾ ಕ್ರಮಗಳ ಕುರಿತು ನಿಮ್ಮ ಸಲಹೆಗಳೇನಾದರೂ ಇದ್ದರೆ ತಿಳಿಸಿ ಎಂದು ಡಾ.ಗಣೇಶ್ ಭಟ್ ಅವರಿಗೆ ಸಿಎಂ ಬಿಎಸ್​​ವೈ ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಡಾ.ಗಣೆಶ್​​ ಭಟ್​​​ ಅವರು, 100 ಬೆಡ್ ಆಸ್ಪತ್ರೆಯಲ್ಲಿ 50 ಬೆಡ್ ಕೋವಿಡ್‌ಗೆ ಮೀಸಲಿರಿಸಲಾಗಿದೆ. 47 ಪಾಸಿಟಿವ್ ವ್ಯಕ್ತಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.

12 ಮಂದಿ ಆಕ್ಸಿಜನ್‌ನಲ್ಲಿದ್ದಾರೆ. ಪ್ರತಿ ದಿನ ಸಂಜೆ ತಾಲೂಕು ಮೆಡಿಕಲ್ ಆಫೀಸರ್, ತಹಶೀಲ್ದಾರ್, ಶಾಸಕರ ಸಭೆಯನ್ನು ನಡೆಸಿ ಕೋವಿಡ್ ನಿರ್ವಹಣೆ ಕುರಿತು ಪರಿಶೀಲನೆ ನಡೆಸುತ್ತೇವೆ. ಇದರಿಂದ ಸಮಸ್ಯೆಗಳನ್ನು ಬಗೆಹರಿಸಲು ಹಾಗೂ ವ್ಯವಸ್ಥೆಯನ್ನು ಉತ್ತಮಪಡಿಸಲು ಸಾಧ್ಯವಾಗಿದೆ.

ಪ್ರಸ್ತುತ ತಾಲೂಕು ಆಸ್ಪತ್ರೆಯಲ್ಲಿ 2 ಆ್ಯಂಬುಲೆನ್ಸ್ ಜಿಲ್ಲಾಸ್ಪತ್ರೆಗೆ ರೋಗಿಗಳನ್ನು ಕರೆದುಕೊಂಡು ಹೋಗಲು ವ್ಯವಸ್ಥೆ ಮಾಡಲಾಗಿದೆ. ಇನ್ನು, ನಾಲ್ಕು ಆ್ಯಂಬುಲೆನ್ಸ್ ಗ್ರಾಮೀಣ ಪ್ರದೇಶದಿಂದ ಕೋವಿಡ್ ಪಾಸಿಟಿವ್ ವ್ಯಕ್ತಿಗಳನ್ನು ತಾಲೂಕು ಆಸ್ಪತ್ರೆಗೆ ಟ್ರಯಾಜ್‌ಗೆ ಕರೆದುಕೊಂಡು ಹೋಗಲು ಬಳಸುತ್ತಿದ್ದೇವೆ.

ಇದೇ ರೀತಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ರಚಿಸಲಾಗಿರುವ ಟಾಸ್ಕ್ಫೋರ್ಸ್ ಮೂಲಕ ರೋಗಿಗಳನ್ನು ಕರೆ ತರಲು ಹಾಗೂ ಹೋಂ ಐಸೋಲೇಷನ್‌ನಲ್ಲಿರುವವರ ಚಿಕಿತ್ಸೆಗಾಗಿ ನಾಲ್ಕು ವಾಹನ ಬಳಸಲಾಗುತ್ತಿದೆ. ಜಿಲ್ಲಾ ಮಟ್ಟ ಮತ್ತು ತಾಲೂಕು ಮಟ್ಟದಲ್ಲಿ ಅಧಿಕಾರಿಗಳು ನಿರಂತರ ಸಂಪರ್ಕ ಸಾಧಿಸಿ ಸಮನ್ವಯದಿಂದ ಕಾರ್ಯ ನಿರ್ವಹಿಸುತ್ತಿದ್ದೇವೆ.

