ಶಿವಮೊಗ್ಗ: ನಗರದಲ್ಲಿ ನಡೆದ ಗಲಭೆ ಪ್ರಕರಣ ಮತ್ತು ಬಜರಂಗ ದಳದ ಕಾರ್ಯಕರ್ತನ ಮೇಲಿನ ಹಲ್ಲೆ ಹಿನ್ನೆಲೆ ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಮುಂದುವರೆದಿದೆ.
ಹಾಗಾಗಿ ಮುಂದಿನ ಹತ್ತು ದಿನಗಳವರೆಗೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಹತ್ತು ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಗಳನ್ನು ವಾರ್ಡ್ವಾರು ನೇಮಿಸಿ ಸರ್ಕಾರದ ಜಂಟಿ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.
ಸರ್ಕಾರದ ಜಂಟಿ ಕಾರ್ಯದರ್ಶಿ ಹೊರಡಿಸಿರುವ ಆದೇಶ ಪ್ರತಿ ಯಾವೆಲ್ಲಾ ವಾರ್ಡ್‌ಗೆ ಯಾರು ದಂಡಾಧಿಕಾರಿ?
1) ಶಿವಕುಮಾರ್, ಜಿಲ್ಲಾಧಿಕಾರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇವರನ್ನು ವಾರ್ಡ್1 ಸಹ್ಯಾದ್ರಿ ನಗರ, ವಾರ್ಡ್ 2 ಅಶ್ವಥ್ ನಗರ, ವಾರ್ಡ್ 3 ಶಾಂತಿನಗರಕ್ಕೆ ನೇಮಕ ಮಾಡಲಾಗಿದೆ.
2) ಷಡಾಕ್ಷರಿ, ಉಪ ನಿರ್ದೇಶಕರು, ಮೀನುಗಾರಿಕೆ ಇಲಾಖೆ ಇವರನ್ನು ವಾರ್ಡ್ 4 ಮಲ್ಲೇಶ್ವರ ನಗರ, ವಾರ್ಡ್10 ರವೀಂದ್ರನಗರ, ವಾರ್ಡ್11 ಬಸವನಗುಡಿ, ವಾರ್ಡ್12 ಟ್ಯಾಂಕ್ ಮೊಹಲ್ಲಾಗೆ ನೇಮಕ ಮಾಡಲಾಗಿದೆ.
3) ಕಿರಣ್, ಜಂಟಿ ನಿರ್ದೇಶಕ, ಕೃಷಿ ಇಲಾಖೆ ಇವರನ್ನು ವಾರ್ಡ್13 ಅರಮನೆ ಪ್ರದೇಶ, ವಾರ್ಡ್ 22 ಗಾಂಧಿ ಬಜಾರ್ ಪಶ್ಚಿಮ, ವಾರ್ಡ್ 23 ಗಾಂಧಿ ಬಜಾರ್ ಪೂರ್ವಕ್ಕೆ ನೇಮಕ ಮಾಡಲಾಗಿದೆ.
4) ಗಣೇಶ್, ಜಂಟಿ ನಿರ್ದೇಶಕರು, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಇವರನ್ನು ವಾರ್ಡ್ 5 ಗುಡ್ಡೆಕಲ್ಕು, ವಾರ್ಡ್14 ವಿದ್ಯಾನಗರ, ವಾರ್ಡ್15 ಹರಿಗೆ, ವಾರ್ಡ್ 16 ಮಲವಗೊಪ್ಪಕ್ಕೆ ನೇಮಕ ಮಾಡಲಾಗಿದೆ.
5) ರಾಮಚಂದ್ರ ಮಡಿವಾಳ, ಉಪ ನಿರ್ದೇಶಕ, ತೋಟಗಾರಿಕೆ ಇಲಾಖೆ ಇವರನ್ನು ವಾರ್ಡ್ 33 ಸವಾಯಿಪಾಳ್ಯ, ವಾರ್ಡ್34 ವಿದ್ಯಾನಗರ, ವಾರ್ಡ್ 35 ಸೂಳೇಬೈಲಿಗೆ ನೇಮಕ ಮಾಡಲಾಗಿದೆ.
