ಶಿವಮೊಗ್ಗ:ಫೆಬ್ರವರಿ 20ರಂದು ದುಷ್ಕರ್ಮಿಗಳಿಂದ ಕೊಲೆಯಾದ ಹರ್ಷನ ಕುಟುಂಬಕ್ಕೆ ರಾಜ್ಯ ಸರ್ಕಾರದಿಂದ ನೀಡಿದ 25 ಲಕ್ಷ ರೂ. ಚೆಕ್ ಅನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಸ್ತಾಂತರಿಸಿದರು.
ಇಂದು ಹರ್ಷನ ಮನೆಗೆ ಭೇಟಿ ನೀಡಿದ ಬಿಎಸ್ವೈ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಬಳಿಕ ಮಾತನಾಡುತ್ತಾ, ಹರ್ಷ ಈ ಭಾಗದಲ್ಲಿ ಎಲ್ಲರೊಂದಿಗೆ ಪ್ರೀತಿ ವಿಶ್ವಾಸದಿಂದಿದ್ದು, ಹಿಂದೂ ನಾಯಕನಾಗಿ ಬೆಳೆಯುತ್ತಿದ್ದ. ಇದನ್ನು ಸಹಿಸದೆ ಅವನನ್ನು ಕೊಲೆ ಮಾಡಲಾಗಿದೆ ಎಂದು ದೂರಿದರು.