ಶಿವಮೊಗ್ಗ:ಕೊಲೆಯಾದ ಭಜರಂಗದಳ ಕಾರ್ಯಕರ್ತ ಹರ್ಷ ಅವರ ಕುಟುಂಬಸ್ಥರು ಸುದ್ದಿಗೋಷ್ಠಿ ನಡೆಸಿ, ಸಾಂತ್ವನ ಹೇಳಿದ ಎಲ್ಲರಿಗೂ ಧನ್ಯವಾದ ತಿಳಿಸಿದರು. ತಂದೆ, ತಾಯಿ ಹಾಗು ಅಕ್ಕ ಈ ವೇಳೆ ಮಾತನಾಡಿದರು.
'ಎಲ್ಲ ಅಣ್ಣ-ತಮ್ಮಂದಿರಲ್ಲಿ ನನ್ನ ಸಹೋದರನನ್ನು ಕಾಣುತ್ತಿದ್ದೇವೆ. ನಮ್ಮ ಮೇಲೆ ಪ್ರೀತಿ ತೋರುತ್ತಿರುವುದಕ್ಕೆ ನಿಮಗೆಲ್ಲ ಧನ್ಯವಾದಗಳು. ಹರ್ಷ ಸಾವಿನ ಬಳಿಕ ಹಲವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರನ್ನೆಲ್ಲ ನೋಡಿಕೊಂಡು ಬರುತ್ತೇವೆ. ಅವರಿಗೆ ನಮ್ಮ ಕೈಲಾದ ಸಹಾಯ ಮಾಡುತ್ತೇವೆ' ಎಂದು ಅಕ್ಕ ಅಶ್ವಿನಿ ತಿಳಿಸಿದರು.