ಶಿವಮೊಗ್ಗ:ಭದ್ರಾವತಿಯಲ್ಲಿ ಬಿಜೆಪಿ ಕಾರ್ಯದರ್ಶಿ ಮೇಲೆ ನಡೆದ ಹಲ್ಲೆ ಖಂಡನೀಯ. ಇದನ್ನು ಸರ್ಕಾರ ಸಹಿಸುವುದಿಲ್ಲ ಎಂದು ಸಚಿವ ಈಶ್ವರಪ್ಪ ಎಚ್ಚರಿಸಿದ್ದಾರೆ.
ಭದ್ರಾವತಿಯಲ್ಲಿ ನಡೆದ ಕಬಡ್ಡಿ ಪಂದ್ಯಾವಳಿಯಲ್ಲಿ ನಮ್ಮ ಪಕ್ಷದ ಜಿಲ್ಲಾ ಕಾರ್ಯದರ್ಶಿ ಧರ್ಮಪ್ರಸಾದ್ ಅವರ ತಂಡ ರನ್ನರ್ ಆಪ್ ಆಗಿತ್ತು. ಈ ವೇಳೆ ಸಂಗಮೇಶ್ ಬೆಂಬಲಿಗರು ದಾಳಿ ನಡೆಸಿ ಹಲ್ಲೆ ಮಾಡಿದ್ದಾರೆ. ಈ ಘಟನೆಯಿಂದ ನನಗೆ ನೋವಾಗಿದೆ. ಯಾರು ಹಲ್ಲೆ ನಡೆಸಿದ್ರೋ ಅವರ ಪರವಾಗಿ ಶಾಸಕ ಸಂಗಮೇಶ್ ನಿಂತಿದ್ದು ಒಳ್ಳೆಯ ಬೆಳವಣಿಗೆ ಅಲ್ಲ. ಬಿಜೆಪಿ ಸರ್ಕಾರ ಇಂಥ ಗೂಂಡಾ ವರ್ತನೆಯನ್ನು ಸಹಿಸಲ್ಲ. ಹಲ್ಲೆ ನಡೆಸಿದವರು ಶರಣಾಗುವುದು ಒಳ್ಳೆಯದು ಎಂದು ಎಚ್ಚರಿಕೆ ನೀಡಿದರು.