ಶಿವಮೊಗ್ಗ:ನಗರದ ವಿವೇಕಾನಂದ ಬಡಾವಣೆಯಲ್ಲಿ ಚಪ್ಪಲಿ ಕದಿಯುವ ಗ್ಯಾಂಗ್ ಸಕ್ರಿಯವಾಗಿದ್ದು, ಹೊಸ ಪಾದರಕ್ಷೆ ಖರೀದಿಸಿದರೂ ಮನೆಯ ಹೊರಗಡೆ ಇಡುವುದಕ್ಕೆ ಭಯ ಪಡುವಂತಾಗಿದೆ.
ಮನೆ ಹೊರಗಡೆ ಚಪ್ಪಲಿ ಬಿಡುವಾಗ ಎಚ್ಚರ.. ಶಿವಮೊಗ್ಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ ಚಪ್ಪಲಿ ಚೋರರು - slipper thieves in Shivamogga
ಶಿವಮೊಗ್ಗದಲ್ಲಿ ಹೊಸ ಪಾದರಕ್ಷೆ ಖರೀದಿಸಿದರೂ ಮನೆಯ ಹೊರಗಡೆ ಇಡುವುದಕ್ಕೆ ಭಯ ಪಡುವಂತಾಗಿದೆ. ಏಕೆಂದರೆ, ವಿವೇಕಾನಂದ ಬಡಾವಣೆಯಲ್ಲಿ ಚಪ್ಪಲಿ ಕದಿಯುವ ಗ್ಯಾಂಗ್ ಸಕ್ರಿಯವಾಗಿದ್ದು, ಸಿಸಿಟಿವಿ ಕ್ಯಾಮೆರಾದಲ್ಲಿ ಕಳ್ಳರ ಕರಾಮತ್ತು ಸೆರೆಯಾಗಿದೆ.
ಮನೆ ಹೊರಗಡೆ ಚಪ್ಪಲಿ ಬಿಡೋಕು ಮುನ್ನ ಎಚ್ಚರ..ನಗರದಲ್ಲಿದೆ ಚಪ್ಪಲಿ ಕಳ್ಳರ ಗ್ಯಾಂಗ್
ದೇವಾಲಯ, ಮದುವೆ-ಮುಂಜಿಗಳಲ್ಲಿ ಚಪ್ಪಲಿ ಕಳ್ಳತನವಾಗುವುದು ಸಾಮಾನ್ಯ. ಆದರೆ, ಶಿವಮೊಗ್ಗ ನಗರದ ಹೊರವಲಯದಲ್ಲಿರುವ ಕೆಲ ಬಡಾವಣೆಗಳಲ್ಲಿ ಮನೆಯ ಮುಂದಿರುವ ಚಪ್ಪಲಿಯನ್ನು ಸಹ ಕದಿಯಲಾಗುತ್ತಿದೆ. ರಾತ್ರಿ ವೇಳೆ ಮನೆಯ ಮುಂದಿಟ್ಟಿರುವ ಚಪ್ಪಲಿಗಳನ್ನು ಕಳವು ಮಾಡಲಾಗುತ್ತಿದ್ದು, ಈ ದೃಶ್ಯ ವಿವೇಕಾನಂದ ಬಡಾವಣೆಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ವಾರದಲ್ಲಿ ಎರಡು ಬಾರಿಯಾದರೂ ಚಪ್ಪಲಿ ಕಳ್ಳತನ ನಡೆಯುತ್ತಿದ್ದು, ಈ ಕುರಿತು ಸ್ಥಳೀಯರು ತುಂಗಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.