ಕರ್ನಾಟಕ

karnataka

ETV Bharat / city

ಫೆ. 12ರ ಬದಲು ಫೆ. 24ಕ್ಕೆ ಧರ್ಮಸ್ಥಳಕ್ಕೆ ಹೋಗಲು ಸಿದ್ಧ... ಕೆಪಿಸಿಸಿ ವಕ್ತಾರ ಬೇಳೂರು ಗೋಪಾಲಕೃಷ್ಣ - ಕೆಪಿಸಿಸಿ ವಕ್ತಾರ ಬೇಳೂರು ಗೋಪಾಲಕೃಷ್ಣ

ಮರಳು ಗುತ್ತಿಗೆದಾರರಿಂದ ಶಾಸಕ ಹರತಾಳು ಹಾಲಪ್ಪ ಹಪ್ತ ವಸೂಲಿ ಮಾಡುತ್ತಿದ್ದಾರೆ ಎಂಬ ಹೇಳಿಕೆಗೆ ನಾನು ಈಗಲೂ ಬದ್ಧನಾಗಿದ್ದು, ಧರ್ಮಸ್ಥಳದಲ್ಲಿ ಆಣೆ ಪ್ರಮಾಣ ಮಾಡಲು ಸಿದ್ಧನಿದ್ದೇನೆಂದು ಕೆಪಿಸಿಸಿ ವಕ್ತಾರ ಬೇಳೂರು ಗೋಪಾಲಕೃಷ್ಣ ಹೇಳಿದ್ದಾರೆ.

Beluru gopalakrishna VS Haratalu halappa
Beluru gopalakrishna VS Haratalu halappa

By

Published : Feb 9, 2022, 1:31 AM IST

ಶಿವಮೊಗ್ಗ: ಗೋವಾ ವಿಧಾನಸಭೆ ಚುನಾವಣಾ ಪ್ರಚಾರಕ್ಕೆ ಹೋಗಬೇಕಾಗಿರುವುದರಿಂದ ಫೆಬ್ರವರಿ 24ರ ನಂತರ ಧರ್ಮಸ್ಥಳಕ್ಕೆ ಹೋಗಿ ಪ್ರಮಾಣ ಮಾಡಲು ಸಿದ್ಧನಿದ್ದೇನೆಂದು ಕೆಪಿಸಿಸಿ ವಕ್ತಾರ ಬೇಳೂರು ಗೋಪಾಲಕೃಷ್ಣ ಶಿವಮೊಗ್ಗದಲ್ಲಿ ತಿಳಿಸಿದ್ದಾರೆ.

ಫೆ. 12ರ ಬದಲು ಫೆ. 24ಕ್ಕೆ ಧರ್ಮಸ್ಥಳಕ್ಕೆ ಹೋಗಲು ಸಿದ್ಧ

ಸಾಗರ ತಾಲೂಕಿನಲ್ಲಿ ನಡೆಯುತ್ತಿರುವ ಮರಳು ವ್ಯವಹಾರದಲ್ಲಿ ಸಾಗರ ಶಾಸಕರು, ಎಂಎಸ್ಐಎಲ್​ನ ಅಧ್ಯಕ್ಷರಾದ ಹರತಾಳು ಹಾಲಪ್ಪ ಲಂಚ ಪಡೆದಿದ್ದಾರೆ, ಲಂಚ ಪಡೆದಿಲ್ಲ ಎಂದಾದ್ರೆ ಧರ್ಮಸ್ಥಳದಲ್ಲಿ ಪ್ರಮಾಣ ಮಾಡಬೇಕೆಂದು ಬೇಳೂರು ಗೋಪಾಲಕೃಷ್ಣ ಆರೋಪ ಮಾಡಿದ್ದರು. ಇದಕ್ಕೆ ಶಾಸಕ ಹಾಲಪ್ಪನವರು ನಾನಾಗಲಿ, ನಮ್ಮ ಕುಟುಂಬದವರಾಗಲಿ ಯಾವ ಮರಳು ವ್ಯವಹಾರದವರ ಬಳಿ ಹಣ ಪಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಇದರಿಂದ ನಾನು ಧರ್ಮಸ್ಥಳಕ್ಕೆ ಬಂದು ಅಣೆ ಮಾಡಲು ಸಿದ್ಧನಿದ್ದೇನೆ,

ಈ ಪ್ರಮಾಣವನ್ನು ಫೆಬ್ರವರಿ‌ 13 ರಂದು ಮಾಡುತ್ತೇನೆಂದು ತಿಳಿಸಿದ್ದರು ನಂತರ ಫೆಬ್ರವರಿ 13 ರಂದು ನಮ್ಮ ಕುಟುಂಬದಲ್ಲಿ ಒಂದು ಮದುವೆ ಇದೆ. ನಂತರ ಅಧಿವೇಶನವಿದೆ ಇದರಿಂದ ಫೆಬ್ರವರಿ‌ 12 ರಂದು ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡುತ್ತೇನೆಂದು ಬೇಳೂರು ಗೋಪಾಲಕೃಷ್ಣ ತಿಳಿಸಿದ್ಧರು.

