ಕರ್ನಾಟಕ

karnataka

ETV Bharat / city

ಶಿವಮೊಗ್ಗ ಯುವಕನ ಕೊಲೆ: ಇಬ್ಬರ ಬಂಧನ.. ಮೃತದೇಹ ಮೆರವಣಿಗೆ ವೇಳೆ ಕಲ್ಲು ತೂರಾಟ - ಶಿವಮೊಗ್ಗದಲ್ಲಿ ಭಜರಂಗದಳ ಕಾರ್ಯಕರ್ತನ ಹತ್ಯೆ

ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯ ಮಾಡಿದರು. ಇನ್ನು ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸ್ ಪಡೆ ಕಟ್ಟೆಚ್ಚರವಹಿಸಿದೆ..

ಶಿವಮೊಗ್ಗದಲ್ಲಿ ಮೃತದೇಹ ಮೆರವಣಿಗೆ ವೇಳೆ ಕಲ್ಲು ತೂರಾಟ, ಬೆಂಕಿ
ಶಿವಮೊಗ್ಗದಲ್ಲಿ ಮೃತದೇಹ ಮೆರವಣಿಗೆ ವೇಳೆ ಕಲ್ಲು ತೂರಾಟ, ಬೆಂಕಿ

By

Published : Feb 21, 2022, 1:41 PM IST

Updated : Feb 21, 2022, 6:43 PM IST

ಶಿವಮೊಗ್ಗ :ಭಜರಂಗದಳ ಕಾರ್ಯಕರ್ತನ ಮೃತದೇಹದ ಮೆರವಣಿಗೆ ವೇಳೆ ಯುವಕರು ವಾಹನಗಳಿಗೆ ಬೆಂಕಿ ಹಚ್ಚಿ, ಕಲ್ಲೂ ತೂರಾಟ ನಡೆಸಿದ್ದಾರೆ. ಇದರಿಂದಾಗಿ 10ಕ್ಕೂ ಹೆಚ್ಚು ವಾಹನಗಳು ಜಖಂಗೊಂಡಿವೆ.

ಮೆಗ್ಗಾನ್ ಆಸ್ಪತ್ರೆಯಿಂದ ಮೃತದೇಹವನ್ನು ಮೆರವಣಿಗೆಯಲ್ಲಿ ಕೊಂಡ್ಯೊಯುವಾಗ ಇಲ್ಲಿನ ಓಡಿ ರಸ್ತೆಯಲ್ಲಿ ಯುವಕರು ಈ ಕೃತ್ಯ ಎಸಗಿದ್ದಾರೆ. ಹಣ್ಣಿನ ಅಂಗಡಿ ಸೇರಿದಂತೆ ಹಲವು ಅಂಗಡಿಗಳಿಗೆ ಹಾನಿಯಾಗಿದ್ದು, 10ಕ್ಕೂ ಹೆಚ್ಚು ವಾಹನಗಳು ಜಖಂಗೊಂಡಿವೆ.

ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯ ಮಾಡಿದರು. ಇನ್ನು ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸ್ ಪಡೆ ಕಟ್ಟೆಚ್ಚರವಹಿಸಿದೆ.

ಮೃತದೇಹ ಮೆರವಣಿಗೆ ವೇಳೆ ಬೆಂಕಿ ಹಚ್ಚಿ, ಕಲ್ಲು ತೂರಾಟ

ಬಂಧನ: ಭಾನುವಾರ ರಾತ್ರಿ ಯುವಕರ ಗುಂಪೊಂದು ಭಜರಂಗದಳದ ಕಾರ್ಯಕರ್ತ ಹರ್ಷನನ್ನು ಹತ್ಯೆ ಮಾಡಿದ ಪ್ರಕರಣ ಸಂಬಂಧ ಪೊಲೀಸರು ಇಬ್ಬರನ್ನು ಬಂಧಿಸಿ, ಉಳಿದವರಿಗಾಗಿ ಶೋಧ ಕಾರ್ಯ ನಡೆಸಿದ್ದಾರೆ.

(ಇದನ್ನೂ ಓದಿ: 'ಮುಸಲ್ಮಾನ ಗೂಂಡಾಗಳು ಶಿವಮೊಗ್ಗದ ಯುವಕನ ಕೊಲೆ ಮಾಡಿದ್ದಾರೆ': ಸಚಿವ ಕೆ.ಎಸ್‌.ಈಶ್ವರಪ್ಪ)

Last Updated : Feb 21, 2022, 6:43 PM IST

ABOUT THE AUTHOR

...view details