ಶಿವಮೊಗ್ಗ: ಆಟೋ ಚಾಲಕರೊಬ್ಬರ ಸಮಯ ಪಜ್ಞೆ ಮತ್ತು ಧೈರ್ಯದಿಂದಾಗಿ ಮಗುವಿನ ಪ್ರಾಣ ಉಳಿದಿರುವ ಘಟನೆ ಶಿವಮೊಗ್ಗದ ಆಲ್ಕೊಳ ಸರ್ಕಲ್ನಲ್ಲಿ ಕಳೆದ ರಾತ್ರಿ ನಡೆದಿದೆ. ಶಿವಮೊಗ್ಗ ನಗರದ ಪ್ರಮುಖ ರಸ್ತೆಯೊಂದರ ಪಕ್ಕದಲ್ಲಿ ತೋಡಲಾಗಿದ್ದ ಗುಂಡಿಯೊಳಗೆ ಬಿದ್ದ ಮಗುವನ್ನು ಆಟೋ ಚಾಲಕ ಲೋಕೇಶ್ ರಕ್ಷಣೆ ಮಾಡಿದ್ದಾರೆ.
ಕಳೆದ ರಾತ್ರಿ ತಾಯಿ ಮತ್ತು ಮೂರು ವರ್ಷದ ಮಗು ಖಾಸಗಿ ಬಸ್ನಲ್ಲಿಆಗಮಿಸಿ ಆಲ್ಕೊಳ ಸರ್ಕಲ್ನ ಅಯ್ಯಂಗಾರ್ ಬೇಕರಿ ಸಮೀಪ ಇಳಿದಿದ್ದಾರೆ. ಮಗುವನ್ನು ಬಸ್ನಿಂದ ಇಳಿಸಿ ಬಳಿಕ ಲಗೇಜ್ ಕೆಳಗಿಳಿಸಿ ಪಕ್ಕಕ್ಕಿಡಲು ಮಹಿಳೆ ಮುಂದಾಗಿದ್ದಾರೆ. ಕ್ಷಣಾರ್ಧದಲ್ಲಿ ಮಗು ಕಾಣೆಯಾಗಿದೆ.
ಆಟೋ ಚಾಲಕನ ಸಮಯ ಪ್ರಜ್ಞೆಯಿಂದ ಉಳಿಯಿತು ಮಗು ರಸ್ತೆ ಪಕ್ಕದಲ್ಲೇ ದೊಡ್ಡ ಗುಂಡಿ ಇದೆ. ತಾಯಿ ಲಗೇಜ್ ಇಳಿಸಿಕೊಳ್ಳುವ ಹೊತ್ತಿಗೆ ಮಗು ಆ ಗುಂಡಿಯೊಳಗೆ ಬಿದ್ದು, ನೀರಿನಲ್ಲಿ ಮುಳುಗುತ್ತಿತ್ತು. ಇದನ್ನು ಗಮನಿಸಿದ ಆಟೋ ಚಾಲಕ ಲೋಕೇಶ್ ಅವರು ಗುಂಡಿಯಿಂದ ಮಗುವನ್ನು ಮೇಲಕ್ಕೆತ್ತಿ ಕಾಪಾಡಿದ್ದಾರೆ. ಆಟೋ ಚಾಲಕ ಲೋಕೇಶ್ ಅವರ ಸಮಯ ಪ್ರಜ್ಞೆಯಿಂದ ಸಂಭವನೀಯ ದುರ್ಘಟನೆ ತಪ್ಪಿದೆ. ತಾಯಿ ಮತ್ತು ಮಗು ಸುರಕ್ಷಿತವಾಗಿದ್ದು, ತಕ್ಷಣ ಸ್ಥಳದಿಂದ ಹೊರಟಿದ್ದಾರೆ.
ಇದನ್ನೂ ಓದಿ:‘ಕಾಲಿಗೆ ಬೀಳುತ್ತೇನೆ, ನನ್ನನ್ನು ಬಿಟ್ಟು ಬಿಡಿ’; ಯಾದಗಿರಿಯಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ!
ಆಲ್ಕೊಳ ಸರ್ಕಲ್ನ ರಸ್ತೆ ಪಕ್ಕದಲ್ಲಿ ದೊಡ್ಡ ಗುಂಡಿ ತೋಡಲಾಗಿದೆ. ಸ್ಮಾರ್ಟ್ ಸಿಟಿ ಕಾಮಗಾರಿಗಾಗಿ ಈ ಗುಂಡಿ ತೆಗೆದಿರಬಹುದು ಎಂದು ಸ್ಥಳೀಯರು ಮತ್ತು ಆಟೋ ಚಾಲಕರು ಹೇಳುತ್ತಿದ್ದಾರೆ. ಘಟನೆ ಕುರಿತು ಕಳೆದ ರಾತ್ರಿಯೇ ಸ್ಮಾರ್ಟ್ ಸಿಟಿ ಅಧಿಕಾರಿಗಳಿಗೆ ಕರೆ ಮಾಡಿ ತಿಳಿಸಲಾಗಿದೆ. ಇನ್ನು ವಿಚಾರ ತಿಳಿಯುತ್ತಿದ್ದಂತೆ ತುಂಗಾ ನಗರ ಠಾಣೆ ಇನ್ಸ್ಪೆಕ್ಟರ್ ದೀಪಕ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.