ಬೆಂಗಳೂರು: ಶಿವಮೊಗ್ಗ ಬಜರಂಗ ದಳದ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣದ ಆರೋಪಿಗಳ ವಿರುದ್ಧ ಈಗಾಗಲೇ ಯುಎಪಿಎ (Unlawful activities prevention act) ಅಡಿ ಕೇಸ್ ದಾಖಲಿಸಲಾಗಿತ್ತು. ಅದರ ಅಧಾರದ ಮೇಲೆ ಎನ್ಐಎ ಪ್ರಕರಣ ಕೈಗೆತ್ತಿಕೊಂಡಿದೆ. ಸದ್ಯ ರಾಷ್ಟ್ರೀಯ ತನಿಖಾ ದಳ ತನಿಖೆ ನಡೆಸುತ್ತಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ನಿನ್ನೆ ರಾತ್ರಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸೆಕ್ಷನ್ ಹಾಕಿದ ಕೂಡಲೇ ಎನ್ಐಎ ಕೇಸ್ ತೆಗೆದುಕೊಳ್ಳುತ್ತೆ. ಇದರಿಂದ ನಮ್ಮ ಪೊಲೀಸರಿಗೂ ಬಲ ಬಂದಂತಾಗಿದೆ ಎಂದರು.
ಹರ್ಷ ಕೊಲೆ ಪ್ರಕರಣ - ಎನ್ಐಎ ತನಿಖೆ ಚುರುಕು: ಗೃಹ ಸಚಿವ ಆರಗ ಜ್ಞಾನೇಂದ್ರ - shivamogga harsha murder case
ಶಿವಮೊಗ್ಗ ಬಜರಂಗ ದಳದ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣದ ತನಿಖೆ ಮುಂದುವರಿದಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಮಾಹಿತಿ ನೀಡಿದರು.
ಇದನ್ನೂ ಓದಿ:ಹರ್ಷ ಹತ್ಯೆ ಪ್ರಕರಣ..ಎನ್ಐಎ ತನಿಖೆ ಚುರುಕು..ಆರೋಪಿಗಳು ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್?!
ಇದೇ ವೇಳೆ ಸಚಿವ ಕೆ.ಎಸ್.ಈಶ್ವರಪ್ಪ ಮಾತನಾಡಿ, ಹರ್ಷ ಕೊಲೆ ಪ್ರಕರಣದಲ್ಲಿ ಕರ್ನಾಟಕ ರಾಜ್ಯದವರಲ್ಲದೇ ಹೊರಗಿನ ಬಹಳ ಜನ ಇದ್ದಾರೆ. ಇದನ್ನು ನಾವು ಮಾತ್ರವಲ್ಲದೇ ವಿಪಕ್ಷ ಉಪನಾಯಕ ಯು.ಟಿ ಖಾದರ್ ಕೂಡ ತಿಳಿಸಿದ್ದಾರೆ. ಮುಸ್ಲಿಂ ಶಾಸಕರು ಸಭೆ ಮಾಡಿ ಘಟನೆ ಹಿಂದೆ ಎಸ್ಡಿಪಿಐ ಇದೆಯೆಂದು ಮಾಹಿತಿ ನೀಡಿದ್ದಾರೆ. ನಾನು ಕೂಡ ಎನ್ಐಎ ತನಿಖೆ ನಡೆಸುವಂತೆ ಮನವಿ ಮಾಡಿದ್ದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಪ್ರಕರಣದ ಹಿಂದೆ ಯಾರಿದ್ದಾರೆ ಅಂತ ಪತ್ತೆ ಹಚ್ಚಬೇಕಿದೆ. ಹೈಕೋರ್ಟ್ ಕೂಡ ಹಿಜಾಬ್ ವಿಚಾರದ ಹಿಂದೆ ಯಾರೋ ಇದ್ದಾರೆ ಅಂತ ಹೇಳಿತ್ತು. ಇಲ್ಲೂ ಹಾಗೇಯೇ ಈ ಕೊಲೆ ಪ್ರಕಣದ ಹಿಂದೆ ಯಾರೋ ಇದ್ದಾರೆ ಎಂದರು.