ETV Bharat Karnataka

ಕರ್ನಾಟಕ

karnataka

ETV Bharat / city

ಭಜರಂಗದಳ ಕಾರ್ಯಕರ್ತನ ಕೊಲೆ ಬಳಿಕ ಶಿವಮೊಗ್ಗ ಉದ್ವಿಗ್ನ: ರಾತ್ರಿ ವಾಹನಗಳಿಗೆ ಬೆಂಕಿ - ಶಿವಮೊಗ್ಗದಲ್ಲಿ ವಾಹನಗಳಿಗೆ ಬೆಂಕಿ

ಸೀಗೆಹಟ್ಟಿಯಲ್ಲಿ ಭಜರಂಗದಳ ಕಾರ್ಯಕರ್ತನ ಕೊಲೆ ಬಳಿಕ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ನಗರದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.

bajrang dal activist killed
ಭಜರಂಗದಳ ಕಾರ್ಯಕರ್ತನ ಕೊಲೆ
author img

By

Published : Feb 21, 2022, 8:23 AM IST

Updated : Feb 21, 2022, 8:48 AM IST

ಶಿವಮೊಗ್ಗ:ಭಜರಂಗದಳ ಕಾರ್ಯಕರ್ತ ಹರ್ಷಾ ಎಂಬ ಯುವಕನ ಕೊಲೆ ಬಳಿಕ ನಗರದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಈ ಘಟನೆ ನಡೆದಸೀಗೆಹಟ್ಟಿಯಲ್ಲಿ ಕಳೆದ ರಾತ್ರಿ ಮನೆ ಮುಂದೆ ನಿಂತಿದ್ದ ಮೂರು ಬೈಕ್ ಹಾಗೂ ಒಂದು ಟಾಟಾ ಏಸ್​ಗೆ ಬೆಂಕಿ ಹಚ್ಚಲಾಗಿದೆ. ಇದರಲ್ಲಿ ಬೈಕ್​ಗಳು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿವೆ.

ಅಗ್ನಿಶಾಮಕದಳ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ನೀಡಿ ಬೆಂಕಿ ನಂದಿಸಿದರು. ಸೀಗೆಹಟ್ಟಿಯಲ್ಲಿ ಕಲ್ಲು ತೂರಾಟ ನಡೆದಿದ್ದು, ಜನರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದರು.

ಭಜರಂಗದಳ ಕಾರ್ಯಕರ್ತನ ಕೊಲೆ ಬಳಿಕ ಶಿವಮೊಗ್ಗ ಉದ್ವಿಗ್ನ: ರಾತ್ರಿ ವಾಹನಗಳಿಗೆ ಬೆಂಕಿ

ಕೊಲೆ ಪ್ರಕರಣದ ಬೆನ್ನಲ್ಲೇ ನಗರಕ್ಕೆ ಐಜಿಪಿ ತ್ಯಾಗರಾಜನ್ ಭೇಟಿ‌ ನೀಡಿ ಪರಿಸ್ಥಿತಿ ಅವಲೋಕಿಸಿದ್ದು, ಗಸ್ತು ನಡೆಸಿ, ಮೊಕ್ಕಂ ಹೂಡಿದ್ದಾರೆ.‌

ಇದನ್ನೂ ಓದಿ: ಶಿವಮೊಗ್ಗದಲ್ಲಿ ಭಜರಂಗದಳ ಕಾರ್ಯಕರ್ತನ ಭೀಕರ ಹತ್ಯೆ, ನಿಷೇಧಾಜ್ಞೆ ಜಾರಿ

Last Updated : Feb 21, 2022, 8:48 AM IST

ABOUT THE AUTHOR

...view details