ಶಿವಮೊಗ್ಗ: ಕಾರು ಚಾಲಕನ ನಿರ್ಲಕ್ಷ್ಯದ ಚಾಲನೆಗೆ ಏಳು ಎಮ್ಮೆಗಳು ಬಲಿಯಾಗಿರುವ ಘಟನೆ ಶಿವಮೊಗ್ಗ ಹೊರ ವಲಯದಲ್ಲಿ ನಡೆದಿದೆ. ಗಾಡಿಕೊಪ್ಪದ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಬ್ರಿಜಾ ಕಾರೊಂದು ರಸ್ತೆ ಪಕ್ಕದಲ್ಲಿ ಸಾಗುತ್ತಿದ್ದ ಎಮ್ಮೆಗಳಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಎಮ್ಮೆಗಳು ಸ್ಥಳದಲ್ಲೇ ಸಾವನ್ನಪ್ಪಿವೆ. 5 ಎಮ್ಮೆಗಳಿಗೆ ಗಾಯಗಳಾಗಿವೆ.
ಗಾಡಿಕೊಪ್ಪದ ನಿವಾಸಿ ಮಂಜುನಾಥ್ ಎಂಬುವರಿಗೆ ಸೇರಿದ ಎಮ್ಮೆಗಳಾಗಿದ್ದು, ನಿನ್ನೆ ರಾತ್ರಿ ಮಲ್ಲಿಗೇನಹಳ್ಳಿ ಕಡೆ ಮೇಯಲು ಹೋಗಿದ್ದ ಎಮ್ಮೆಗಳನ್ನು ಮನೆ ಕಡೆ ಕರೆದುಕೊಂಡು ಬರುವಾಗ ಕಾರು ವೇಗವಾಗಿ ಬಂದು ಎಮ್ಮೆಗಳ ಗುಂಪಿಗೆ ಬಡಿದಿದೆ.