ಕರ್ನಾಟಕ

karnataka

ETV Bharat / city

ಕಂದಾಯ ದಾಖಲೆ ಪತ್ರಗಳನ್ನು ಮನೆಗೆ ತಲುಪಿಸುವ ಯೋಜನೆಯನ್ನು ರೈತರು ಸದುಪಯೋಗ ಪಡಿಸಿಕೊಳ್ಳಬೇಕು: ಬಿ.ಎಸ್.ವೈ - BSY drive to deliver revenue documents to farmers' home

ಕಂದಾಯ ದಾಖಲೆಗಳನ್ನು ರೈತರ ಮನೆ ಬಾಗಿಲಿಗೆ ತಲುಪಿಸುವ ಯೋಜನೆಯನ್ನು ರಾಜ್ಯ ಸರ್ಕಾರ ತಂದಿದ್ದು, ಎಲ್ಲರೂ ಈ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ. ಎಲ್ಲರ ಅನುಕೂಲಕ್ಕೆ ಸರ್ಕಾರದ ದಿಟ್ಟ ಯೋಜನೆಯಾಗಿದೆ ಎಂದು ಬಿಎಸ್ ವೈ ಬಣ್ಣಿಸಿದರು.

bsy-drive-to-deliver-revenue-documents-to-farmers-home
ಬಿ.ಎಸ್.ಯಡಿಯೂರಪ್ಪ

By

Published : Mar 12, 2022, 9:11 PM IST

ಶಿವಮೊಗ್ಗ:ರಾಜ್ಯ ಸರ್ಕಾರದ ನೂತನ ಯೋಜನೆಯಾದ ಕಂದಾಯ ದಾಖಲೆಗಳನ್ನು ರೈತರ - ಸಾರ್ವಜನಿಕರ ಮನೆ ಬಾಗಿಲಿಗೆ ತಲುಪಿಸುವ ಯೋಜನೆಯನ್ನು ಎಲ್ಲರೂ ಸದುಪಯೋಗ ಪಡಿಸಿಕೊಳ್ಳಬೇಕೆಂದು ಮಾಜಿ ಸಿಎಂ ಹಾಗೂ ಶಿಕಾರಿಪುರ ಶಾಸಕ ಬಿ.ಎಸ್. ಯಡಿಯೂರಪ್ಪ ಜನತೆಗೆ ಕರೆ ನೀಡಿದರು.

ಕಂದಾಯಪತ್ರಗಳನ್ನು ರೈತರ ಮನೆಗೆ ತಲುಪಿಸುವ ಯೋಜನೆಗೆ ಯಡಿಯೂರಪ್ಪ ಚಾಲನೆ ನೀಡಿದರು.

ಶಿಕಾರಿಪುರ ತಾಲೂಕಿನ ಹುಲಗಿನ ಕಟ್ಟೆ ಗ್ರಾಮದಲ್ಲಿ ಮತ್ತು ಹಾರೋಗೊಪ್ಪ ಗ್ರಾಮದಲ್ಲಿ ಕಂದಾಯ ದಾಖಲೆಗಳನ್ನು ರೈತರ ಹಾಗೂ ಸಾರ್ವಜನಿಕರ ಮನೆ ಬಾಗಿಲಿಗೆ ತಲುಪಿಸುವ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ರಾಜ್ಯ ಸರ್ಕಾರ ಈ ಯೋಜನೆಯ ಮೂಲಕ ರೈತರು ಹಾಗೂ ಸಾರ್ವಜನಿಕರು ಕೇವಲ ದಾಖಲೆಗಾಗಿ ಸರ್ಕಾರಿ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಲು ಹಾಗೂ ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಲು ಜಾರಿಗೊಳಿಸಿದೆ. ಈ ಮೂಲಕ ಎಲ್ಲರ ಅನುಕೂಲಕ್ಕೆ ಸರ್ಕಾರದ ದಿಟ್ಟ ಯೋಜನೆಯಾಗಿದೆ ಎಂದು ಯಡಿಯೂರಪ್ಪ ಬಣ್ಣಿಸಿದರು.

ಈ ಸಂದರ್ಭ ಸಂಸದ ಬಿ.ವೈ. ರಾಘವೇಂದ್ರ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಚೆನ್ನವೀರಪ್ಪ, ತಹಶೀಲ್ದಾರ್ ಕವಿರಾಜ್, ಉಪ ವಿಭಾಗಧಿಕಾರಿ ನಾಗರಾಜ್, ಕುಮಾರ್ ಗೌಡ್ರು, ಕೊರಳಲ್ಲಿ ನಾಗರಾಜ್ ಹಾರೋಕೊಪ್ಪ ಗ್ರಾಮ ಪಂಚಾಯತ್​ ಅಧ್ಯಕ್ಷ ಸುಬ್ರಮಣ್ಯ, ಶ್ರೀಧರ್, ಶ್ರೀಮತಿ ಗಾಯತ್ರಿ ಬಾಯಿ ಮತ್ತಿತರರು ಉಪಸ್ಥಿತರಿದ್ದರು.

ಓದಿ :ಪಂಚರಾಜ್ಯಗಳಲ್ಲಿ ಸೋತು ಸುಣ್ಣವಾದ ಕಾಂಗ್ರೆಸ್​​.. ನಾಳೆ ಪಕ್ಷದ ಕಾರ್ಯಕಾರಿ ಸಮಿತಿ ಸಭೆ

ABOUT THE AUTHOR

...view details