ಶಿವಮೊಗ್ಗ: ನಗರದಲ್ಲಿ ಹಕ್ಕಿಗಳ ಸರಣಿ ಸಾವಿನಿಂದಾಗಿ ಸಾರ್ವಜನಿಕರಲ್ಲಿ ಆತಂಕ ಉಂಟಾಗಿದ್ದು, ಕೊರೊನಾ ವೈರಸ್ನಿಂದ ಭಯಗೊಂಡಿದ್ದ ಜನರಿಗೆ ಹಕ್ಕಿಗಳ ಸಾವು ಜೀವ ಭಯ ತಂದಿಟ್ಟಿದೆ.
ಹಕ್ಕಿಗಳ ಸರಣಿ ಸಾವು : ಶಿವಮೊಗ್ಗ ಜನರಲ್ಲಿ ಹಕ್ಕಿಜ್ವರದ ಆತಂಕ - ಕೊರೊನಾ ವೈರಸ್
ಕೊರೊನಾ ವೈರಸ್ನಿಂದ ಭಯಭೀತರಾಗಿದ್ದ ಶಿವಮೊಗ್ಗ ಜನರಿಗೆ ಸದ್ಯ ಮತ್ತೊಂದು ಆತಂಕ ಶುರವಾಗಿದೆ. ನಗರದಲ್ಲಿ ಹಕ್ಕಿಗಳು ಸರಣಿ ಸಾವು ಸಂಭವಿಸುತ್ತಿದ್ದು, ಹಕ್ಕಿಜ್ವರ ಹರಡಿರುವ ಶಂಕೆ ಸಾರ್ವಜನಿಕರಲ್ಲಿ ವ್ಯಕ್ತವಾಗಿದೆ.

ಹಕ್ಕಿಜ್ವರ ಶಂಕೆ
ನಗರದ ಬಿ. ಹೆಚ್. ರಸ್ತೆಯ ಡಯಟ್ ಆವರಣದಲ್ಲಿರುವ ಅರಳಿಮರದಲ್ಲಿ ವಾಸವಾಗಿದ್ದ ಬಕ ಪಕ್ಷಿಗಳು ಸಣ್ಣ ಸಣ್ಣ ಮೀನುಗಳನ್ನು ತಿಂದು ಬದುಕುತ್ತಿದ್ದವು. ಇಂದು ಮೂರು ಪಕ್ಷಿಗಳು ಸಾವನ್ನಪ್ಪಿವೆ. ಕಳೆದ ಕೆಲವು ದಿನಗಳ ಹಿಂದೆ ಲಷ್ಕರ್ ಮೊಹಲ್ಲಾದಲ್ಲಿ ಇದೆ ರೀತಿ ಪಕ್ಷಿಗಳು ಸಾವನ್ನಪ್ಪಿದ್ದವು.
ಶಿವಮೊಗ್ಗ ಜನರಲ್ಲಿ ಮೂಡಿದ ಹಕ್ಕಿಜ್ವರದ ಆತಂಕ
ಸದ್ಯ ಸಾರ್ವಜನಿಕರಲ್ಲಿ ಹಕ್ಕಿಜ್ವರ ಹಬ್ಬಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಪಶು ಸಂಗೋಪನ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಜಯಪ್ರಕಾಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜಿಲ್ಲೆಯಲ್ಲಿ ಹಕ್ಕಿಜ್ವರದ ಭಯವಿಲ್ಲ, ಸಾರ್ವಜನಿಕರು ಹೆದಬೇಕಿಲ್ಲ ಎಂದು ತಿಳಿಸಿದ್ದಾರೆ.