ಪ್ರಸ್ತುತ ನಮ್ಮಲ್ಲಿ ಆಕ್ಸಿಜನ್ ಪ್ಲಾಂಟ್ ಇರುವುದಿಲ್ಲ. ಇಲ್ಲಿಯೇ ಆಕ್ಸಿಜನ್ ಪ್ಲಾಂಟ್ ಇದ್ದರೆ ನಾವು ಇನ್ನಷ್ಟು ಸೇವೆ ನೀಡಲು ಸಾಧ್ಯವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ತಾಲೂಕಿನಲ್ಲಿ ಟೆಲಿಮೆಡಿಸಿನ್ ಸೌಲಭ್ಯ ಆರಂಭಿಸಲಾಗಿದ್ದು, ಮೂರು ಮಂದಿ ವೈದ್ಯರು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಹೋಂ ಐಸೋಲೇಷನ್‌ನಲ್ಲಿರುವವರು ಇದರ ಸೌಲಭ್ಯವನ್ನು ಗರಿಷ್ಟವಾಗಿ ಬಳಸುತ್ತಿದ್ದು, ರೋಗ ಲಕ್ಷಣಗಳಿಗೆ ಫೋನ್ ಮೂಲಕ ವೈದ್ಯರ ನೆರವು ಪಡೆಯಲು ಇದರಿಂದ ಸಾಧ್ಯವಾಗಿದೆ. ಇದೀಗ 45 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆಯನ್ನು ನೀಡುತ್ತಿದೆ.

ಇದೀಗ ಎರಡನೇ ಲಸಿಕೆಯನ್ನು ಮಾತ್ರ ನೀಡುತ್ತಿದ್ದೇವೆ. 18-45 ವರ್ಷದವರಿಗೆ ಪ್ರಸ್ತುತ ಲಸಿಕೆಯನ್ನು ನೀಡುವುದನ್ನು ಸ್ಥಗಿತಗೊಳಿಸಲಾಗಿದೆ ಎಂದು ಡಾ.ಗಣೇಶ್ ಭಟ್ ಅವರು ಹೇಳಿದರು.

ವೈದ್ಯರ ಕಾರ್ಯನಿರ್ವಹಣೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಮಾತನಾಡಿದ ಮುಖ್ಯಮಂತ್ರಿ ಅವರು, ಎರಡನೇ ಅಲೆ ನಿರೀಕ್ಷೆಗೂ ಮೀರಿ ತೀವ್ರಗೊಂಡಿದೆ. ಇದರಿಂದಾಗಿ ಆಸ್ಪತೆಗಳ ಮೆಲೆ ವೈದ್ಯರ ಮೇಲೆ ಕಾರ್ಯದ ಒತ್ತಡ ಹೆಚ್ಚಿದೆ.

ಇಂತಹ ಸಂದಿಗ್ಧ ಪರಿಸ್ಥಿತಿಯನ್ನು ಮಾನವೀಯತೆಯ ನೆಲೆಯಲ್ಲಿ ನೀವೆಲ್ಲರೂ ಸಮರ್ಥವಾಗಿ ಎದುರಿಸುತ್ತಿದ್ದೀರಿ. ಜನರ ಜೀವ ಉಳಿಸುವುದರೊಂದಿಗೆ, ಚಿಕಿತ್ಸಾ ಸೌಲಭ್ಯಗಳು, ಔಷಧಿಗಳು, ಮಾನವ ಸಂಪನ್ಮೂಲಗಳ ಪಾರದರ್ಶಕ ಹಾಗೂ ದಕ್ಷ ಬಳಕೆಗೂ ಆದ್ಯತೆ ನೀಡಬೇಕಾಗಿದೆ.

ಸೋಂಕಿನಿಂದ ತಮಗಿರುವ ಅಪಾಯವನ್ನು ಲೆಕ್ಕಿಸದೆ , ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ವೈದ್ಯರು, ನರ್ಸ್‌ಗಳು ಮತ್ತಿತರ ಎಲ್ಲಾ ಆರೋಗ್ಯ ಕಾರ್ಯಕರ್ತರು ನಾಡಿನ ಅಮೂಲ್ಯ ಆಸ್ತಿ. ಸರ್ಕಾರ ಸದಾ ನಿಮ್ಮೊಂದಿಗೆ, ನಿಮ್ಮ ಹಿತರಕ್ಷಣೆಗೆ ಬದ್ಧವಾಗಿದೆ ಎಂದು ಹೇಳಿದರು.

For All Latest Updates

TAGGED:

ABOUT THE AUTHOR

...view details