ಶಿವಮೊಗ್ಗ: ಬೈಕ್ ಕಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಜಿಲ್ಲೆಯ ಸಾಗರ ಟೌನ್ ಪೊಲೀಸರು ಬಂಧಿಸಿದ್ದು, ಬಂಧಿತರಿಂದ 30.50 ಲಕ್ಷ ಮೌಲ್ಯದ ಬೈಕ್ಗಳನ್ನು ವಶಕ್ಕೆ ಪಡೆದಿದ್ದಾರೆ. ಸಾಗರದಲ್ಲಿ ನಡೆದ ಬೈಕ್ ಕಳ್ಳತನ ಕೇಸ್ ಬೆನ್ನತ್ತಿದ್ದ ಪೊಲೀಸರು ಹಾವೇರಿ ಪಟ್ಟಣದ ನಾಗೇಂದ್ರಮಟ್ಟಿಯ ಸುದೀಪ್ ಅಲಿಯಾಸ್ ಚೂಪಾ (19), ಅಜೇಯ ಅಲಿಯಾಸ್ ಅಜ್ಜಪ್ಪ (20) ಹಾಗೂ ಹಾವೇರಿ ಸಿದ್ದರಗುಡಿಯ ಗಂಗಾಧರ್ ಅಲಿಯಾಸ್ ಸಂಜುನನ್ನು (23) ಬಂಧಿಸಿ ವಿಚಾರಿಸಿದಾಗ ಸತ್ಯಾಂಶ ಹೊರ ಬಂದಿದೆ.
ಓದಿ:ಯೂಟ್ಯೂಬ್ ನೋಡಿ ಬುಲೆಟ್ ಬೈಕ್ ಕದಿಯುವ ಖಯಾಲಿ.. ಏಳು ಮಂದಿ ಪದವೀಧರರು ಅರೆಸ್ಟ್