ಕರ್ನಾಟಕ

karnataka

ಹಲ್ಲೆಗೊಳಗಾದ ಭಜರಂಗದಳ ಕಾರ್ಯಕರ್ತನ ಆರೋಗ್ಯ ವಿಚಾರಿಸಿದ ಬಿಜೆಪಿ ನಾಯಕರು

ಶಿವಮೊಗ್ಗದಲ್ಲಿ ಮತ್ತೆ ಭಜರಂಗದಳ ಕಾರ್ಯಕರ್ತನ ಮೆಲೆ ಅನ್ಯಕೋಮಿನವರು ಹಲ್ಲೆ ಮಾಡಿದ್ದಾರೆ.

By

Published : Jul 12, 2022, 8:33 PM IST

Published : Jul 12, 2022, 8:33 PM IST

attack
ಬಿಜೆಪಿ ನಾಯಕರ ಭೇಟಿ

ಶಿವಮೊಗ್ಗ:ಸೋಮವಾರ ತಡರಾತ್ರಿ ನಗರದ ರಾಜೀವ್‌ ಗಾಂಧಿ ಬಡಾವಣೆಯ ಮೊದಲನೇ ತಿರುವಿನಲ್ಲಿ ಯುವಕ ಕಾಂತರಾಜ್ ಮೇಲೆ ಅನ್ಯಕೋಮಿನ ಯುವಕರು ಹಲ್ಲೆ ಮಾಡಿರುವ ಘಟನೆಯನ್ನು ಜಿಲ್ಲಾ ಬಿಜೆಪಿ ತೀವ್ರವಾಗಿ ಖಂಡಿಸಿದೆ. ಮೆಗ್ಗಾನ್ ಆಸ್ಪತ್ರೆ ಚಿಕಿತ್ಸೆ ಪಡೆಯುತ್ತಿರುವ ದಾಳಿಗೊಳಗಾದ ಕಾಂತರಾಜ್​ರನ್ನು ಇಂದು ಜಿಲ್ಲಾ ಬಿಜೆಪಿ ಮುಖಂಡರು ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ. ಮೇಘರಾಜ್ ಮಾತನಾಡಿ, ಸಣ್ಣ-ಪುಟ್ಟ ಗಾಯಗಳಾಗಿವೆ ಎಂದು ಪೊಲೀಸರು ನಿರ್ಲಕ್ಷಿಸುವಂತಿಲ್ಲ. ಇದನ್ನು ಹಿಂದೂ ಸಮಾಜದ ದೌರ್ಬಲ್ಯ ಎಂದು ಭಾವಿಸಬೇಡಿ. ಈ ಬಗ್ಗೆ ತೀವ್ರವಾದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಪೊಲೀಸ್‌ ಇಲಾಖೆ ವಿಶೇಷವಾಗಿ ಗಮನಹರಿಸಬೇಕೆಂದು ಆಗ್ರಹಿಸಿದರು.

(ಇದನ್ನೂ ಓದಿ: ಶಿವಮೊಗ್ಗದಲ್ಲಿ ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರು ಹಿಂದೂ ಯುವಕರ ಮೇಲೆ ಹಲ್ಲೆ: ಆಸ್ಪತ್ರೆಗೆ ದಾಖಲು)

ವಿಭಾಗ ಪ್ರಭಾರಿ ಗಿರೀಶ್ ಪಟೇಲ್, ವಿಭಾಗ ಸಂಘಟನಾ ಸಹ ಕಾರ್ಯದರ್ಶಿ ಎ.ಎನ್. ನಟರಾಜ್, ಎಸ್. ದತ್ತಾತ್ರಿ, ಮೇಯರ್ ಸುನಿತಾ ಅಣ್ಣಪ್ಪ ಎನ್.ಜಿ. ನಾಗರಾಜ್, ಜಗದೀಶ್, ಶಿವರಾಜ್, ಬಿ.ಕೆ. ಶ್ರೀನಾಥ್, ಹೃಷಿಕೇಶ್ ಪೈ, ಜ್ಯೋತಿ ಪ್ರಕಾಶ್, ಬಳ್ಳೆಕೆರೆ ಸಂತೋಷ್, ಮೋಹನ್ ರೆಡ್ಡಿ ಇದ್ದರು.

ಇದನ್ನೂ ಓದಿ :ಜನರ ಕಣ್ಣೆದುರೇ ಹಳ್ಳದಲ್ಲಿ ಕೊಚ್ಚಿ ಹೋದ ವ್ಯಕ್ತಿ.. ಚಿಕ್ಕಮಗಳೂರು ಜಿಲ್ಲೆಯಲ್ಲಿ ರಣ ಮಳೆಗೆ ಮೂರನೇ ಬಲಿ

ABOUT THE AUTHOR

...view details