ಕರ್ನಾಟಕ

karnataka

ETV Bharat / city

ಪ್ರಧಾನಿಯನ್ನು ವಿಮಾನದಲ್ಲೇ ಕರೆತಂದು ವಿಮಾನ ನಿಲ್ದಾಣ  ಉದ್ಘಾಟಿಸುವ ಅಪೇಕ್ಷೆ: ಬಿಎಸ್‌ವೈ - BS Yediyurappa statement in shivamogga

ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಕಾರ್ಯಕ್ರಮವನ್ನು ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಮುಂಭಾಗ ಹಮ್ಮಿಕೊಳ್ಳಲಾಗಿತ್ತು‌.

BS Yediyurappa
ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ

By

Published : May 3, 2022, 8:06 AM IST

ಶಿವಮೊಗ್ಗ:ಪ್ರಧಾನಿ ನರೇಂದ್ರ ಮೋದಿಯವರನ್ನು ಬೆಂಗಳೂರಿನಿಂದ ಶಿವಮೊಗ್ಗಕ್ಕೆ ವಿಮಾನದಲ್ಲೇ ಕರೆತಂದು ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆ ಮಾಡಿಸುವ ಅಪೇಕ್ಷೆ ಇದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.


ಶಿವಮೊಗ್ಗ ನಮ್ಮ ನಿರೀಕ್ಷೆ ಮೀರಿ ಒಳ್ಳೆಯ ರೀತಿಯಲ್ಲಿ ಬೆಳೆಯುತ್ತಿದೆ. ಇನ್ನು ಆರೇಳು ತಿಂಗಳಲ್ಲಿ ವಿಮಾನ ನಿಲ್ದಾಣ ಕಾಮಗಾರಿ ಮುಗಿಯಲಿದೆ. ನಾನು ಉಪಮುಖ್ಯಮಂತ್ರಿಯಾಗಿದ್ದ ವೇಳೆಯಲ್ಲಿ ಮಂಜೂರಾದ ಶಿವಮೊಗ್ಗ ಮೆಡಿಕಲ್ ಕಾಲೇಜು ಇಂದು ರಾಜ್ಯದಲ್ಲೇ ಟಾಪ್ ಕಾಲೇಜು ಆಗಿದೆ. ಕೋವಿಡ್ ಸಂಕಷ್ಟದ ಸಮಯದಲ್ಲಿ ಉತ್ತಮ ಸೇವೆ ನೀಡಿದೆ. ಹಿಂದೆ ಹೆಚ್ಚಿನ ಚಿಕಿತ್ಸೆಗಾಗಿ ಜನರು ಮಣಿಪಾಲಕ್ಕೆ ಹೆಚ್ಚು ಹೋಗುತ್ತಿದ್ದರು.

ಆದರೆ ಈಗ ಅದು ಶೇ.90ರಷ್ಟು ಕಡಿಮೆ ಆಗಿದೆ. ಆ ರೀತಿಯ ವ್ಯವಸ್ಥೆಗಳು, ಸೌಲಭ್ಯ ಶಿವಮೊಗ್ಗದಲ್ಲೇ ದೊರಕುತ್ತಿದೆ. ಯಾವುದೇ ರೋಗಿಗೆ ಅಗತ್ಯವಾದ ಎಲ್ಲ ರೀತಿಯ ಚಿಕಿತ್ಸೆ ನೀಡುವ ಪ್ರಾಮಾಣಿಕ ಪ್ರಯತ್ನವನ್ನು ವೈದ್ಯರು ಸೇರಿದಂತೆ ಎಲ್ಲ ಸಿಬ್ಬಂದಿ ಮಾಡಬೇಕೆಂದು ಅವರು ಮನವಿ ಮಾಡಿದರು.

ಇದನ್ನೂ ಓದಿ:'ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ; ನಮ್ಮ ಗುರಿಯೇನಿದ್ದರೂ 150 ಸ್ಥಾನ ಗೆಲ್ಲೋದಷ್ಟೇ'

ABOUT THE AUTHOR

...view details