ಇದನ್ನೂ ಓದಿರಿ:ಫೆ.13ರ ಬದಲಿಗೆ 12ಕ್ಕೆ ಧರ್ಮಸ್ಥಳಕ್ಕೆ ತೆರಳಿ ಪ್ರಮಾಣ ಮಾಡುವುದಾಗಿ ಹೇಳಿದ ಶಾಸಕ ಹಾಲಪ್ಪ.. ಕಾರಣ ಇಲ್ಲಿದೆ

ಇದಕ್ಕೆ ಪ್ರತಿಕ್ರಿಯಿಸಿದ ಬೇಳೂರು ಗೋಪಾಲಕೃಷ್ಣರವರು, ಶಾಸಕ ಹಾಲಪ್ಪನವರು ಮರಳು ವ್ಯವಹಾರ ನಡೆಸುವವರ ಬಳಿ ನೇರವಾಗಿ ಹಣ ತೆಗೆದು‌ಕೊಂಡಿಲ್ಲ, ಅವರು‌ ಸಾಗರದ ಗಣಪತಿ ಭಟ್ ಎಂಬುವರ ಮೂಲಕ ಹಣ ಪಡೆದು ಕೊಂಡಿದ್ದಾರೆ. ಆತ ಗಣಪತಿ ಭಟ್ಟ ಅಲ್ಲ, ಬದಲಿಗೆ ಹಾಲಪ್ಪನವರ ಹುಂಡಿ ಎಂದು ವ್ಯಂಗ್ಯವಾಗಿ ಮಾತನಾಡಿದರು. ‌ನಾನು ಧರ್ಮಸ್ಥಳಕ್ಕೆ ಹೋಗಿ ಅಣೆ ಮಾಡಬೇಕಾದ್ರೆ, ಗಣಪತಿ ಭಟ್ ಬರಬೇಕು. ಭಟ್ಟರು ಬಂದು ನಾನು ಹಾಲಪ್ಪನವರ ಪರವಾಗಿ ಹಣ ಪಡೆದಿಲ್ಲ ಎಂದು ಅಣೆ ಮಾಡಬೇಕು ಎಂದರು. ನಾನು ಕೆಪಿಸಿಸಿ ವಕ್ತಾರನಾಗಿರುವುದರಿಂದ ಗೋವಾ ಚುನಾವಣಾ ಪ್ರಚಾರಕ್ಕೆ ಹೋಗಬೇಕಿದೆ ಎಂದರು.

ತಾಲೂಕಿನಲ್ಲಿ ಭ್ರಷ್ಟಚಾರ ಮಿತಿ‌ಮೀರಿದೆ. ಪಂಚಾಯತ್ ರಾಜ್​ನಿಂದ 19 ಕೋಟಿ ರೂ. ಬಂದಿದೆ.‌ ಆದರೆ, ಈ ಹಣವನ್ನು ಕಮಿಷನ್​ ಆಸೆಗೆ ಕೆಆರ್​ಐಡಿಎಲ್​ಗೆ ವರ್ಗಾಯಿಸಿದ್ದಾರೆ. ನೀರಾವರಿ ಇಲಾಖೆಯಿಂದ 50 ಕೋಟಿ ರೂ ಬಂದಿದೆ. ಇದನ್ನು ಗುತ್ತಿಗೆ ಕರೆಯದೆ ಕಮಿಷನ್ ಆಸೆಗೆ ತುಂಡು ಗುತ್ತಿಗೆ ನೀಡಿದ್ದಾರೆಂದು ಆರೋಪಿಸಿದರು. ಇಂತಹ ವ್ಯಕ್ತಿಯೇ ಅಣೆ ಮಾಡಲು ಬರುವಾಗ ನಾನು ಯಾಕೆ ಬಿಡಬೇಕು ಎಂದರು.‌

ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆ ನಡೆಸುವುದಾಗಿ ಸಚಿವ ಈಶ್ವರಪ್ಪ ಸುಳ್ಳು ಹೇಳುತ್ತಿದ್ದಾರೆ. ಬಿಜೆಪಿ ಸರ್ಕಾರ ಗೊಂದಲದ ಗೂಡಾಗಿದೆ. ಮಂತ್ರಿ ಮಂಡಲ ವಿಸ್ತರಣೆ ಮಾಡಲು ಮುಂದಾದ್ರೆ, ಸರ್ಕಾರ ಉಳಿಯುವುದಿಲ್ಲ. ಬಿಜೆಪಿಯಲ್ಲಿ ಗುಂಪುಗಾರಿಕೆ ಇದೆ ಎಂದರು. ‌ಯಡಿಯೂರಪ್ಪನವರನ್ನು ಪಾಪಿ ಮಂಡೆ ಮಕ್ಳು ಕೆಳಗೆ ಇಳಿಸಿದ್ರು, ಈಗ ಅವರ ಮಗನನ್ನು ಮಂತ್ರಿ ಮಾಡಲು ಯತ್ನಿಸುತ್ತಿದ್ದಾರೆ ಎಂದರು. ಈ ವೇಳೆ ಕಾಂಗ್ರೆಸ್ ಮುಖಂಡರಾದ ಜೆ.ಡಿ.ಮಂಜುನಾಥ್, ರಾಜ್ ಕುಮಾರ್, ಮುಜಿಬ್ ಖಾನ್ ಹಾಜರಿದ್ದರು.

ABOUT THE AUTHOR

...view details