ಶಿವಮೊಗ್ಗ: ನಗರದಲ್ಲಿ ಮತ್ತೊಂದು ಕೊಲೆಗೆ ಸ್ಕೆಚ್ ಹಾಕಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ವಿಘ್ನೇಶ್ ಹಾಗೂ ಕಿರಣ್ ಬಂಧಿತರು. ಇವರು ಹಂದಿ ಅಣ್ಣಿಯ ಸಹಚರನಾದ ಅನಿಲ್ ಅಲಿಯಾಸ್ ಅಂಬುನನ್ನು ಕೊಲೆ ಮಾಡಲು ಸಂಚು ರೂಪಿಸಿದ್ದರು ಎಂದು ತಿಳಿದುಬಂದಿದೆ.
ಅನಿಲ್ ಕೊಲೆಗೆ ವಿಘ್ನೇಶ್, ಕಿರಣ್ ಜೊತೆ ಚಂದನ್ ಎಂಬಾತ ಸಹ ಸ್ಕೆಚ್ ಹಾಕಿದ್ದನಂತೆ. ಸದ್ಯ ಕಿರಣ್ ಹಾಗೂ ವಿಘ್ನೇಶ್ ಬಂಧನವಾಗಿದ್ದು, ಇನ್ನೋರ್ವ ಆರೋಪಿ ಚಂದನ್ ಪರಾರಿಯಾಗಿದ್ದಾನೆ. ಈತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಈ ಮೂವರು ಅನಿಲ್ನನ್ನು ಕೊಲ್ಲಲು ಆಯುಧಗಳನ್ನು ಖರೀದಿ ಮಾಡಿದ್ದರು. ಆಯುಧಗಳನ್ನು ಬುದ್ಧ ನಗರದಲ್ಲಿರುವ ವಿಘ್ನೇಶ್ ಮನೆಯಲ್ಲಿ ಅಡಗಿಸಿಟ್ಟಿದ್ದರು ಎನ್ನಲಾಗ್ತಿದೆ.