ಶಿವಮೊಗ್ಗ:ಭದ್ರಾ ಅಣೆಕಟ್ಟೆಯಿಂದ ನೀರು ಬಿಡುಗಡೆ ಮಾಡಿದ ಪರಿಣಾಮ ಭದ್ರಾವತಿ ಹೊಸ ಸೇತುವೆ ಮುಳುಗಡೆಯಾಗಿದೆ. ಭದ್ರಾವತಿ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಪಕ್ಕದಲ್ಲಿ ಇರುವ ಈ ಸೇತುವೆ ಕಳೆ ಮಟ್ಟದಲ್ಲಿ ಇರುವ ಕಾರಣ ಮುಳುಗಡೆಯಾಗಿದೆ.
ಭದ್ರಾ ಅಣೆಕಟ್ಟೆಯಿಂದ ನೀರು ಬಿಡುಗಡೆ: ಭದ್ರಾವತಿ ಹೊಸ ಸೇತುವೆ ಮುಳುಗಡೆ - ಭದ್ರಾ ಅಣೆಕಟ್ಟೆಯಿಂದ ನೀರು ಬಿಡುಗಡೆ
ಭದ್ರಾವತಿ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಪಕ್ಕದಲ್ಲಿ ಇರುವ ಭದ್ರಾವತಿ ಹೊಸ ಸೇತುವೆ ಮುಳುಗಡೆಯಾಗಿದೆ.
ನಿನ್ನೆ(ಗುರುವಾರ) ಸಂಜೆಯೇ ಭದ್ರಾವತಿಯ ಕವಲುಗುಂದಿ ಬಡಾವಣೆಯ 30 ಮನೆಯನ್ನು ಖಾಲಿ ಮಾಡಿಸಲಾಗಿದೆ. ಇಲ್ಲಿಂದ 120 ಜನರನ್ನು ಭದ್ರಾವತಿಯ ಒಕ್ಕಲಿಗರ ಸಭಾ ಭವನದ ಕಾಳಜಿ ಕೇಂದ್ರಕ್ಕೆ ಕಳುಹಿಸಲಾಗಿದೆ. ಇಲ್ಲಿ ಇವರಿಗೆ ಊಟ ಹಾಗೂ ತಿಂಡಿಯ ವ್ಯವಸ್ಥೆ ಮಾಡಲಾಗಿದೆ.
ಅಲ್ಲದೇ ಹುತ್ತಾ ಕಾಲೋನಿಯ ಸೋಷಿಯಲ್ ವೆಲ್ಫೇರ್ ಹಾಸ್ಟೆಲ್ನ 35 ಮಕ್ಕಳನ್ನು ಸ್ಥಳಾಂತರಿಸಲಾಗಿದೆ. ಜತೆಗೆ ಏಕಿಷಾ ಕಾಲೋನಿಯ ನಿವಾಸಿಗಳನ್ನು ಅಲ್ಲಿಂದ ತೆರವುಗೊಳಿಸಿ, ಗುಂಡೂರಾವ್ ಶೆಡ್ನಲ್ಲಿ ವ್ಯವಸ್ಥೆ ಮಾಡಲಾಗಿದೆ. ನಿನ್ನೆ ರಾತ್ರಿ ಡಿಸಿ ಡಾ.ಸೆಲ್ವಮಣಿ ಅವರು ಭೇಟಿ ನೀಡಿ ಕಾಳಜಿ ಕೇಂದ್ರದ ವ್ಯವಸ್ಥೆ ಗಮನಿಸಿದ್ದಾರೆ. ತಹಶೀಲ್ದಾರ್ ಪ್ರದೀಪ್ ಎಲ್ಲಾ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.