ಕರ್ನಾಟಕ

karnataka

ETV Bharat / city

ನೀರು ಕೇಳುವ ನೆಪದಲ್ಲಿ ಮಹಿಳೆಯ ಸರ ಎಗರಿಸಲು ಯತ್ನ; ಓರ್ವ ಪೊಲೀಸ್ ವಶ - one arrested

ಕಾರಿನಲ್ಲಿ ಬಂದು ಕುಡಿಯುವ ನೀರು ಕೇಳುವ ನೆಪದಲ್ಲಿ ಕಿಡಿಗೇಡಿಯೊಬ್ಬ ಮಹಿಳೆಯ ಸರಗಳ್ಳತನಕ್ಕೆ ಯತ್ನಿಸಿದ ಘಟನೆ ತೀರ್ಥಹಳ್ಳಿಯಲ್ಲಿ ನಡೆದಿದೆ.

Chain Snatching case in Thirthahalli one arrested
ನೀರು ಕೇಳುವ ನೆಪದಲ್ಲಿ ಕಳ್ಳತನ

By

Published : Jun 24, 2022, 4:06 PM IST

ಶಿವಮೊಗ್ಗ: ನೀರು ಕೇಳುವ ನೆಪದಲ್ಲಿ ಬಂದ ದುಷ್ಕರ್ಮಿಯೊಬ್ಬ ಮಹಿಳೆಯ ಸರ ಎಗರಿಸಲು ಯತ್ನಿಸಿದ ಘಟನೆ ತೀರ್ಥಹಳ್ಳಿ ತಾಲೂಕಿನ ಹಾದಿಗಲ್ಲು ಗ್ರಾಮ ಪಂಚಾಯತಿ ವ್ಯಾಪ್ತಿಯ ಕರಡಿಗ ಗ್ರಾಮದಲ್ಲಿ ನಡೆದಿದೆ. ಕಾರಿನಲ್ಲಿ ಬಂದಿದ್ದ ಇಬ್ಬರಲ್ಲೊಬ್ಬ ಮನೆಯೊಳಗೆ ಹೋಗಿ ಕುಡಿಯಲು ನೀರು ಕೇಳಿದ್ದಾನೆ. ಮಹಿಳೆ ನೀರು ತರುತ್ತಿದ್ದಂತೆಯೇ ಆಕೆಯ ಬಾಯಿ ಮುಚ್ಚಿ ಕೊರಳಿನಲ್ಲಿದ್ದ ಮಾಂಗಲ್ಯ ಸರ ಕಿತ್ತುಕೊಳ್ಳುವ ಯತ್ನ ಮಾಡಿದ್ದಾನೆ.

ಮಹಿಳೆ ಆತನಿಂದ ಬಿಡಿಸಿಕೊಂಡು ಜೋರಾಗಿ ಕಿರುಚಿದ್ದಾರೆ. ನೆರೆಮನೆಯವರು ಸ್ಥಳಕ್ಕೆ ಬಂದಿದ್ದಾರೆ. ಅಷ್ಟರಲ್ಲಿ ಆರೋಪಿ ಓಡಿ ಹೋಗಿದ್ದಾನೆ. ಕಾರಿನಲ್ಲಿ ಕುಳಿತುಕೊಂಡಿದ್ದ ಇನ್ನೊಬ್ಬ ತಪ್ಪಿಸಿಕೊಳ್ಳಲು ಸಾಧ್ಯವಾಗದೆ ಗ್ರಾಮಸ್ಥರ ಕೈಗೆ ಸಿಕ್ಕಿಹಾಕಿಕೊಂಡ. ಆತನನ್ನು ವಿಚಾರಿಸಿದಾಗ, ನಾವಿಬ್ಬರು ಉತ್ತರ ಕರ್ನಾಟಕದವರು, ಇಲ್ಲಿಗೆ ಜೆಸಿಬಿ ಕೆಲಸಕ್ಕೆಂದು ಬಂದಿದ್ದೇವೆ ಎಂದು ತಿಳಿಸಿದ್ದಾನೆ.

ಈತನನ್ನು ತೀರ್ಥಹಳ್ಳಿ ಪೊಲೀಸರಿಗೆ ಗ್ರಾಮಸ್ಥರು ಒಪ್ಪಿಸಿದ್ದಾರೆ. ಕಾರು ಕೋಣಂದೂರು ಮೂಲದವರದ್ದು ಎಂದು ತಿಳಿದು ಬಂದಿದೆ.

ಇದನ್ನೂ ಓದಿ:ಸಿಸಿಬಿ ಪೊಲೀಸರ ಕಾರ್ಯಾಚರಣೆ: ಇಬ್ಬರು ನೈಜೀರಿಯಾ ಡ್ರಗ್ಸ್ ಪೆಡ್ಲರ್ ಅಂದರ್

ABOUT THE AUTHOR

...view details