ಶಿವಮೊಗ್ಗ :ಚರಕ ಸಂಸ್ಥೆಗೆ ಸರ್ಕಾರದಿಂದ ಬರಬೇಕಾದ 2.50 ಕೋಟಿ ರೂ. ಬಾರದೆ, ಚರಕ ಸಂಸ್ಥೆ ನಷ್ಟಕ್ಕೀಡಾಗಿದೆ. ಸರ್ಕಾರದ ನಿರ್ಲಕ್ಷ್ಯ ನೀತಿ ಖಂಡಿಸಿ, ಚರಕ ಸಂಸ್ಥೆಯು ಶಿವಮೊಗ್ಗದ ಕೇಂದ್ರ ಕಾರಾಗೃಹದ ಮಹಿಳಾ ಬಂಧಿಗಳಿಗೆ ಉಚಿತ ಸೀರೆ ವಿತರಿಸಿದರು.
ಸರ್ಕಾರದಿಂದ ಬಾರದ ಹಣ, ಪ್ರತಿಭಟನೆ ರೂಪವಾಗಿ ಉಚಿತ ಸೀರೆ ವಿತರಿಸಿದ ಚರಕ ಸಂಸ್ಥೆ - Charaka Agency distributes free saris
ಇನ್ನು ಮುಂದೆ ಜೈಲು ಶಿಕ್ಷೆ ಅನುಭವಿಸಿ, ಕೆಲಸವಿಲ್ಲದ ಮಹಿಳೆಯರು ಚರಕ ಸಂಸ್ಥೆಗೆ ಬಂದರೆ ಅವರಿಗೆ ಕೆಲಸ ನೀಡಲಾಗುವುದು ಎಂದು ಚರಕದ ಮುಖ್ಯಸ್ಥ ಪ್ರಸನ್ನ ಅವರು ತಿಳಿಸಿದ್ದಾರೆ. ಚರಕದ ಈ ಕಾರ್ಯಕ್ಕೆ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಡಾ. ಪಿ ರಂಗನಾಥ್ ಹಾಗೂ ಮಹಿಳಾ ಕಾರಾಗೃಹದ ಜೈಲರ್ ಅನಿತಾ ಅವರು ಅಭಿನಂದಿಸಿದರು..
ಚರಕ ಸಂಸ್ಥೆಯು ಮಹಿಳೆಯರಿಂದಲೇ, ಚರಕದಿಂದ ನೂಲನ್ನು ನೇಯ್ದು, ನೈಸರ್ಗಿಕ ಬಣ್ಣದಿಂದ ಬಟ್ಟೆ ತಯಾರು ಮಾಡುತ್ತಾರೆ. ಇಂತಹ ಸಂಸ್ಥೆಯು ಲಾಕ್‌ಡೌನ್‌ನಿಂದ ಬಟ್ಟೆ ದಾಸ್ತಾನು ಉಳಿಯುವಂತಾಗಿದೆ. ಈ ರೀತಿ ಉಳಿದ ಬಟ್ಟೆಗಳನ್ನು ಬಡವರಿಗೆ ವಿತರಿಸಲಾಗುತ್ತಿದೆ. ಈಗಾಗಲೇ ಸಾಗರ, ಹೊಸನಗರ ಭಾಗದ ಬಡ ಗ್ರಾಮೀಣ ಜನರಿಗೆ ವಿತರಣೆ ಮಾಡಲಾಗಿದೆ.
ಇನ್ನು ಮುಂದೆ ಜೈಲು ಶಿಕ್ಷೆ ಅನುಭವಿಸಿ, ಕೆಲಸವಿಲ್ಲದ ಮಹಿಳೆಯರು ಚರಕ ಸಂಸ್ಥೆಗೆ ಬಂದರೆ ಅವರಿಗೆ ಕೆಲಸ ನೀಡಲಾಗುವುದು ಎಂದು ಚರಕದ ಮುಖ್ಯಸ್ಥ ಪ್ರಸನ್ನ ಅವರು ತಿಳಿಸಿದ್ದಾರೆ. ಚರಕದ ಈ ಕಾರ್ಯಕ್ಕೆ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಡಾ. ಪಿ ರಂಗನಾಥ್ ಹಾಗೂ ಮಹಿಳಾ ಕಾರಾಗೃಹದ ಜೈಲರ್ ಅನಿತಾ ಅವರು ಅಭಿನಂದಿಸಿದರು. ಈ ವೇಳೆ ಚರಕದ ಕಾರ್ಯದರ್ಶಿ ಪ್ರತಿಭಾ, ಚರಕದ ಸಂಸ್ಥೆಯ ಮಹಾಲಕ್ಷ್ಮಿ ಹಾಜರಿದ್ದರು.