ಶಿವಮೊಗ್ಗ: ಹಣಕಾಸಿನ ವಿಚಾರವಾಗಿ ಆರಂಭಗೊಂಡ ಜಗಳ ಚಾಕು ಇರಿತದವರೆಗೂ ಬಂದಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಶಿವಮೊಗ್ಗದ ಶಂಕರಮಠ ರಸ್ತೆಯಲ್ಲಿ ದಸ್ತಗಿರ್ ಎಂಬಾತ ಪಾಚಾಖಾನ್ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.
ಆರ್ಎಂಎಲ್ ನಗರದ ದಸ್ತಗಿರ್ಗೂ ಹಾಗೂ ಬಾಪೂಜಿ ನಗರದ ಪಾಚಾಖಾನ್ಗೂ ಹಣಕಾಸಿನ ವಿಚಾರವಾಗಿ ಗಲಾಟೆ ನಡೆದಿದೆ. ನಂತರ ದಸ್ತಗಿರ್ನಿಂದ ಹಲ್ಲೆ ನಡೆದಿದ್ದು, ಪಾಚಾಖಾನ್ನ ಎದೆ, ಮುಖದ ಮೇಲೆ ಚಾಕುವಿನಿಂದ ಇರಿದಿದ್ದಾನೆ.