6) ಮೂಕಪ್ಪ ಕರಿಭೀಮಣ್ಣಮನವರ್, ಆಯುಕ್ತರು, ಸೂಡಾ ಇವರನ್ನು ವಾರ್ಡ್ 27 ಮಿಳಘಟ್ಟ, ವಾರ್ಡ್ 28 ಆರ್.ಎಂ.ಎಲ್.ನಗರ, ವಾರ್ಡ್ 29 ಆಜಾದ್ ನಗರ, ವಾರ್ಡ್ 30 ಸೀಗೆಹಟ್ಟಿಗೆ ನೇಮಕ ಮಾಡಲಾಗಿದೆ.
7) ನಾಗರಾಜ್ ಕೆ., ಉಪ ನಿರ್ದೇಶಕ, ಸಮಾಜ ಕಲ್ಯಾಣ ಇಲಾಖೆ ಇವರನ್ನು ವಾರ್ಡ್ 24 ಕೆ.ಹೆಚ್.ಬಿ.ಗೋಪಾಳ, ವಾರ್ಡ್ 25 ಜೆ.ಪಿ.ನಗರ, ವಾರ್ಡ್ 31 ಗೋಪಿಶೆಟ್ಟಿಕೊಪ್ಪ ವಾರ್ಡ್ 32 ಟಿಪ್ಪುನಗರಕ್ಕೆ ನೇಮಕ ಮಾಡಲಾಗಿದೆ.
8) ಸದಾಶಿವಪ್ಪ, ಉಪ ನಿರ್ದೇಶಕ, ಪಶುಸಂಗೋಪನ ಇಲಾಖೆ ಇವರನ್ನು ವಾರ್ಡ್17 ಗೋಪಾಲಗೌಡ ಬಡಾವಣೆ, ವಾರ್ಡ್ 6 ಗಾಡಿಕೊಪ್ಪ, ವಾರ್ಡ್7 ಕಲ್ಲಹಳ್ಳಿಗೆ ನೇಮಕ ಮಾಡಲಾಗಿದೆ.
9) ಮಂಜುನಾಥಸ್ವಾಮಿ ಹೆಚ್.ಎಂ., ಕಾರ್ಯಪಾಲಕ ಅಭಿಯಂತರ, ಸಣ್ಣ ನೀರಾವರಿ ಇಲಾಖೆ ಇವರನ್ನು ವಾರ್ಡ್ 18 ವಿನೋಬನಗರ, ವಾರ್ಡ್ 19 ಶರಾವತಿ ನಗರ, ವಾರ್ಡ್ 21 ದುರ್ಗಿಗುಡಿ, ವಾರ್ಡ್ 26 ಅಶೋಕ ನಗರಕ್ಕೆ ನೇಮಕ ಮಾಡಲಾಗಿದೆ.
10) ರಮೇಶ್, ಕಾರ್ಯಪಾಲಕ ಅಭಿಯಂತರ, ಕರ್ನಾಟಕ ನಗರ ನೀರು ಸರಬರಾಜು ಇಲಾಖೆ ಇವರನ್ನು ವಾರ್ಡ್ 8 ಜೆ.ಪಿ.ಎನ್.ನಗರ, ವಾರ್ಡ್ 9 ಗಾಂಧಿ ನಗರ, ವಾರ್ಡ್ 20 ಹೊಸಮನೆ. ಹೀಗೆ ಹತ್ತು ಜನ ಅಧಿಕಾರಿಗಳನ್ನು ವಿಶೇಷ ಕಾರ್ಯನಿರ್ವಾಹಕ ಅಧಿಕಾರಿಗಳಾಗಿ ನೇಮಿಸಲಾಗಿದೆ.