ಕರ್ನಾಟಕ

karnataka

ETV Bharat / city

ಶೌಚಾಲಯ ನಿರ್ವಹಣೆಗೆ ಟೆಂಡರ್ ಕರೆಯುವುದನ್ನು ಕೈಬಿಡುವಂತೆ ಒತ್ತಾಯ

ಪಾಲಿಕೆ ವಾರ್ಡ್ ನಂಬರ್ 27 ರ ಮಿಳಘಟ್ಟ-ಬುದ್ಧ ನಗರದಲ್ಲಿರುವ ಶೌಚಾಲಯ ನಿರ್ವಹಣೆಗೆ ಟೆಂಡರ್ ಕರೆಯುವುದನ್ನು ಕೈಬಿಡುವಂತೆ ಒತ್ತಾಯಿಸಿ ಕರ್ನಾಟಕ ಕಟ್ಟಡ ಕಾರ್ಮಿಕರ ಸೇವಾ ಸಂಘದ‌ ವತಿಯಿಂದ ಮಹಾನಗರ ಪಾಲಿಕೆಗೆ ಮನವಿ ಸಲ್ಲಿಸಲಾಯಿತು.

Appeal to city Municipality, to stop the toilet management tenders
ಮಹಾನಗರ ಪಾಲಿಕೆಗೆ ಮನವಿ ಸಲ್ಲಿಸಿದ ಕರ್ನಾಟಕ ಕಟ್ಟಡ ಕಾರ್ಮಿಕರ ಸೇವಾ ಸಂಘ

By

Published : Feb 3, 2020, 7:33 PM IST

ಶಿವಮೊಗ್ಗ: ಪಾಲಿಕೆ ವಾರ್ಡ್ ನಂಬರ್ 27 ರ ಮಿಳಘಟ್ಟ-ಬುದ್ಧ ನಗರದಲ್ಲಿರುವ ಶೌಚಾಲಯ ನಿರ್ವಹಣೆಗೆ ಟೆಂಡರ್ ಕರೆಯುವುದನ್ನು ಕೈಬಿಡುವಂತೆ ಒತ್ತಾಯಿಸಿ ಕರ್ನಾಟಕ ಕಟ್ಟಡ ಕಾರ್ಮಿಕರ ಸೇವಾ ಸಂಘದ‌ ವತಿಯಿಂದ ಮಹಾನಗರ ಪಾಲಿಕೆಗೆ ಮನವಿ ಸಲ್ಲಿಸಲಾಯಿತು.

ಮಹಾನಗರ ಪಾಲಿಕೆಗೆ ಮನವಿ ಸಲ್ಲಿಸಿದ ಕರ್ನಾಟಕ ಕಟ್ಟಡ ಕಾರ್ಮಿಕರ ಸೇವಾ ಸಂಘ

ಕೆಎಸ್‍ಆರ್​ಟಿಸಿ ಬಸ್​ ನಿಲ್ದಾಣದ ಹಿಂಭಾಗದ ರಸ್ತೆಯಲ್ಲಿ ಮಹಾನಗರ ಪಾಲಿಕೆ ವತಿಯಿಂದ ಈ ಹಿಂದೆ ಶೌಚಾಲಯ ನಿರ್ಮಿಸಲಾಗಿದೆ. ಈ ಪ್ರದೇಶದಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡಕ್ಕೆ ಸೇರಿದ ಕೂಲಿ ಕಾರ್ಮಿಕರು ವಾಸಿಸುತ್ತಿದ್ದಾರೆ. ಸುಮಾರು 5 ಸಾವಿರ ಜನಸಂಖ್ಯೆ ಇಲ್ಲಿ ಇದ್ದು, ಸುಮಾರು 500 ಮನೆಗಳಿಗೆ ಶೌಚಾಲಯ ವ್ಯವಸ್ಥೆ ಇಲ್ಲ. ಹೀಗಾಗಿ ಇವರೆಲ್ಲರೂ ಸಾರ್ವಜನಿಕ ಶೌಚಾಲಯವನ್ನು ಅವಲಂಬಿಸಿದ್ದಾರೆ.

ಆದರೆ ಇದೀಗ ಶೌಚಾಲಯಕ್ಕೆ ಮಹಾನಗರ ಪಾಲಿಕೆ ಟೆಂಡರ್ ಕರೆದು ಆ ಮೂಲಕ ನಿರ್ವಹಣೆ ಮಾಡುವುದಾಗಿ ತಿಳಿದು ಬಂದಿದೆ. ಒಂದು ವೇಳೆ ಶೌಚಾಲಯ ಬಳಕೆಗೆ ಹಣ ನಿಗದಿಪಡಿಸಿದರೆ ಇಲ್ಲಿನ ಕಡು ಬಡವರಿಗೆ ಹಣ ನೀಡಿ, ಶೌಚಾಲಯ ಬಳಕೆ ಮಾಡುವುದು ಸಾಧ್ಯವಾಗುವುದಿಲ್ಲ. ಹೀಗಾಗಿ ಶೌಚಾಲಯ ಬಳಕೆಗೆ ಉಚಿತ ಅವಕಾಶ ಮಾಡಿ ಕೊಟ್ಟು ಅಲ್ಲಿನ ಬಡ ಕೂಲಿ ಕಾರ್ಮಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿ ಮನವಿ ಸಲ್ಲಿಸಿದರು.

ABOUT THE AUTHOR

...view details