ಶಿವಮೊಗ್ಗ: ಶತಮಾನದಷ್ಟು ಹಳೆಯ ಆಲದ ಮರ ಬಿದ್ದು ಹಾಳಾಗಿದ್ದ ತುಂಗಾ ನದಿ ದಂಡೆಯ ದುರಸ್ತಿ ಕಾಮಗಾರಿಗೆ ಶಾಸಕ ಆರಗ ಜ್ಞಾನೇಂದ್ರ ಗುದ್ದಲಿ ಪೂಜೆ ನೆರವೇರಿಸಿದ್ರು.
ತುಂಗಾ ನದಿ ದಂಡೆ ದುರಸ್ತಿ ಕಾಮಗಾರಿಗೆ ಶಾಸಕರಿಂದ ಗುದ್ದಲಿ ಪೂಜೆ - shimoga news
ಶತಮಾನದಷ್ಟು ಹಳೆಯ ಆಲದ ಮರ ಬಿದ್ದು ಹಾಳಾಗಿದ್ದ ತುಂಗಾ ನದಿ ದಂಡೆಯ ದುರಸ್ತಿ ಕಾಮಗಾರಿಗೆ ಶಾಸಕ ಆರಗ ಜ್ಞಾನೇಂದ್ರ ಗುದ್ದಲಿ ಪೂಜೆ ನೆರವೇರಿಸಿದ್ರು.
ತುಂಗಾ ನದಿ ದಂಡೆ ದುರಸ್ಥಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ ಶಾಸಕ ಆರಗ ಜ್ಞಾನೇಂದ್ರ
ಶಿವಮೊಗ್ಗ ತಾಲೂಕು ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಮತ್ತೂರಿನ ತುಂಗಾ ನದಿ ದಂಡೆಯ ಮೇಲಿದ್ದ ಆಲದ ಮರ ಮಳೆಗಾಲದಲ್ಲಿ ಬಿದ್ದಿತ್ತು. ಇದರಿಂದ ನದಿ ದಂಡೆಯ ಮೇಲೆ ಪೂಜೆ ಸಲ್ಲಿಸಲು ತೊಂದರೆ ಆಗುತ್ತಿತ್ತು. ಅಲ್ಲದೆ, ದಂಡೆಯ ಮೆಟ್ಟಿಲುಗಳು ಸಹ ಒಡೆದು ಹೋಗಿದ್ದವು. ಇದರ ದುರಸ್ತಿಗೆ ಸಣ್ಣ ನೀರಾವರಿ ಇಲಾಖೆ 35 ಲಕ್ಷ ರೂ. ಹಣ ಬಿಡುಗಡೆ ಮಾಡಿದ್ದು, ಶಾಸಕ ಆರಗ ಜ್ಞಾನೇಂದ್ರ ಕಾಮಗರಿಯ ಗುದ್ದಲಿ ಪೂಜೆ ನೆರವೇರಿಸಿದ್ರು.