ಶಿವಮೊಗ್ಗ: ಉಪ ಚುನಾವಣೆಯಲ್ಲಿ 15 ಕ್ಷೇತ್ರಗಳಲ್ಲಿಯೂ ಸಹ ಬಿಜೆಪಿ ಅಭ್ಯರ್ಥಿಗಳೇ ಗೆಲ್ಲುತ್ತಾರೆ ಎನ್ನುವ ವಿಶ್ವಾಸವನ್ನು ಸಂಸದ ಬಿ ವೈ ರಾಘವೇಂದ್ರ ವ್ಯಕ್ತಪಡಿಸಿದ್ದಾರೆ.
ಉಪ ಚುನಾವಣೆಯಲ್ಲಿ ಎಲ್ಲಾ ಕ್ಷೇತ್ರದಲ್ಲೂ ಬಿಜೆಪಿಗೆ ಗೆಲುವು.. ಸಂಸದ ರಾಘವೇಂದ್ರ ವಿಶ್ವಾಸ - ಉಪ ಚುನಾವಣೆಯಲ್ಲಿ ಎಲ್ಲಾ ಕ್ಷೇತ್ರದಲ್ಲೂ ಬಿಜೆಪಿಯೇ ಗೆಲ್ಲುತ್ತದೆ
ಉಪ ಚುನಾವಣೆಯಲ್ಲಿ 15 ಕ್ಷೇತ್ರಗಳಲ್ಲಿಯೂ ಸಹ ಬಿಜೆಪಿ ಅಭ್ಯರ್ಥಿಗಳೇ ಗೆಲ್ಲುತ್ತಾರೆ ಎನ್ನುವ ವಿಶ್ವಾಸವನ್ನು ಸಂಸದ ಬಿ ವೈ ರಾಘವೇಂದ್ರ ವ್ಯಕ್ತಪಡಿಸಿದ್ದಾರೆ.
370ನೇ ವಿಧಿ ರದ್ದು ವಿಚಾರ ಕುರಿತು ಗಣ್ಯ ವ್ಯಕ್ತಿಗಳಲ್ಲಿ ಅರಿವು ಮೂಡಿಸಿ, ಬಿಜೆಪಿ ಪಕ್ಷ ಹೊರ ತಂದ ಪುಸ್ತಕವನ್ನು ಗಣ್ಯರಿಗೆ ನೀಡಲು ಅವರ ಮನೆಗಳಿಗೆ ಭೇಟಿ ವೇಳೆ ಮಾತನಾಡಿದ ಅವರು, ಉಪ ಚುನಾವಣೆಯಲ್ಲಿ ಜನ ಬಿಜೆಪಿಗೆ ಆಶೀರ್ವಾದ ಮಾಡಲಿದ್ದಾರೆ. ನಾವೆಲ್ಲಾ ಪಕ್ಷದ ಪರವಾಗಿ ಪ್ರಚಾರಕ್ಕೆ ಹೋಗುತ್ತೇವೆ. ಅನರ್ಹ ಶಾಸಕರ ಕುರಿತು ಈಗ ಮಾತನಾಡುವುದು ಸರಿಯಲ್ಲ. ಅವರ ವಿಚಾರ ಇನ್ನೂ ಕೋರ್ಟ್ನಲ್ಲಿ ಇರುವುದರಿಂದ ಅವರ ಬಗ್ಗೆ ಮಾತನಾಡಲು ಆಗುವುದಿಲ್ಲ ಎಂದರು.
ಇನ್ನು ಸಂಸದರು, ಜಿಲ್ಲಾಧ್ಯಕ್ಷ ರುದ್ರೇಗೌಡರು, ಜಿಲ್ಲಾ ಯುವಮೋರ್ಚಾದ ಅಧ್ಯಕ್ಷರು, ಮಹಿಳಾ ಮೋರ್ಚಾದವರ ಜೊತೆ ಸೇರಿ ಗಣ್ಯರ ಮನೆಗಳಿಗೆ ಭೇಟಿ ನೀಡಿ 370 ವಿಧಿ ರದ್ದತಿಯ ಬಗ್ಗೆ ತಿಳಿಸಿ ಕೊಟ್ಟರು.